ವಿಕೃತ ಮನಸ್ಥಿತಿಯ ಯುವಕನನ್ನು ಮುದಾಸಿರ್ ಎಂದು ಗುರುತಿಸಲಾಗಿದ್ದು, ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ರೀಚಾರ್ಜ್ ಮಾಡಿಸಿಕೊಳ್ಳಲು ಅಂಗಡಿಗೆ ಬರುತ್ತಿದ್ದ ಮಹಿಳೆಯರ ನಂಬರ್ ಪಡೆದು ಅವರಿಗೆ ಅಶ್ಲೀಲ ಸಂದೇಶಗಳನ್ನು ಮುದಾಸಿರ್ ಕಳಿಸುತ್ತಿದ್ದ. ಫೇಸ್ಬುಕ್ನಲ್ಲೂ ನಕಲಿ ಖಾತೆ ತೆರೆದು ಮಹಿಳೆಯರಿಗೆ ಕೆಟ್ಟ ಕೆಟ್ಟ ಮೆಸೇಜುಗಳನ್ನು ಕಳಿಸುತ್ತಿದ್ದನೆನ್ನಲಾಗಿದೆ.
ಮುದಾಸಿರ್ನ ಕಾಟದಿಂದ ಬೇಸತ್ತ ನೊಂದ ಮಹಿಳೆಯರು ಕೊಡಗು ರಕ್ಷಣಾ ವೇದಿಕೆ ಕಾರ್ಯಕರ್ತರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಅವನನ್ನು ಒಂದು ಸ್ಥಳಕ್ಕೆ ಉಪಾಯದಿಂದ ಕರೆಸಿಕೊಂಡ ಕಾರ್ಯಕರ್ತರು ಅಟ್ಟಾಡಿಸಿ ಥಳಿಸಿ ನಂತರ ಪೊಲೀಸರಿಗೊಪ್ಪಿಸಿದರು.