ನಮ್ಮ ಹಾಲು ನಮ್ಮ ಹಕ್ಕು: ವಿದೇಶಿ ಹಾಲು ಬೇಡ ಎಂದಿದ್ದೇಕೆ ಕೋಲಾರದ ರೈತರು?

|

Updated on: Oct 24, 2019 | 4:19 PM

ಕೋಲಾರ: ನಮ್ಮ ಹಾಲು ನಮ್ಮ ಹಕ್ಕು, ವಿದೇಶಿ ಹಾಲು ಬೇಡವೇ ಬೇಡ ಎಂದು ಕೋಲಾರದ ಹಾಲು ಉತ್ಪಾದಕರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (RCEP- Regional Comprehensive Economic Partnership) ಯೋಜನೆಯಡಿ ಮುಕ್ತ ವ್ಯಾಪಾರ ಮಾರುಕಟ್ಟೆ ವ್ಯಾಪ್ತಿಗೆ ಹೈನೋದ್ಯಮ ಸೇರಿಸುತ್ತಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್​ಸಿಇಪಿ ಅಡಿ ಹೈನೋದ್ಯಮವನ್ನು ಸೇರಿಸದಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅತಿ ಹೆಚ್ಚು ಹಾಲು […]

ನಮ್ಮ ಹಾಲು ನಮ್ಮ ಹಕ್ಕು: ವಿದೇಶಿ ಹಾಲು ಬೇಡ ಎಂದಿದ್ದೇಕೆ ಕೋಲಾರದ ರೈತರು?
Follow us on

ಕೋಲಾರ: ನಮ್ಮ ಹಾಲು ನಮ್ಮ ಹಕ್ಕು, ವಿದೇಶಿ ಹಾಲು ಬೇಡವೇ ಬೇಡ ಎಂದು ಕೋಲಾರದ ಹಾಲು ಉತ್ಪಾದಕರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (RCEP- Regional Comprehensive Economic Partnership) ಯೋಜನೆಯಡಿ ಮುಕ್ತ ವ್ಯಾಪಾರ ಮಾರುಕಟ್ಟೆ ವ್ಯಾಪ್ತಿಗೆ ಹೈನೋದ್ಯಮ ಸೇರಿಸುತ್ತಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್​ಸಿಇಪಿ ಅಡಿ ಹೈನೋದ್ಯಮವನ್ನು ಸೇರಿಸದಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಅತಿ ಹೆಚ್ಚು ಹಾಲು ಉತ್ಪಾದಿಸುವ ಕೋಲಾರ ಜಿಲ್ಲೆಯಲ್ಲಿ ವಿದೇಶಿ ಹಾಲುತ್ಪನ್ನ ಏಕೆ?:
ಕೋಲಾರ ನಗರದಲ್ಲಿ ಸೀಮೆ ಹಸು, ಎತ್ತಿನ ಬಂಡಿ ಮತ್ತು ತರಕಾರಿ ಸಮೇತ ರಸ್ತೆ ತಡೆದು ಪ್ರತಿಭಟನೆ ನಡೆಸಿ ರೈತ ಕುಲಕ್ಕೆ ಆರ್​ಸಿಇಪಿ ಒಪ್ಪಂದ ಮಾರಕ ಎಂದು ಘೋಷಣೆ ಕೂಗಿದ್ದಾರೆ. ವಿದೇಶಿ ಹಾಲು ಉತ್ಪನ್ನಗಳು ಬೇಡವೇ ಬೇಡ. ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಆರ್​ಸಿಇಪಿ ಅಡಿ ಹೈನುಗಾರಿಕೆ ತರದಂತೆ ಆಗ್ರಹಿಸಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

Published On - 4:04 pm, Thu, 24 October 19