ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾತ್ರ ಭಾರತ ವಿಶ್ವಕಪ್ ಗೆದ್ದಿದೆ: ಕಾಂಗ್ರೆಸ್ ಬೆಂಬಲಿಗ
ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾತ್ರ ಭಾರತ ವಿಶ್ವಕಪ್(WorldCup) ಗೆದ್ದಿದೆ ಎಂದು ಕಾಂಗ್ರೆಸ್ ಬೆಂಬಲಿಗ ಆಶಿಶ್ ಸಿಂಗ್ ಎಂಬುವವರು ಟ್ವಿಟ್ಟರ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಾತ್ರ ಭಾರತವು ವಿಶ್ವಕಪ್ ಗೆದ್ದಿದೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದೇ ಐಸಿಸಿ ಟ್ರೋಫಿಯನ್ನು ಭಾರತ ಗೆದ್ದಿಲ್ಲ ಎನ್ನುವುದನ್ನು ಬರೆಯಲಾಗಿದೆ. ಅದರ ಜತೆಗೆ ವರ್ಷ ಹಾಗೂ ವಿಶ್ವಕಪ್ನಲ್ಲಿ ಸೋಲು, ಗೆಲುವು ಎರಡನ್ನೂ ನೀಡಲಾಗಿದೆ.
ದೇಶದಲ್ಲಿ ಕಾಂಗ್ರೆಸ್(Congress) ಅಧಿಕಾರದಲ್ಲಿದ್ದಾಗ ಮಾತ್ರ ಭಾರತ ವಿಶ್ವಕಪ್(WorldCup) ಗೆದ್ದಿದೆ ಎಂದು ಕಾಂಗ್ರೆಸ್ ಬೆಂಬಲಿಗ ಆಶಿಶ್ ಸಿಂಗ್(Ashish Singh) ಎಂಬುವವರು ಟ್ವಿಟ್ಟರ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಾತ್ರ ಭಾರತವು ವಿಶ್ವಕಪ್ ಗೆದ್ದಿದೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದೇ ಐಸಿಸಿ ಟ್ರೋಫಿಯನ್ನು ಭಾರತ ಗೆದ್ದಿಲ್ಲ ಎನ್ನುವುದನ್ನು ಬರೆಯಲಾಗಿದೆ. ಅದರ ಜತೆಗೆ ವರ್ಷ ಹಾಗೂ ವಿಶ್ವಕಪ್ನಲ್ಲಿ ಸೋಲು, ಗೆಲುವು ಎರಡನ್ನೂ ನೀಡಲಾಗಿದೆ.
ಈ ಮೂಲಕ ಕ್ರಿಕೆಟ್‌ಗೆ ಹೊಸ ರಾಜಕೀಯ ಲೇಪನ ಶುರುವಾಗಿದೆ. ಮೋದಿ ಹೆಸರಿನ ಕ್ರೀಡಾಂಗಣದಲ್ಲಿ ಭಾರತಕ್ಕೆ ಸೋಲು, ಇದು ಇಂಡಿಯಾ ಒಕ್ಕೂಟದ ಗೆಲುವಿನ ಮುನ್ಸೂಚನೆ ಎಂದೆಲ್ಲ ಕೆಲವರು ಪೋಸ್ಟ್ ಹಾಕಿದ್ದರು. ಈಗ ಆಶಿಶ್ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಇಂತಹದೊಂದು ಕಾಕತಾಳೀಯ ಘಟನೆಗೆ ರಾಜಕೀಯ ಬಣ್ಣ ನೀಡಿದ್ದಾರೆ.
ಭಾರತವು ಮೊದಲ ಬಾರಿಗೆ ಕಪಿಲ್ ದೇವ್ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ, ಇಂದಿರಾ ಗಾಂಧಿ ಪ್ರಧಾನಿ ಆಗಿದ್ದರು. ಅದಾದ ಬಳಿಕ ಭಾರತವು ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿಯೂ ಫೈನಲ್‌ನಲ್ಲಿ ಸೋತಿತ್ತು. ನಂತರ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಟಿ20 ಹಾಗೂ ಏಕದಿನ ವಿಶ್ವಕಪ್‌ನ್ನು ಭಾರತ ಗೆದ್ದಿತು. ಇದರ ಜತೆಗೆ ಚಾಂಪಿಯನ್ಸ್ ಟ್ರೋಫಿ ಕೂಡ ಭಾರತದ ಪಾಲಾಯಿತು.
ಮತ್ತಷ್ಟು ಓದಿ: ಟೀಂ ಇಂಡಿಯಾ ಆಟಗಾರರನ್ನು ಭೇಟಿಯಾಗಿ ನೈತಿಕ ಸ್ಥೈರ್ಯ ತುಂಬಿದ ಪ್ರಧಾನಿ ಮೋದಿ
ಆದರೆ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಯಾವುದೇ ಐಸಿಸಿ ಟ್ರೋಫಿಯನ್ನು ಭಾರತ ಗೆದ್ದಿಲ್ಲ ಎಂದು ಅವರು ಹೇಳಿದ್ದಾರೆ. ಆ ಪಟ್ಟಿಯಲ್ಲಿ ಏಳು ಐಸಿಸಿ ಟೂರ್ನಿಯನ್ನು ಹೆಸರಿಸಿದ್ದಾರೆ. ಅಂದ್ಹಾಗೆ ಅವರು ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ್ನು ಸೇರಿಸಿಲ್ಲ.
ಆಶಿಶ್ ಟ್ವೀಟ್
Prime Minister Indira Gandhi
1983 ICC World Cup : 🏆 WON
Prime Minister Dr. Manmohan Singh
2007 T20 World Cup : 🏆 WON 2011 ODI World Cup : 🏆 WON 2013 Champions Cup :🏆 WON
Prime Minister Narendra Modi
2014 T20 World Cup : LOST 2015 ODI World Cup : LOST 2016 T20 World Cup :…
— Ashish Singh (@AshishSinghKiJi) November 19, 2023
ಪ್ರಧಾನಿ ಇಂದಿರಾ ಗಾಂಧಿ ಅವರ ಅವಧಿ
1993 ಐಸಿಸಿ ವಿಶ್ವಕಪ್-ಗೆಲುವು ಪ್ರಧಾನಿ ಡಾ. ಮನ್ಮೋಹನ್ ಸಿಂಗ್ 2007 ಟಿ20 ವಿಶ್ವಕಪ್-ಗೆಲುವು 2011 ಒಡಿಐ ವಿಶ್ವಕಪ್-ಗೆಲುವು 2013 ಚಾಂಪಿಯನ್ಸ್ ಟ್ರೋಫಿ- ಗೆಲುವು
ಪ್ರಧಾನಿ ನರೇಂದ್ರ ಮೋದಿ ಅವಧಿ
2014ರ ಟಿ20 ವಿಶ್ವಕಪ್-ಸೋಲು 2015ರ ಒಡಿಐ ವಿಶ್ವಕಪ್- ಸೋಲು 2016ರ ಟಿ20 ವಿಶ್ವಕಪ್- ಸೋಲು 2017ರ ಚಾಂಪಿಯನ್ಸ್ ಕಪ್- ಸೋಲು 2019ರ ಒಡಿಐ ವಿಶ್ವಕಪ್ -ಸೋಲು 2022ರ ಟಿ20 ವಿಶ್ವಕಪ್ -ಸೋಲು 2023ರ ಒಡಿಐ ವಿಶ್ವಕಪ್- ಸೋಲು
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ