ಧನ್ತೇರಸ್, ದೀಪಾವಳಿ ಹಬ್ಬಕ್ಕೆ ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಕರೆ ನೀಡಿದ ಮೋದಿ
ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಮತ್ತು ನಂತರ ಉತ್ಪನ್ನ ಅಥವಾ ತಯಾರಕರೊಂದಿಗೆ ಸೆಲ್ಫಿಯನ್ನು NaMo ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಮಾಡಿ. ನಿಮ್ಮ ಥ್ರೆಡ್‌ಗೆ ಸೇರಲು ಮತ್ತು ಸಕಾರಾತ್ಮಕ ಮನೋಭಾವವನ್ನು ಹರಡಲು ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಆಹ್ವಾನಿಸಿ" ಎಂದು ಪ್ರಧಾನಿ ಮೋದಿ ಹೇಳಿದರು.
ದೆಹಲಿ ನವೆಂಬರ್ 10: ಧನ್ತೇರಸ್ (ಧನ ತ್ರಯೋದಶಿ) ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಲು ಜನರನ್ನು ಒತ್ತಾಯಿಸುವ “ವೋಕಲ್ ಫಾರ್ ಲೋಕಲ್” (vocal for local) ಅಭಿಯಾನಕ್ಕೆ ಕರೆ ನೀಡಿದ್ದಾರೆ.140 ಕೋಟಿ ಭಾರತೀಯರ ಶ್ರಮದ ಬಗ್ಗೆ ಈ ದೀಪಾವಳಿಯನ್ನು (Diwali) ಆಚರಿಸಲು ಜನರನ್ನು ಕೇಳಿಕೊಂಡರು. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ ಟ್ವೀಟ್ಗೆ ಪ್ರತಿಕ್ರಿಯಿಸಿದ ಮೋದಿ “ಉದ್ಯಮಿಗಳ ಸೃಜನಶೀಲತೆ ಮತ್ತು ಪಟ್ಟುಬಿಡದ ಉತ್ಸಾಹದಿಂದಾಗಿ ನಾವು ಸ್ಥಳೀಯವಾಗಿ ಮತ್ತು ಮತ್ತಷ್ಟು ಭಾರತದ ಪ್ರಗತಿಗೆ ಕಾರಣವಾಗಿದ್ದೇವೆ. ಈ ಹಬ್ಬವು ಆತ್ಮನಿರ್ಭರ ಭಾರತಕ್ಕೆ ನಾಂದಿ ಹಾಡಲಿ! ಎಂದಿದ್ದಾರೆ.
ಕೆಲವು ದಿನಗಳ ಹಿಂದೆ, ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಲು ಮತ್ತು ಅದರೊಂದಿಗೆ ಸೆಲ್ಫಿ ಪೋಸ್ಟ್ ಮಾಡಲು ಪಿಎಂ ಮೋದಿ ಜನರನ್ನು ಕೇಳಿದ್ದರು. ಈ ದೀಪಾವಳಿಯಲ್ಲಿ, NaMo ಅಪ್ಲಿಕೇಶನ್‌ನಲ್ಲಿ #VocalForLocal ಥ್ರೆಡ್‌ಗಳೊಂದಿಗೆ ಭಾರತದ ಉದ್ಯಮಶೀಲತೆ ಮತ್ತು ಸೃಜನಶೀಲ ಮನೋಭಾವವನ್ನು ಆಚರಿಸೋಣ ಎಂದು ಅವರು ಬರೆದಿದ್ದಾರೆ.
ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಮತ್ತು ನಂತರ ಉತ್ಪನ್ನ ಅಥವಾ ತಯಾರಕರೊಂದಿಗೆ ಸೆಲ್ಫಿಯನ್ನು NaMo ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಮಾಡಿ. ನಿಮ್ಮ ಥ್ರೆಡ್‌ಗೆ ಸೇರಲು ಮತ್ತು ಸಕಾರಾತ್ಮಕ ಮನೋಭಾವವನ್ನು ಹರಡಲು ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಆಹ್ವಾನಿಸಿ” ಎಂದು ಪ್ರಧಾನಿ ಮೋದಿ ಹೇಳಿದರು.
मुझे बहुत संतोष है कि दीपावली के त्योहार पर जनकल्याण की हमारी योजनाओं से आज देश का हर घर रोशन है। #VocalForLocal https://t.co/yZFJDP5m58
— Narendra Modi (@narendramodi) November 10, 2023
ದೀಪಾವಳಿಯು ಸಂತೋಷದ ಸಂದರ್ಭವಾಗಿದೆ. ಮೋದಿ ಸರ್ಕಾರವು ನಮ್ಮ ಕೋಟ್ಯಂತರ ನಾಗರಿಕರ ಜೀವನವನ್ನು ಹೇಗೆ ಬೆಳಗಿಸಿದೆ ಮತ್ತು ಅದರ ವಿವಿಧ ಯೋಜನೆಗಳೊಂದಿಗೆ ಸಂತೋಷವನ್ನು ಹರಡಿದೆ ಎಂಬುದನ್ನು ನೋಡಲು ಈ ವಿಡಿಯೊ ನೋಡಿ ಎಂದು ಬೊಮ್ಮನ್ ಇರಾನಿ ಹೇಳುತ್ತಿರುವ ಜಾಹೀರಾತನ್ನು ಕೇಂದ್ರ ಸರ್ಕಾರ ಟ್ವೀಟ್ ಮಾಡಿದ್ದು, ಅದನ್ನು ಶೇರ್ ಮಾಡಿದ ಮೋದಿ ಇಂದು ದೀಪಾವಳಿ ಹಬ್ಬದಂದು ದೇಶದ ಪ್ರತಿಯೊಂದು ಮನೆಯೂ ನಮ್ಮ ಜನಕಲ್ಯಾಣ ಯೋಜನೆಗಳಿಂದ ಪ್ರಕಾಶಿಸುತ್ತಿರುವುದು ನನಗೆ ತುಂಬಾ ತೃಪ್ತಿ ತಂದಿದೆ ಎಂದಿದ್ದಾರೆ.
ಸ್ಥಳೀಯ ಪ್ರತಿಭೆಗಳನ್ನು ಬೆಂಬಲಿಸಲು, ಸಹ ಭಾರತೀಯರ ಸೃಜನಶೀಲತೆಯನ್ನು ಪ್ರೋತ್ಸಾಹಿಸಲು ಮತ್ತು ದೇಶದ ಸಂಪ್ರದಾಯಗಳನ್ನು ಪ್ರವರ್ಧಮಾನಕ್ಕೆ ತರಲು ಡಿಜಿಟಲ್ ಮಾಧ್ಯಮದ ಶಕ್ತಿಯನ್ನು ಬಳಸಬೇಕೆಂದು ಅವರು ಜನರನ್ನು ಒತ್ತಾಯಿಸಿದರು.
ಇದನ್ನೂ ಓದಿ: ಹಾಸನಾಂಬೆ ದರ್ಶನ ಪಡೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ; ಮತ್ತೊಮ್ಮೆ ಮೋದಿಯೇ ಪ್ರಧಾನಿ ಆಗಲೆಂದು ಪ್ರಾರ್ಥನೆ
ಏತನ್ಮಧ್ಯೆ, ಪ್ರಧಾನಮಂತ್ರಿಯವರು ಧನ್ತೇರಸ್ ಸಂದರ್ಭದಲ್ಲಿ ದೇಶದ ಜನರಿಗೆ ಶುಭ ಹಾರೈಸಿದರು., “ದೇಶದ ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ ಧನ್ ತೇರಸ್ ಶುಭಾಶಯಗಳು. ಇದು ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯ ಸಂಕೇತವಾದ ಹಬ್ಬವಾಗಿದೆ. ಧನ್ವಂತರಿಯ ಕೃಪೆಯಿಂದ ನೀವೆಲ್ಲರೂ ಯಾವಾಗಲೂ ಆರೋಗ್ಯ, ಸಮೃದ್ಧ ಮತ್ತು ಸಂತೋಷದಿಂದ ಇರಬೇಕೆಂದು ನಾನು ಬಯಸುತ್ತೇನೆ. ಅದರಿಂದ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಹೊಸ ಶಕ್ತಿಯನ್ನು ಪಡೆಯುತ್ತದೆ ಎಂದಿದ್ದಾರೆ.
The #VocalForLocal movement is getting great momentum across the country. pic.twitter.com/9lcoGbAvoi
— Narendra Modi (@narendramodi) November 6, 2023
ಜನಪ್ರಿಯ ಟಿವಿ ಶೋ “ಅನುಪಮಾ” ಒಳಗೊಂಡ ಜಾಹೀರಾತನ್ನು ಕೂಡಾ ಮೋದಿ ಶೇರ್ ಮಾಡಿದ್ದಾರೆ. ಜಾಹೀರಾತಿನಲ್ಲಿ ರೂಪಾಲಿ ಗಂಗೂಲಿ ಮತ್ತು ಗೌರವ್ ಖನ್ನಾ ನಟಿಸಿದ್ದಾರೆ. ಈ ಜಾಹೀರಾತಿನಲ್ಲಿ, ಗಂಗೂಲಿ ಮತ್ತು ಖನ್ನಾ ಅವರು ಸರಣಿಯಿಂದ ತಮ್ಮ ಪಾತ್ರಗಳನ್ನು ಪುನರಾವರ್ತಿಸುತ್ತಾರೆ, ಆದರೆ ಈ ಸಮಯದಲ್ಲಿ, ಅವರು ಯಾವಾಗಲೂ ದೊಡ್ಡ ಬ್ರಾಂಡ್ ಬದಲು ಬದಲು ಸ್ಥಳೀಯ ಬ್ರ್ಯಾಂಡ್‌ಗಳನ್ನು ಬೆಂಬಲಿಸಲು ಜನರನ್ನು ಪ್ರೋತ್ಸಾಹಿಸುತ್ತಾರೆ. ಗಂಗೂಲಿ ನಂತರ ತನ್ನ ಫೋನ್‌ನಲ್ಲಿ ಚಿತ್ರಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ “VocalForLocal” ಎಂದು ಹೇಳುತ್ತಿರುವುದನ್ನು ಕಾಣಬಹುದು.
When we buy one local product, we spread happiness amongst so many of our own people who have been a part of its journey… A beautiful initiative by our PM Shri @NarendraModi. This Diwali let’s pledge to go #VocalForLocal@PMOIndia pic.twitter.com/p3Gx5WwMD6
— Jackie Shroff (@bindasbhidu) November 7, 2023
ಬಾಲಿವುಡ್ ನಟ ಜಾಕಿ ಶ್ರಾಫ್ ಕೂಡಾ ವೋಕಲ್ ಫಾರ್ ಲೋಕಲ್ ಕರೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.“ನಾವು ಒಂದು ಸ್ಥಳೀಯ ಉತ್ಪನ್ನವನ್ನು ಖರೀದಿಸಿದಾಗ, ಅದರ ಪ್ರಯಾಣದ ಭಾಗವಾಗಿರುವ ನಮ್ಮ ಸ್ವಂತ ಜನರಲ್ಲಿ ನಾವು ಸಂತೋಷವನ್ನು ಹರಡುತ್ತೇವೆ. ಇದುನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಒಂದು ಸುಂದರ ಉಪಕ್ರಮ. ಈ ದೀಪಾವಳಿಯಲ್ಲಿ #VocalForLocal ಬಳಸಲು ಪ್ರತಿಜ್ಞೆ ಮಾಡೋಣ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Fri, 10 November 23