ನಾರಾಯಣ ಆಚಾರರ ಮನೆಯಲ್ಲಿ ಚಿನ್ನ ಸಿಕ್ಕಿಲ್ಲ, ಸುಳ್ಳು ಸುದ್ದಿ ನಂಬಬೇಡಿ: ಸೋಮಣ್ಣ

|

Updated on: Aug 11, 2020 | 7:00 PM

ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ವಾಸ್ತವ್ಯ ಹೂಡಿ ನೆರೆ ಪರಿಹಾರ ಕೆಲಸಗಳನ್ನು ನೋಡಿಕೊಳ್ಳುತ್ತಿರುವ ಸಚಿವ ವಿ ಸೋಮಣ್ಣ ಇಂದು ಟಿವಿ9ನೊಂದಿಗೆ ಮಾತಾಡಿ ಜಿಲ್ಲೆಯಲ್ಲಿನ ಪರಿಸ್ಥಿತಿ ಹಾಗೂ ತಲಕಾವೇರಿಯಲ್ಲಿ ಬ್ರಹ್ಮಗಿರಿಬೆಟ್ಟ ಕುಸಿತದಿಂದಾದ ದುರಂತದ ಬಗ್ಗೆ ವಿವರಿಸಿದರು. ರವಿವಾರದಂದು ಆನಂದ ತೀರ್ಥ ಅವರ ಮೃತದೇಹ ಪತ್ತೆಯಾದ ನಂತರ ನಾರಾಯಣ ಆಚಾರ್ ಅವರ ಬಗ್ಗೆ ಒಂದಿಷ್ಟು ಕುರುಹು ಸಿಕ್ಕಿತ್ತು. ಆನಂದರ ದೇಹ ದೊರೆತ ಸುಮಾರು ಎರಡು ಕಿಲೊಮೀಟರುಗಳಷ್ಟು ದೂರ ನಾಗತೀರ್ಥ ಎಂಬಲ್ಲಿ ನಾರಾಯಣ ಆಚಾರರ ದೇಹ ಸಿಕ್ಕಿದೆ, ಎಂದು ಸೋಮಣ್ಣ ಹೇಳಿದರು. […]

ನಾರಾಯಣ ಆಚಾರರ ಮನೆಯಲ್ಲಿ ಚಿನ್ನ ಸಿಕ್ಕಿಲ್ಲ, ಸುಳ್ಳು ಸುದ್ದಿ ನಂಬಬೇಡಿ: ಸೋಮಣ್ಣ
Follow us on

ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ವಾಸ್ತವ್ಯ ಹೂಡಿ ನೆರೆ ಪರಿಹಾರ ಕೆಲಸಗಳನ್ನು ನೋಡಿಕೊಳ್ಳುತ್ತಿರುವ ಸಚಿವ ವಿ ಸೋಮಣ್ಣ ಇಂದು ಟಿವಿ9ನೊಂದಿಗೆ ಮಾತಾಡಿ ಜಿಲ್ಲೆಯಲ್ಲಿನ ಪರಿಸ್ಥಿತಿ ಹಾಗೂ ತಲಕಾವೇರಿಯಲ್ಲಿ ಬ್ರಹ್ಮಗಿರಿಬೆಟ್ಟ ಕುಸಿತದಿಂದಾದ ದುರಂತದ ಬಗ್ಗೆ ವಿವರಿಸಿದರು.

ರವಿವಾರದಂದು ಆನಂದ ತೀರ್ಥ ಅವರ ಮೃತದೇಹ ಪತ್ತೆಯಾದ ನಂತರ ನಾರಾಯಣ ಆಚಾರ್ ಅವರ ಬಗ್ಗೆ ಒಂದಿಷ್ಟು ಕುರುಹು ಸಿಕ್ಕಿತ್ತು. ಆನಂದರ ದೇಹ ದೊರೆತ ಸುಮಾರು ಎರಡು ಕಿಲೊಮೀಟರುಗಳಷ್ಟು ದೂರ ನಾಗತೀರ್ಥ ಎಂಬಲ್ಲಿ ನಾರಾಯಣ ಆಚಾರರ ದೇಹ ಸಿಕ್ಕಿದೆ, ಎಂದು ಸೋಮಣ್ಣ ಹೇಳಿದರು.

ಆಚಾರರ ದೇಹ ಹುಡುಕುವಲ್ಲಿ ಎನ್.ಡಿ.ಆರ್.ಎಫ್ ತಂಡ ಪಟ್ಟ ಶ್ರಮ ಶ್ಲಾಘನೀಯ ಎಂದು ಸೋಮಣ್ಣ ತಂಡವನ್ನು ಕೊಂಡಾಡಿದರು.

ಇವತ್ತೇ ನಾರಾಯಣ ಆಚಾರ್ಯರ ಅಂತ್ಯ ಸಂಸ್ಕಾರ ನಡೆಯಲಿದೆ, ಕಾಣೆಯಾಗಿರುವ ಇತರ ಮೂವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ನಾರಾಯಣ ಆಚಾರ್ ಅವರ ಮನೆಯಲ್ಲಿ ಅಪಾರ ಚಿನ್ನ ಇದೆ ಅನ್ನೋದು ಊಹಾಪೋಹ. ಹಳೆ ನಾಣ್ಯಗಳು ಸಿಕ್ಕಿರೋದು ನಿಜ. ಅವರು ಸಾಮಾನ್ಯ ಜೀವನ ಮಾಡುತ್ತಿದ್ದರು, ಅವರ ಕುಟುಂಬ ತಂಬಾ ದುಖಃದಲ್ಲಿದೆ, ಸುಳ್ಳು ಆರೋಪಗಳು ಅವರಿಗೆ ಇನ್ನಷ್ಟು ನೋವುಂಟು ಮಾಡುತ್ತವೆ. ದಯವಿಟ್ಟು ಇಲ್ಲ ಸಲ್ಲದ ಅಪವಾದಗಳಿಗೆ ಕಿವಿಗೊಡಬೇಡಿ,” ಎಂದು ಸಚಿವರು ಹೇಳಿದರು.

ಬುಧವಾರ ಮತ್ತು ಗುರುವಾರ ಬೆಂಗಳೂರಿನಲ್ಲಿ ಕೊವಿಡ್ ಸಭೆ ನಿಗದಿಯಾಗಿರುವುದರಿಂದ ತಾನು ರಾಜಧಾನಿಗೆ ಮರಳತ್ತಿರುವ ಬಗ್ಗೆ ಹೇಳಿದ ಸಚಿವರು, ಶುಕ್ರವಾರವಾರದಂದು ಕೊಡಗಿಗೆ ವಾಪಸ್ಸಾಗುವುದಾಗಿ ಹೇಳಿದರು. ಅವರ ಅನುಪಸ್ಥಿತಿಯಲ್ಲಿ ಶಾಸಕ ಬೋಪಯ್ಯ ನೆರೆ ಪರಿಹಾರ ಕೆಲಸಗಳನ್ನು ನೋಡಿಕೊಳ್ಳುತ್ತಾರೆಂದು ಸಹ ಸೋಮಣ್ಣ ಟಿವಿ9ಗೆ ತಿಳಿಸಿದರು