AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ayodhya: ಅಯೋಧ್ಯೆಯಲ್ಲಿ ಶ್ರೀರಾಮ ಮಹಾಮಸ್ತಕಾಭಿಷೇಕದ ಸಮಯ ನಿಗದಿ

ಅಯೋಧ್ಯೆ(Ayodhya)ಯ ರಾಮಮಂದಿರ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ‌ ತಲುಪುತ್ತಿದೆ. ಜನವರಿ 22ರಂದು ರಾಮಮಂದಿರ ಉದ್ಘಾಟನೆ ದಿನಾಂಕ ನಿಗದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಭಿಜಿತ್ ಮುಹೂರ್ತ ಮೃಗಶಿರಾ ನಕ್ಷತ್ರದಲ್ಲಿ ಮಧ್ಯಾಹ್ನ 12:20 ಕ್ಕೆ ರಾಮಲಲ್ಲಾ ಮಹಾಮಸ್ತಕಾಭಿಷೇಕವನ್ನು ನೆರವೇರಿಸಲಿದ್ದಾರೆ.

Ayodhya: ಅಯೋಧ್ಯೆಯಲ್ಲಿ ಶ್ರೀರಾಮ ಮಹಾಮಸ್ತಕಾಭಿಷೇಕದ ಸಮಯ ನಿಗದಿ
ಅಯೋಧ್ಯೆ
ಹರೀಶ್ ಜಿ.ಆರ್​. ನವದೆಹಲಿ
| Updated By: ನಯನಾ ರಾಜೀವ್|

Updated on: Nov 20, 2023 | 12:12 PM

Share

ಅಯೋಧ್ಯೆ(Ayodhya)ಯ ರಾಮಮಂದಿರ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ‌ ತಲುಪುತ್ತಿದೆ. ಜನವರಿ 22ರಂದು ರಾಮಮಂದಿರ ಉದ್ಘಾಟನೆ ದಿನಾಂಕ ನಿಗದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಭಿಜಿತ್ ಮುಹೂರ್ತ ಮೃಗಶಿರಾ ನಕ್ಷತ್ರದಲ್ಲಿ ಮಧ್ಯಾಹ್ನ 12:20 ಕ್ಕೆ ರಾಮಲಲ್ಲಾ ಮಹಾಮಸ್ತಕಾಭಿಷೇಕವನ್ನು ನೆರವೇರಿಸಲಿದ್ದಾರೆ.

ಈ ಕಾರ್ಯಕ್ಕೆ ಅಂತಾರಾಷ್ಟ್ರೀಯ ರೂಪ ನೀಡಲು ತಯಾರಿ ನಡದಿದೆ. ಸಮಾರಂಭವನ್ನು ನಾಲ್ಕು ಹಂತಗಳಾಗಿ ವಿಂಗಡಿಸಿ ಸಿದ್ಧತೆಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.

ಮೊದಲ ಹಂತವು ರಾಮಲಲ್ಲಾ ಪ್ರತಿಷ್ಠಾಪನೆ ತಯಾರಿ ಬಗ್ಗೆ ಡಿಸೆಂಬರ್ 20ರಂದು ಸಭೆ ನಡೆಲಾಗಿದೆ. ಇದರಲ್ಲಿ ಕಾರ್ಯ ಕ್ರಮದ ರೂಪುರೇಷೆ ಸಿದ್ಧಪಡಿಸಲಾಗುತ್ತದೆ. ಇದಕ್ಕಾಗಿ ಚಾಲನಾ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ತಲಾ 10 ಜನರ ಗುಂಪು ರಚಿಸಲು ಒಪ್ಪಿಗೆ ನೀಡಲಾಗಿದೆ.

ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಸಮಿತಿಗಳಲ್ಲಿ ಮಂದಿರ ಹೋರಾಟದಲ್ಲಿ ಭಾಗಿಯಾದ ಕರಸೇವಕರನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಗದೆ. ಗುಂಪುಗಳು 250 ಸ್ಥಳಗಳಲ್ಲಿ ಸಭೆಗಳನ್ನು ನಡೆಸು ಕಾರ್ಯಯೋಜನೆ ರೂಪಿಸಲಾಗಿದೆ. ಕಾರ್ಯದಲ್ಲಿ ಹೆಚ್ಚು ಹೆಚ್ಚು ಜನರನ್ನು ತೊಡಗಿಸಿಕೊಳ್ಳಲು ಮನವಿ ಸಮಿತಿಗಳು ಮನವಿ ಮಾಡಲಿವೆ. ಎರಡನೇ ಹಂತ ಜನವರಿ 1ರಿಂದ ಆರಂಭವಾಗಲಿದೆ.

ಮತ್ತಷ್ಟು ಓದಿ: ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಿರುವ ಬಾಲರಾಮನ ಪ್ರತಿಮೆ ನಿರ್ಮಾಣವಾಗಿದ್ದು ಎಲ್ಲಿ ಗೊತ್ತಾ?

ಇದರಲ್ಲಿ ಮನೆ,ಮನೆಗೆ ಸಂಪರ್ಕ ಯೋಜನೆಯಡಿ 10 ಕೋಟಿ ಕುಟುಂಬಗಳಲ್ಲಿ ತಲುಪವ ಗುರಿ ಹೊಂದಲಾಗಿದೆ. ಅಕ್ಷತೆ, ರಾಮಲಲ್ಲ ಮೂರ್ತಿ ಚಿತ್ರ ಹಾಗೂ ಕರಪತ್ರವನ್ನು 10 ಕೋಟಿ ಕುಟುಂಬಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಉದ್ಘಾಟನೆ ದಿನದಂದು ಮನೆಗಳಲ್ಲಿ ದೀಪೋತ್ಸವ ಆಚರಣೆಗೆ ಮನವಿ ಮಾಡಲಿದ್ದಾರೆ.

ಜನವರಿ 22ರಂದು ಅಂದರೆ ರಾಮಲಲ್ಲಾ ಪ್ರತಿಷ್ಠಾಪನಾ ದಿನ ಮೂರನೇ ಹಂತವಾಗಿದೆ. ಅಂದು ಇಡೀ ದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡುವುದಾಗಿದೆ. ಮನೆಮನೆಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯುವಂತಹ ವಾತಾವರಣ ನಿರ್ಮಾಣವಾಗಲಿದೆ. ನಾಲ್ಕನೇ ಹಂತದಲ್ಲಿ ದೇಶಾದ್ಯಂತ ಅಯೋಧ್ಯೆಗೆ ಬರುವ ಭಕ್ತಾದಿಗಳಿಗೆ ರಾಮಲಲ್ಲಾ ದರ್ಶನ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಈ ಹಂತವು ಗಣರಾಜ್ಯೋತ್ಸವ ದಿನ ಜನವರಿ 26ಕ್ಕೆ ಪ್ರಾರಂಭವಾಗುತ್ತದೆ. ಸುಮಾರು ಒಂದು ತಿಂಗಳ ಕಾಲ ಅಂದರೆ ಫೆಬ್ರವರಿ 22 ರವರೆಗೆ ಮುಂದುವರಿಯುತ್ತದೆ. ರಾಮಲಲ್ಲಾ ದರ್ಶನ ಯೋಜನೆ ಅಭಿಯಾನವನ್ನು ಪ್ರಾಂತ್ಯವಾರು ನಡೆಸಲು ಚಿಂತಿಸಲಾಗಿದೆ. ಜನವರಿ 31 ಮತ್ತು ಫೆಬ್ರವರಿ 01 ರಂದು ಅವಧ್ ಪ್ರಾಂತ್ಯದ ಭಕ್ತರಿಗೆ ದರ್ಶನ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ