ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮಪಂಚಾಯತ ಅಭಿವೃದ್ದಿ ಅಧಿಕಾರಿ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ. ಅಧಿಕಾರಿ ಶಂಕರಪ್ಪ, ವೆಂಕಟರಾಜು ಎಂಬುವವರ ಬಳಿ ಖಾತೆ ಬದಲಾವಣೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದನು. ವೆಂಕಟರಾಜು ಎಂಬುವರಿಂದ ೧೫ ಸಾವಿರ ಬೇಡಿಕೆ ಇಟ್ಟು ಮುಂಗಡ ೨ ಪಡೆದಿದ್ದನು. ಇಂದು (ಜುಲೈ 26) ಲಕ್ಣ್ಮೀ ಪುರ ಮಯೂರಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ೧೩ ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಡಿವೈಎಸ್ ಸುಧೀರ್ ನೇತೃತ್ವದ ಅಧಿಕಾರಿಳು ದಾಳಿ ನಡೆಸಿದಾಗ ಸಿಕ್ಕಿಹಾಕಿಕೊಂಡಿದ್ದಾನೆ.
ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಡಿಎಚ್ಒ ಕಚೇರಿ ಸಿಬ್ಬಂದಿ
ಚಾಮರಾಜನಗರ: ಲಂಚ ಸ್ವೀಕರಿಸುತ್ತಿರುವ ವೇಳೆ ಡಿಎಚ್ಒ ಕಚೇರಿ ಎಫ್ಡಿಎ ಮಹೇಶ್ ಎಸಿಬಿ ಬಲೆಗೆ ಬಿದ್ದಿದ್ದಾನೆ. ಎಫ್ಡಿಎ ಮಹೇಶ್ ಜಿಲ್ಲಾಡಳಿತ ಭವನದ ಆವರಣದ ಹೋಟೆಲ್ನಲ್ಲಿ 3 ಸಾವಿರ ರೂ. ಹಣ ಪಡೆಯುತ್ತಿದ್ದಾಗ ಸಿಕ್ಕಿ ಹಾಕಿಕೊಂಡಿದ್ದಾನೆ.
ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ಪ್ರದೀಪ್ ಬಳಿ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಈ ವೇಳೆ ಮುಂಗಡವಾಗಿ 3 ಸಾವಿರ ರೂ. ಹಣ ಪಡೆಯುವಾಗ ವಶಕ್ಕೆ ಪಡೆಯಲಾಗಿದೆ.
ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಎಫ್ಡಿಎ ಅಧಿಕಾರಿ
ತುಮಕೂರು: ಎಫ್ಡಿಎ ಅಧಿಕಾರಿ ಮಧುಗಿರಿ ಎಸಿ ಕಛೇರಿಯಲ್ಲಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ. ಮೋಹನ್ ಕುಮಾರ್, ಎಸಿಬಿ ಬಲೆಗೆ ಬಿದ್ದ ಎಫ್ ಡಿಎ ಅಧಿಕಾರಿ. ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿಯ ಮಾದೇನಹಳ್ಳಿ ಗ್ರಾಮದ ಜಮೀನು ಖಾತೆ ಮಾಡಿಕೊಡುವ ವಿಚಾರಕ್ಕೆ ಮೋಹನ್ ಕುಮಾರ್ 3 ಸಾವಿರಕ್ಕೆ ಬೇಡಿಕೆಯಿಟ್ಟಿದ್ದನು.
ಈ ಸಂಬಂಧ ತುಮಕೂರು ರೈತ ಎಸಿಬಿಗೆ ದೂರು ನೀಡಿದ್ದರು. ದೂರಿನನ್ವಯ ಇಂದು (ಜುಲೈ 26) ಎಸಿಬಿ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದಿದ್ದಾನೆ.
Published On - 4:10 pm, Tue, 26 July 22