80 ವರ್ಷ ವಯಸ್ಸಾಗಿರುವ ಬಿ.ಎಸ್. ಯಡಿಯೂರಪ್ಪಗೆ ಲಸಿಕೆ ಅಗತ್ಯವಿದೆ.. ರೈತರಿಗಲ್ಲ -ಕೋಡಿಹಳ್ಳಿ ಚಂದ್ರಶೇಖರ್
ಮೋದಿ ಮೊದಲ ಲಸಿಕೆ ಹಾಕಿಸಿಕೊಂಡು ತೋರಿಸಬೇಕಿತ್ತು. ಜೊತೆಗೆ, 80 ವರ್ಷ ವಯಸ್ಸಾಗಿರುವ ಬಿಎಸ್ವೈಗೆ ಲಸಿಕೆ ಅಗತ್ಯವಿದೆ. ಜನರು ಇವಾಗ ಲಸಿಕೆ ಹಾಕಿಸಿಕೊಂಡರೆ ಪ್ರಯೋಜನವೇನು? ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರ: ರೈತರಿಗೆ ಕೊರೊನಾ ಲಸಿಕೆ ಅಗತ್ಯವೇ ಇಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಕೊರೊನಾ ಸೋಂಕು ಬಂದು ಹೋದ್ಮೇಲೆ ವ್ಯಾಕ್ಸಿನ್ ಬಂದಿದೆ. ವ್ಯಾಕ್ಸಿನ್ ತಯಾರಿಕಾ ಕಂಪನಿಗೆ ಸರ್ಕಾರ ಲಾಭ ಮಾಡುತ್ತಿದೆ ಎಂದು ಚಂದ್ರಶೇಖರ್ ಹೇಳಿದರು.
‘ಮೋದಿ ಮೊದಲ ಲಸಿಕೆ ಹಾಕಿಸಿಕೊಂಡು ತೋರಿಸಬೇಕಿತ್ತು’
ಮೋದಿ ಮೊದಲ ಲಸಿಕೆ ಹಾಕಿಸಿಕೊಂಡು ತೋರಿಸಬೇಕಿತ್ತು. ಜೊತೆಗೆ, 80 ವರ್ಷ ವಯಸ್ಸಾಗಿರುವ, ಮುಖ್ಯಮಂತ್ರಿ ಯಡಿಯೂರಪ್ಪಗೆ ಲಸಿಕೆ ಅಗತ್ಯವಿದೆ. ಜನರು ಈವಾಗ ಲಸಿಕೆ ಹಾಕಿಸಿಕೊಂಡರೆ ಪ್ರಯೋಜನವೇನು? ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.