ಅಯೋಧ್ಯೆಯ ರಾಮಮಂದಿರದಲ್ಲಿ ಅರ್ಚಕರಿಗಾಗಿ ಪರೀಕ್ಷೆ, ಸಂದರ್ಶನ, ದಿನಕ್ಕೆ ಐದು ಬಾರಿ ನಡೆಯಲಿದೆ ಆರತಿ
ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಜನವರಿ 22ಕ್ಕೆ ನೂತನ ರಾಮಮಂದಿರದಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪನ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ರಾಮಮಂದಿರ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಮಧ್ಯೆ ನೂತನ ಮಂದಿರದಲ್ಲಿ ಪೂಜಾ ನೀತಿ ಸಂಹಿತೆ ಹೇಗಿರಬೇಕು ಎಂಬ ಬಗ್ಗೆ ನಿಯಮಗಳನ್ನು ರೂಪಿಸಲಾಗುತ್ತಿದೆ.
ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಜನವರಿ 22ಕ್ಕೆ ನೂತನ ರಾಮಮಂದಿರದಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪನ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ರಾಮಮಂದಿರ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಮಧ್ಯೆ ನೂತನ ಮಂದಿರದಲ್ಲಿ ಪೂಜಾ ನೀತಿ ಸಂಹಿತೆ ಹೇಗಿರಬೇಕು ಎಂಬ ಬಗ್ಗೆ ನಿಯಮಗಳನ್ನು ರೂಪಿಸಲಾಗುತ್ತಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮಮಂದಿರದಲ್ಲಿ ಮುಂದೆ ನಡೆಯಬೇಕಾದ ಪೂಜೆಗೆ ನಿಯಮಗಳು, ನೀತಿ ಸಂಹಿತೆ, ದಿನಚರಿ ಸಿದ್ಧಪಡಿಸುತ್ತಿದೆ. ನೀತಿ ನಿಯಮಗಳನ್ನು ರೂಪಿಸಲೆಂದೆ ರಚಿಸಲಾಗಿರುವ ಧಾರ್ಮಿಕ ಸಮಿತಿಯ ಎರಡು ದಿನನಗಳ ಸಭೆ ಪೂರ್ಣಗೊಂಡಿದೆ. ಸಭೆಯಲ್ಲಿ ನಿಯಮಗಳ ಕುರಿತು ಸದಸ್ಯರು ಗಂಟೆಗಟ್ಟಲೆ ಚಿಂತನ ಮಂಥನ ನಡೆಸಿದ್ದಾರೆ. ಹೊಸ ರಾಮಮಂದಿರದಲ್ಲಿ ಐದು ಬಾರಿ ರಾಮಲಲ್ಲಾ ಮುಂದೆ ಆರತಿಯನ್ನು ನೆರವೇರಿಸಲು ನಿರ್ಧರಿಸಲಾಗಿದೆ.
ಇತರ ಪೂಜೆಯ ನಿಯಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ನೂತನ ದೇವಸ್ಥಾನದಲ್ಲಿ ಪೂಜಾ ವಿಧಾನ ರಾಮನಂದಿಯ ಸಂಪ್ರದಾಯದಂತೆ ಇರಲಿದೆ. ಪೂಜಾ ವಿಧಿವಿಧಾನಗಳು ಅಲಂಕಾರ, ಹಬ್ಬ ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ನೈವೇದ್ಯ, ಅಲಂಕಾರ ಹೇಗಿರಬೇಕು ಎಲ್ಲವನ್ನೂ ಚರ್ಚಿಸಲಾಗಿದೆ. ಪ್ರತಿ ತಿಂಗಳ ಏಕಾದಶಿಯಂದು ಶ್ರೀರಾಮ ದೇವರಿಗೆ ಯಾವ ರೀತಿಯ ಆಹಾರವನ್ನು ನೈವೇದ್ಯ ಮಾಡಬೇಕು ಎಂಬುದರ ಬಗ್ಗೆಯೂ ಚಿಂತನೆ ನಡೆಸಲಾಗಿದೆ.
ಮತ್ತಷ್ಟು ಓದಿ: Ayodhya: ಅಯೋಧ್ಯೆಯಲ್ಲಿ ಶ್ರೀರಾಮ ಮಹಾಮಸ್ತಕಾಭಿಷೇಕದ ಸಮಯ ನಿಗದಿ
ಇನ್ನು ಮಕರ ಸಂಕ್ರಾಂತಿ, ಹೋಳಿ, ರಾಮನವಮಿ, ಕಾರ್ತಿಕ ಪರಿಕ್ರಮ ಮುಂತಾದ ಹಬ್ಬಗಳನ್ನು ಹೇಗೆ ಮತ್ತು ಯಾವ ರೂಪದಲ್ಲಿ ಆಚರಿಸಬೇಕು ಎಂಬುದಕ್ಕೆ ನೀತಿ ಸಂಹಿತೆ ರೂಪಿಸಲಾಗುತ್ತಿದೆ. ಕಳೆದ ಎರಡು ದಿನಗಳಿಂದ ನಡೆದ ಸಭೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಖಜಾಂಚಿ ಗೋವಿಂದ್ ದೇವ್ ಗಿರಿ, ಪೇಜಾವರ ಶ್ರೀ, ಮಹಾಂತ್ ಮಿಥಿಲೇಶ್ ನಂದಿನಿ ಶರಣ್, ಮಹಂತ್ ಡಾ.ರಮಾನಂದದಾಸ್ ಉಪಸ್ಥಿತಿಯಲ್ಲಿ ನೀತಿ ನಿಯಮ ರೂಪಿಸಲಾಗುತ್ತಿದೆ.
ಅರ್ಚಕರ ಹುದ್ದೆಗೆ 50 ವೇದ ವಿದ್ವಾಂಸರ ನೇಮಕಕ್ಕೆ ಸಂದರ್ಶನ ನೂತನ ಮಂದಿರದಲ್ಲಿ ಪೂಜೆಗೆ ತರಬೇತಿ ಪಡೆದ ಅರ್ಚಕರನ್ನು ನೇಮಿಸಲು ಟ್ರಸ್ಟ್ ನಿರ್ಧರಿಸಿದೆ. ಇದಕ್ಕಾಗಿ ಟ್ರಸ್ಟ್ ಅರ್ಚಕರ ಹುದ್ದೆಗಾಗಿ ಅರ್ಜಿ ಆಹ್ವಾನಿಸಿತ್ತು. ಅಕ್ಟೋಬರ್ 31ರವರೆಗೆ ಎರಡು ಸಾವಿರ ವೈದಿಕರು ಅರ್ಜಿ ಸಲ್ಲಿಸಿದ್ದಾರೆ. ಭಾನುವಾರದಿಂದ ಅವರ ಸಂದರ್ಶನವೂ ಆರಂಭವಾಗಿದೆ. ಇಲ್ಲಿಯವರೆಗೆ 115 ವೈದಿಕ ಪಂಡಿತರನ್ನು ಸಂದರ್ಶಿಸಲಾಗಿದೆ. ಸಂದರ್ಶನದಲ್ಲಿ ಸುಮಾರು 50 ಅರ್ಚಕರನ್ನು ಆಯ್ಕೆ ಮಾಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ. ಸಂದರ್ಶನದ ನಂತರ ಪರೀಕ್ಷೆ ಇರಲಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಅರ್ಚಕರಾಗಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅರ್ಚಕರಿಗೆ ಡಿಸೆಂಬರ್‌ನಿಂದ ತರಬೇತಿ ಆರಂಭವಾಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ