ಮಡಿಕೇರಿ: ಚೇಲಾವರ ಜಲಪಾತಕ್ಕೆ ಬಿದ್ದು ಪ್ರವಾಸಿಗ ಸಾವು

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೇಲಾವರ ಜಲಪಾತಕ್ಕೆ ಬಿದ್ದು ಕೇರಳ ಮೂಲದ ಪ್ರವಾಸಿಗನೊಬ್ಬ ಸಾವನ್ನಪಪ್ಇದ ಘಟನೆ ನಡೆದಿದೆ. ಯುವಕ ಮುಳಗುತ್ತಿದ್ದಂತೆ ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಲಾಯಿತಾದರೂ, ರಶೀದ್​ನನ್ನು ಉಳಿಸಲಾಗಿಲ್ಲ. ಬಳಿಕ ಸ್ಥಳೀಯ ಈಜುಪಟುಗಳು ಹಾಗೂ ಮಡಿಕೇರಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

ಮಡಿಕೇರಿ: ಚೇಲಾವರ ಜಲಪಾತಕ್ಕೆ ಬಿದ್ದು ಪ್ರವಾಸಿಗ ಸಾವು
ಚೇಲಾವರ ಜಲಪಾತಕ್ಕೆ ಬಿದ್ದು ಪ್ರವಾಸಿಗ ಸಾವು
Edited By:

Updated on: Feb 04, 2024 | 5:05 PM

ಮಡಿಕೇರಿ, ಫೆ.4; ಜಲಪಾತದಲ್ಲಿ ಈಜಲೆಂದು ನೀರಿಗಿಳಿದ ಪ್ರವಾಸಿಯೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಮುಳಗಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ(Madikeri) ತಾಲ್ಲೂಕಿನ ಚೇಲಾವರ ಜಲಪಾತದಲ್ಲಿ ಸಂಭವಿಸಿದೆ. ಕೇರಳ ರಾಜ್ಯದ ಮಟ್ಟನೂರು ನಿವಾಸಿ ರಶೀದ್ (27) ಮೃತ ಯುವಕ. ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರು ಮಟ್ಟನೂರಿನಿಂದ ಕೊಡಗು ಪ್ರವಾಸಕ್ಕೆ ಆಗಮಿಸಿದ್ದರು. ಬೆಳಗ್ಗೆ ಚೇಲಾವರ ಜಲಪಾತಕ್ಕೆ ತೆರಳಿದ್ದಾರೆ. ಈ ಸಂದರ್ಭ ರಶೀದ್ ಈಜಲೆಂದು ನೀರಿಗಿಳಿದಿದ್ದಾನೆ. ಆದ್ರೆ, ಈಜು ಬಾರದ ರಶೀದ್ ನೀರಿನಲ್ಲಿ ಸಿಲುಕಿ ಮುಳುಗಿದ್ದಾನೆ.

ಇನ್ನು ಯುವಕ ಮುಳಗುತ್ತಿದ್ದಂತೆ ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಲಾಯಿತಾದರೂ, ರಶೀದ್​ನನ್ನು ಉಳಿಸಲಾಗಿಲ್ಲ. ಬಳಿಕ ಸ್ಥಳೀಯ ಈಜುಪಟುಗಳು ಹಾಗೂ ಮಡಿಕೇರಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಕುರಿತು ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ವೀಕೆಂಡ್ ಮೋಜು; ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಕ್ಕಿ ಬೆಂಗಳೂರಿನ ಪ್ರವಾಸಿಗ ಸಾವು

ಪ್ರವಾಸಿಗರಿಗೆ ಮೃತ್ಯುಕೂಪವಾಗುತ್ತಿದೆ ಚೇಲಾವರ

ಚೇಲಾವರ ಜಲಪಾತ ಮೇಲ್ನೋಟಕ್ಕೆ ಕಿರಿದಾಗಿದ್ದರೂ ಬಹಳಷ್ಟು ಅಪಾಯಕಾರಿಯಾಗಿದೆ. ಆದರೆ ಇದರ ಅರಿವಿಲ್ಲದೆ ನೀರಿಗಿಳಿಯುವ ಬಹಳಷ್ಟು ಪ್ರವಾಸಿಗರು ಮುಳುಗಿ ಸಾವನ್ನಪ್ಪುತ್ತಿದ್ದಾರೆ. 2023ರಲ್ಲೂ ಮೂವರು ಈ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಜಲಪಾತಕ್ಕೆ ಇಳಿಯದಂತೆ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದ್ದರೂ ಪ್ರವಾಸಿಗರು ಅದನ್ನು ನಿರ್ಲಕ್ಷಿಸಿ ನೀರಿಗಿಳಿದು ಅಪಾಯ ತಂದುಕೊಳ್ಳುತ್ತಿದ್ದಾರೆ. ಇಲ್ಲಿಗೆ ಶಾಶ್ವತವಾಗಿ ಭದ್ರತಾ ಸಿಬ್ಬಂದಿಯೊಬ್ಬರನ್ನು ನೇಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ