Madikeri: ಬೆಟ್ಟದ ತುತ್ತತುದಿಯಲ್ಲಿ ಮಡಿಕೇರಿ ನಗರ, ಅಲ್ಲಿ ಸ್ಥಾಪನೆಗೆ ಸಿದ್ಧವಾಗಿದೆ ಸಾಲು ಮರದ ತಿಮ್ಮಕ್ಕ ಪಾರ್ಕ್! ಎನಿದರ ವಿಶೇಷತೆಗಳು?

| Updated By: ಸಾಧು ಶ್ರೀನಾಥ್​

Updated on: Jan 03, 2023 | 4:26 PM

Saalumarada Thimmakka Tree Park: ಮಡಿಕೇರಿ ಇರೋದೆ ಬೆಟ್ಟದ ತುತ್ತತುದಿಯಲ್ಲಿ. ಇದೀಗ ಇವೆಲ್ಲರದ ಜೊತೆ ಮಡಿಕೇರಿ ನಗರದ ಗದ್ದಿಗೆ ಬಳಿಯ ದಟ್ಟಾರಣ್ಯ ಪ್ರವಾಸಿಗರ ಹಾಟ್ ಸ್ಪಾಟ್​ ಆಗಲಿದೆ. ಅದಕ್ಕೆ ಸಾಲು ಮರದ ತಿಮ್ಮಕ್ಕ ಪಾರ್ಕ್ ಅಂತ ಹೆಸರಿಡಲಾಗಿದೆ

Madikeri: ಬೆಟ್ಟದ ತುತ್ತತುದಿಯಲ್ಲಿ ಮಡಿಕೇರಿ ನಗರ, ಅಲ್ಲಿ ಸ್ಥಾಪನೆಗೆ ಸಿದ್ಧವಾಗಿದೆ ಸಾಲು ಮರದ ತಿಮ್ಮಕ್ಕ ಪಾರ್ಕ್! ಎನಿದರ ವಿಶೇಷತೆಗಳು?
ಮಡಿಕೇರಿಯಲ್ಲಿ ಸ್ಥಾಪನೆಗೆ ಸಿದ್ಧವಾಗಿದೆ ಸಾಲು ಮರದ ತಿಮ್ಮಕ್ಕ ಪಾರ್ಕ್!
Follow us on

ಹೊಸ ವರ್ಷ 2023 ಆರಂಭವಾಗುತ್ತಲೇ ಕೊಡಗು ಜಿಲ್ಲೆಗೆ ಪ್ರವಾಸ ಬರುವವರ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಅದರ ಜೊತೆ ಪ್ರವಾಸಿ ತಾಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ತಾಣಗಳ ಪಟ್ಟಿಗೆ ಹೊಸ ಸೇರ್ಪಡೆಯೇ ಅರಣ್ಯ ಇಲಾಖೆ ಸ್ಥಾಪಿಸಿರುವ ಹೊಸ ಉದ್ಯಾನವನ. ಹೌದು ಮಡಿಕೇರಿ ಬೆಟ್ಟದ ಮೇಲಿನ ದಟ್ಟಾರಣ್ಯ ಇದೀಗ ಪ್ರವಾಸಿಗರ ಹಾಟ್ ಸ್ಪಾಟ್ ಆಗುವ ಎಲ್ಲಾ ಲಕ್ಷಣಗಳಿವೆ.. ಆದ್ರೆ ಈ ಉದ್ಯಾನವನ ಇನ್ನೂ ಉದ್ಘಾಟನೆಯ ಭಾಗ್ಯವನ್ನೇ ಕಂಡಿಲ್ಲ.

ಮಡಿಕೇರಿ ನಗರ (Madikeri) ಇರೋದೆ ಬೆಟ್ಟದ ತುತ್ತ ತುದಿಯಲ್ಲಿ. ಹಾಗಾಗಿ ಈ ನಗರವೇ ಪ್ರವಾಸಿಗರ ಪಾಲಿಗೆ ಹಾಟ್ ಸ್ಪಾಟ್​. ಇಲ್ಲಿನ ರಾಜಾಸೀಟ್​, ಗದ್ದಿಗೆ, ಓಂಕಾರೇಶ್ವರ ದೇವಸ್ಥಾನ, ಕೂರ್ಗ್ ವಿಲೇಜ್ ಗ್ರೇಟರ್ ರಾಜಾಸೀಟ್ ಇವೆಲ್ಲವೂ ಆಕರ್ಷಣೆಯ ಕೇಂದ್ರಗಳೆ (Tourism). ಇದೀಗ ಇವೆಲ್ಲರದ ಜೊತೆ ಮಡಿಕೇರಿ ನಗರದ ಗದ್ದಿಗೆ ಬಳಿಯ ದಟ್ಟಾರಣ್ಯ ಪ್ರವಾಸಿಗರ ಹಾಟ್ ಸ್ಪಾಟ್​ ಆಗಲಿದೆ. ಇಲ್ಲಿನ ದಟ್ಟ ನಿತ್ಯ ಹರಿದ್ವರ್ಣ ಕಾಡಿನ ಒಳಗೆ ಪಾರ್ಕ್​ ಒಂದನ್ನ (Karnangeri Betta) ನಿರ್ಮಿಸಲಾಗಿದ್ದು ಅದಕ್ಕೆ ಸಾಲು ಮರದ ತಿಮ್ಮಕ್ಕ ಪಾರ್ಕ್ ಅಂತ ಹೆಸರಿಡಲಾಗಿದೆ (Saalumarada Thimmakka Tree Park)

ವಿಶೇಷ ಅಂದ್ರೆ ಸೂರ್ಯನ ಕಿರಣವೂ ನೆಲಕ್ಕೆ ಬೀಳದಷ್ಟು ದಟ್ಟ ಕಾಡಿದು. ಈ ಕಾಡಿನ ಒಳಗೆ ಸಿಮೆಂಟ್​ನ ಕಾಲು ದಾರಿ ನಿರ್ಮಿಸಲಾಗಿದೆ. ಇದರ
ಒಳಗೆ ನಡೆಯುತ್ತಾ ಸಾಗಿದ್ರೆ ಸಿಗೋ ರೋಚಕ ಅನುಭವವೇ ಬೇರೆ. ನೈಸರ್ಗಿಕ ಕಾಡಿನೊಳಗೆ ಹಕ್ಕಿಗಳ ಚಿಲಿಪಿಲಿ ಹಾಡು ಕೇಳುತ್ತಾ ವಾಕ್ ಮಾಡಬೇಕು ಎಂಬು ಬಯಸುವವರಿಗೆ ಈ ಪಾರ್ಕ್​ ಬಹಳ ಇಷ್ಟವಾಗುತ್ತದೆ. ಸ್ಥಳೀಯರಿಗೂ ಕೂಡ ತಿಮ್ಮಕ್ಕ ಪಾರ್ಕ್​ ಹೊಸ ಅನುಭವ ನೀಡಿದೆ. ಇಡೀ ಮಡಿಕೇರಿ ನಗರದ ಸೌಂದರ್ಯವನ್ನು ಆಸ್ವಾದಿಸಬಹುದಾದ ಸ್ಥಳವಾಗಿ ಇದು ಗಮನ ಸೆಳೆದಿದೆ.

ಆದ್ರೆ ಈ ಪಾರ್ಕ್ ಈಗಾಗಲೇ ಉದ್ಘಾಟನೆಯಾಗಿದ್ರೂ ಇನ್ನು ಕಾಮಗಾರಿ ಸಂಪೂರ್ಣವಾಗಿಲ್ಲ. ಮಕ್ಕಳ ಪಾರ್ಕ್​ನ ಕೆಲವು ಭಾಗಗಳು ಮಾತ್ರ ಸಂಪೂರ್ಣವಾಗಿದೆ. ಮುಖ್ಯ ಗೇಟ್​ ದಾಟಿದಂತೆ ಬೃಹತ್ ಕಾಂಕ್ರಿಟ್ ರಸ್ತೆ ಬೆಟ್ಟದ ಮೇಲೆ ನಮ್ಮನ್ನು ಸ್ವಾಗತಿಸುತ್ತದೆ. ಇದರ ಪಕ್ಕದಲ್ಲೇ ಗಾಜಿನ ಮನೆಯೊಂದನ್ನ ನಿರ್ಮಾಣ ಮಾಡಲಾಗಿದ್ದು ಬಹಳ ಆಕರ್ಷಕವಾಗಿದೆ. ಮನೆಯಲ್ಲಿ ನಿಂತು ಪ್ರಕೃತಿಯ ವಿಹಂಗಮ ನೋಡವನ್ನು ಆಸ್ವಾದಿಸಬಹುದು.

ಇದನ್ನು ಕ್ಯಾಂಟೀನ್ ಮಾಡುವ ಯೋಜನೆಯೂ ಅರಣ್ಯ ಇಲಾಖೆಗಿದೆ. ಬಿಸಿಬಿಸಿ ಕಾಫಿ ಹಿರುತ್ತಾ ಇಲ್ಲಿ ಕುಳಿತು ಪ್ರಕೃತಿಯನ್ನ ಆಸ್ವಾದಿಸುವುದು ನಿಜಕ್ಕೂ ಖುಷಿ ಕೊಡಬಹುದು. ಇನ್ನು ಅರಣ್ಯದೊಳಗಿನ ಕಾಲು ದಾರಿಯಲ್ಲಿ ಸುಮಾರು ಒಂದು ಕಿಲೋ ಮೀಟರ್​ನಷ್ಟು ವಾಕ್ ಮಾಡಬಹುದು. ಅಲ್ಲಲ್ಲಿ ಸಿಮೆಂಟ್​ ಬೆಂಚ್​ ಹಾಕಲಾಗಿದ್ದು ಕಾಡಿನ ಮಧ್ಯೆ ಕುಳಿತು ವಿಹರಿಸಬಹುದಾಗಿದೆ. ಈ ಯೋಜನೆ ಸಂಪೂರ್ಣವಾಗಲು ಇನ್ನೂ ಕೆಲವು ತಿಂಗಳು ಬೇಕಾಗಿದ್ದು ಅದಾದ ಬಳಿಕ ಬಹಳ ಆಕರ್ಷಕವಾಗಿರಲಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿ ಎ. ಪೂವಯ್ಯ, ಡಿಎಫ್​ಒ, ಮಡಿಕೇರಿ.

ಅರಣ್ಯ ಇಲಾಖೆ ಯೋಜನೆ ಪ್ರಕಾರ ಈ ಪಾರ್ಕ್​ ಸಿದ್ಧಗೊಂಡರೆ ಬಹುಶಃ ಮಡಿಕೇರಿಯ ನಂಬರ್ 1 ಟೂರಿಸ್ಟ್​ ಸ್ಪಾಟ್​ ಆಗುವ ಎಲ್ಲಾ ಅವಕಾಶಗಳಿವೆ. ಆದ್ರೆ ಯೋಜನೆಗಳು ಹಳ್ಳ ಹಿಡಿಯಬಾರದಷ್ಟೆ ಎಂದು ನಾಗರಿಕರು ಹೇಳುತ್ತಾರೆ.

ವರದಿ: ಗೋಪಾಲ್ ಸೋಮಯ್ಯ, ಟಿವಿ 9, ಕೊಡಗು