ಮಡಿಕೇರಿ:‌ ನದಿಯಲ್ಲಿ ಸ್ನಾನ ಮಾಡ್ತಿದ್ದಾಗ ಎಂಟ್ರಿಕೊಟ್ಟ ಗಜಪಡೆ, ಎದ್ದುಬಿದ್ದು ಓಡಿದ ಯುವಕರು

Edited By:

Updated on: Dec 27, 2022 | 2:08 PM

ಇಬ್ಬರು ಯುವಕರು ತಮ್ಮ ಪಾಡಿಗೆ ಮಡಿಕೇರಿಯ ಪಯಸ್ವಿನಿ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ನೋಡನೋಡುತ್ತಿದ್ದಂತೆ ಆರು ಕಾಡಾನೆಗಳಿದ್ದ ಹಿಂಡೊಂದು ನದಿಗೆ ಲಗ್ಗೆ ಇಟ್ಟಿವೆ. ಮುಂದೇನಾಯ್ತು ನೋಡಿ.

ಮಡಿಕೇರಿ: ಪಯಸ್ವಿನಿ ನದಿ (Payaswini river)ಯಲ್ಲಿ ಯುವಕರು ಸ್ನಾನ ಮಾಡುವಾಗ ಏಕಾಏಕಿ ಕಾಡಾನೆಗಳು (Wild Elepgants) ಎಂಟ್ರಿ ಕೊಟ್ಟಿವೆ. ಇದನ್ನು ನೋಡಿದ ಯುವಕರು ಎದ್ದುಬಿದ್ದು ಓಡಿದ್ದಾರೆ. ಈ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕೊಯನಾಡು ಬಳಿ ನಡೆದಿದೆ. ಉನ್ನೈಸ್, ಲತೀಫ್ ಎಂಬವರು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಕಾಡಿನ ಒಳಗಿಂದ ಆರು ಕಾಡಾನೆಗಳು ಲಗ್ಗೆ ಇಟ್ಟಿವೆ. ಜೀವ ಉಳಿಸಿಕೊಳ್ಳಲು ಯುವಕರು ಓಡಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ