ಕೋಲಾರ: ನವ ವಿವಾಹಿತೆ ಆತ್ಮಹತ್ಯೆಗೆ (suicide) ಶರಣಾಗಿರುವಂತಹ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಡಿಕೆ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಗೀತಾ (25) ಆತ್ಮಹತ್ಯೆಗೆ ಶರಣಾದ ಮಹಿಳೆ. ಮೂರು ತಿಂಗಳ ಹಿಂದಷ್ಟೇ ಪ್ರವೀಣ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಧ್ಯಾಹ್ನ ಮನೆಗೆ ಊಟಕ್ಕೆಂದು ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿದೆ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಗೃಹಿಣಿ ಅನುಮಾನಸ್ಪದವಾಗಿ ಶವವಾಗಿ ಪತ್ತೆ
ತುಮಕೂರು: ಗೃಹಿಣಿ ಅನುಮಾನಸ್ಪದವಾಗಿ ಶವವಾಗಿ ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ದಂಡಿನಶಿವರ ಬಳಿಯ ಕುರುಬರಹಳ್ಳಿಯಲ್ಲಿ ನಡೆದಿದೆ. ಆಶಾ (29) ಶವವಾಗಿ ಪತ್ತೆಯಾದ ಗೃಹಿಣಿ. ಆಶಾ ತಲೆಗೆ ಯಾವುದೋ ವಸ್ತುವಿಂದ ಬಲವಾಗಿ ಹೊಡೆದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆನ್ನಲಾಗುತ್ತಿದೆ. ಸ್ಥಳಕ್ಕೆ ತುರುವೇಕೆರೆ ತಾಲೂಕಿನ ದಂಡಿನ ಶಿವರ ಪೊಲೀಸರು ಭೇಟಿ, ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಚಿನ್ನಾಭರಣ ಕದಿಯುತ್ತಿದ್ದ ಕಳ್ಳಿ ಬಂಧನ
ಬೆಂಗಳೂರು: ಚಿನ್ನಾಭರಣದ ಅಂಗಡಿಗಳನ್ನೇ ಟಾರ್ಗೆಟ್ ಕಳ್ಳತನ ಮಾಡುತ್ತಿದ್ದ ಕಳ್ಳಿಯನ್ನು ಬಂಧಿಸಲಾಗಿದೆ. ಬಂಧಿತಳಿಂದ 60 ಗ್ರಾಂಗೂ ಅಧಿಕ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಟಿನ್ ಫ್ಯಾಕ್ಟರಿ ನಿವಾಸಿಯಾದ ನಂದಿಯಾ ಬಂಧಿತ ಮಹಿಳೆ. ಸಣ್ಣ ಚಿನ್ನದ ಅಂಗಡಿಗಳನ್ನೇ ಟಾರ್ಗೆಟ್ ಮಾಡುತಿದ್ದಳು. ಉಂಗುರ ಖರೀದಿ ನೆಪದಲ್ಲಿ ಚಿನ್ನ ನೊಡುತಿದ್ದಳು. ಹೆಚ್ಚಿನ ಉಂಗುರಗಳ ಇಟ್ಟು ಮಾರಾಟಗಾರರ ಗಮನ ಬೇರೆಡೆ ಸೆಳೆದು ಚಿನ್ನ ಎಗರಿಸುತಿದ್ದಳು. ಹಲವು ವರ್ಷಗಳಿಂದ ಇದೇ ಮಾದರಿಯಲ್ಲಿ ಕೃತ್ಯವೆಸಗಿದ್ದಾಳೆ. ಬಳಿಕ ಒಂದುವರೆ ವರ್ಷದ ಬಳಿಕ ಕದ್ದ ಅಂಗಡಿಯಲ್ಲೇ ಮತ್ತೇ ಚಿನ್ನ ಎಗರಿಸುವ ಯತ್ನಿಸಿದ್ದಾಳೆ. ಮಹಿಳೆ ಬಗ್ಗೆ ಅರಿತಿದ್ದ ವ್ಯಾಪಾರಿ ಕಳುವಾಗುತಿದ್ದಂತೆ ಅರಿವಿಗೆ ಬಂದಿದೆ. ಕೂಡಲೇ ಯಶವಂತಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ಆಧರಿಸಿ ಪೊಲೀಸರು ಬಂಧಿಸಿದ್ದಾರೆ.
ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ
ಬಾಗಲಕೋಟೆ: ಖಾಸಗಿ ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಜಮಖಂಡಿ ನಗರದ ಬಸವೇಶ್ವರ ನಗರದಲ್ಲಿ ನಡೆದಿದೆ. ಪ್ರಣಯ್ ಮಲ್ಲನ್ನವರ್ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಗರದ ಖಾಸಗಿ ಮಹಾವಿದ್ಯಾಲಯದಲ್ಲಿ ದ್ವಿತಿಯ ಪಿಯುಸಿ ಓದುತ್ತಿದ್ದ. ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ನಿವಾಸಿ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಜಮಖಂಡಿ ನಗರ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.