ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರ ದುಷ್ಕೃತ್ಯ; ದೇವಸ್ಥಾನ ದೋಚಿದ್ದ ದುಷ್ಕರ್ಮಿಗಳು ಅರೆಸ್ಟ್

| Updated By: ಆಯೇಷಾ ಬಾನು

Updated on: Aug 24, 2024 | 12:32 PM

ಮಡಿಕೇರಿ ನಗರದ ಹೃದಯ ಭಾಗದಲ್ಲಿರುವ ಕೋಟೆ ಮಾರಿಯಮ್ಮ ದೇವಸ್ಥಾನ ಬಾಗಿಲು ಮುರಿದು ಹುಂಡಿ ಒಡೆದು 2.5 ಲಕ್ಷ ರೂ ನಗದು ಮತ್ತು ಚಿನ್ನಾಭರಣಗಳನ್ನ ದೋಚಲಾಗಿದ್ದು ಅಸ್ಸಾಂ ಮೂಲದ ಇಬ್ಬರು ಕಾರ್ಮಿಕರನ್ನು ಅರೆಸ್ಟ್​ ಮಾಡಲಾಗಿದೆ. ಬಂಧಿತರಿಂದ ಮೂರು ಗ್ರಾಮ್ ಚಿನ್ನ, 160 ಗ್ರಾಂ ಬೆಳ್ಳಿ ಹಾಗೂ 95 ಸಾವಿರ ರೂ ನಗದು ವಶಪಡಿಸಿಕೊಳ್ಳಲಾಗಿದೆ.

ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರ ದುಷ್ಕೃತ್ಯ; ದೇವಸ್ಥಾನ ದೋಚಿದ್ದ ದುಷ್ಕರ್ಮಿಗಳು ಅರೆಸ್ಟ್
ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರ ದುಷ್ಕೃತ್ಯ; ದೇವಸ್ಥಾನ ದೋಚಿದ ದುಷ್ಕರ್ಮಿಗಳು
Follow us on

ಮಡಿಕೇರಿ, ಆಗಸ್ಟ್​.24: ಕೊಡಗು ಜಿಲ್ಲೆಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಮಡಿಕೇರಿ ನಗರದ ಹೃದಯ ಭಾಗದಲ್ಲಿರುವ ದೇವಸ್ಥಾನವನ್ನೇ ಅಸ್ಸಾಂ ಮೂಲದ ಇಬ್ಬರು ಕಾರ್ಮಿಕರು ದೋಚಿದ್ದಾರೆ (Temple Theft). ಇದೇ ಆಗಸ್ಟ್​ 16 ರಂದು ನಗರದ ಕೋಟೆ ಮಾರಿಯಮ್ಮ ದೇವಸ್ಥಾನ ಬಾಗಿಲು ಮುರಿದು ಹುಂಡಿ ಒಡೆದು 2.5 ಲಕ್ಷ ರೂ ನಗದು ಮತ್ತು ಚಿನ್ನಾಭರಣಗಳನ್ನ ದೋಚಲಾಗಿತ್ತು. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನಾಧರಿಸಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಅಲ್ತಾಬ್ ಅಲಿ ಹಾಗೂ ಮೀರ್ ಹುಸೇನ್ ಬಂಧಿತ ಆರೋಪಿಗಳು.

ದುಷ್ಕರ್ಮಿಗಳು ಸಿಸಿಟಿವಿಯನ್ನ ಬೇರೆಡೆ ತಿರುಗಿಸಿ ಕೃತ್ಯವೆಸಗಲಾಗಿತ್ತು. ಪ್ರಕರಣದ ಬೆನ್ನು ಬಿದ್ದ ಮಡಿಕೇರಿ ನಗರ ಪೊಲೀಸರು ನಗರದ ಎಲ್ಲಾ ಆಯಾ ಕಟ್ಟಿನ ಸಿಸಿಟಿವಿಗಳನ್ನ ಪರಿಶೀಲಿಸಿ ತನಿಖೆ ನಡೆಸಿದ್ದರು. ಈ ಸಂದರ್ಭ ಇಬ್ಬರು ವ್ಯಕ್ತಿಗಳ ಮೇಲೆ ಶಂಕೆ ಬಂದ ಹಿನ್ನೆಲೆಯಲ್ಲಿ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬಯಲಾಗಿದೆ. ಅಸ್ಸಾಂ ಮೂಲದ ಅಲ್ತಾಬ್ ಅಲಿ ಹಾಗೂ ಮೀರ್ ಹುಸೇನ್ ಎಂಬ ಇಬ್ಬರು ಕಳ್ಳತನ ನಡೆಸಿದ್ದಾರೆ.

ಅಲ್ತಾಬ್ ಮೂರ್ನಾಡು ಸಮೀಪದ ಎಸ್ಟೇಟ್​ ಒಂದರಲ್ಲಿ ಕಾರ್ಮಿಕನಾಗಿದ್ದರೆ, ಮೀರ್ ಹುಸೇನ್ ಕಳ್ಳತನ ಮಾಡಲೆಂದೇ ಅಸ್ಸಾಂನಿಂದ ಇಲ್ಲಿಗೆ ಬಂದಿದ್ದ. ಬಂಧಿತರಿಂದ ಮೂರು ಗ್ರಾಮ್ ಚಿನ್ನ, 160 ಗ್ರಾಂ ಬೆಳ್ಳಿ ಹಾಗೂ 95 ಸಾವಿರ ರೂ ನಗದು ವಶಪಡಿಸಿಕೊಳ್ಳಲಾಗಿದೆ. ಅಸ್ಸಾಂ ನಿಂದ ಬರುವ ಕಾರ್ಮಿಕರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಈ ತರಹ ಅಪರಾಧಿ ಕೃತ್ಯಗಳಲ್ಲಿ ಕಾರ್ಮಿಕರು ಸಿಲುಕಿಕೊಂಡರೆ ಅಂತಹ ಎಸ್ಟೇಟ್ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದೆಂದು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆಗೆ ಆರ್ಥಿಕ ಸಂಕಷ್ಟ; ಅಧಿಕಾರಿಗಳ ಎಡವಟ್ಟಿಗೆ 20 ಕೋಟಿ ಠೇವಣಿಗೆ ಧಾರವಾಡ ಹೈಕೋರ್ಟ್​ ಆದೇಶ

ಫಾಲ್ಸ್ ನೋಡಲು ಬಂದಿದ್ದ ಟೆಕ್ಕಿ ಕಾಲು ಮುರಿತ

ಫಾಲ್ಸ್​​ ನೋಡಲು ಬಂದು ಟಿಕ್ಕಿ ಕಾಲುಮುರಿದುಕೊಂಡಿರುವ ಘಟನೆ, ಚಿಕ್ಕಬಳ್ಳಾಪುರ ತಾಲೂಕಿನ ಕೇತೇನಹಳ್ಳಿಯಲ್ಲಿ ನಡೆದಿದೆ. ಮುಂಬೈ ಮೂಲದ ಅರ್ಪಿತಾ ಕಾಲು ಮುರಿದುಕೊಂಡವರು. ಸ್ನೇಹಿತರ ಜತೆ ಫಾಲ್ಸ್​ಗೆ ಕಾಡು ದಾರಿಯಲ್ಲಿ ಹೋಗ್ತಿದ್ದಾಗ ಅರ್ಪಿತಾ ಜಾರಿಬಿದ್ದಿದ್ದಾರೆ. 2 ಕಿ.ಮೀ. ಸ್ಟ್ರೆಚರ್​ನಲ್ಲಿ ಟೆಕ್ಕಿ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಡಿಮೆ ಅಂಕ.. ವಿದ್ಯಾರ್ಥಿ ಮೇಲೆ ಶಿಕ್ಷಕ ಕ್ರೌರ್ಯ

ಗಣಿತ ವಿಷಯದಲ್ಲಿ ಕಡಿಮೆ ಅಂಕ ಪಡೆದಿದ್ದ ವಿದ್ಯಾರ್ಥಿಗೆ ಶಿಕ್ಷಕ ಮನಬಂದಂತೆ ಥಳಿಸಿದ್ದಾನೆ. ಯಾದಗಿರಿ ಜಿಲ್ಲೆ ಸೈದಾಪುರದ ಮಹಾವೀರ್ ಜೈನ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ಕೃತ್ಯವೆಸಗಿದ್ದಾನೆ. ನಾಲ್ಕನೇ ತರಗತಿಯ ಯುವರಾಜ್​ಗೆ ಶಿಕ್ಷಕ ಡೆಲ್ವೀಲ್ ಬೆನ್ನಿನ ಮೇಲೆ ಬಾಸುಂಡೆ ಬರುವಂತೆ ಥಳಿಸಿದ್ದಾನೆ. ಡೆಲ್ವೀನ್ ವಿರುದ್ಧ ಸೈದಾಪುರ ಠಾಣೆಯಲ್ಲಿ FIR ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:31 pm, Sat, 24 August 24