ಕೋಲಾರದಲ್ಲಿ ಮರಗಳನ್ನು ಕಡಿದು ಗಿಳಿ ಮರಿಗಳನ್ನ ಅನಾಥ ಮಾಡಿದ ಬಿಜಿಎಂಎಲ್ ಅಧಿಕಾರಿಗಳು! ಪರಿಸರ ಪ್ರೇಮಿಗಳು ಆಕ್ರೋಶ

ಬಿಜಿಎಂಎಲ್ ಸಂಸ್ಥೆಗೆ ಸೇರಿದ ಹಳೆಯ ಬಿಜಿಎಂಎಲ್ ಶಾಲೆಯಲ್ಲಿದ್ದ ಮರಗಳಲ್ಲಿ ಹತ್ತಾರು ಗಿಳಿಗಳು ಗೂಡು ಕಟ್ಟಿಕೊಂಡಿದ್ದವು, ಇದರಲ್ಲಿ ಗೂಡು ಕಟ್ಟಿಕೊಂಡಿದ್ದ ಗೂಡಿನಲ್ಲಿ ಗಿಳಿ ಮರಿಗಳಿದ್ದವು.

ಕೋಲಾರದಲ್ಲಿ ಮರಗಳನ್ನು ಕಡಿದು ಗಿಳಿ ಮರಿಗಳನ್ನ ಅನಾಥ ಮಾಡಿದ ಬಿಜಿಎಂಎಲ್ ಅಧಿಕಾರಿಗಳು! ಪರಿಸರ ಪ್ರೇಮಿಗಳು ಆಕ್ರೋಶ
ಗಿಳಿ ಮರಿಗಳು, ಮರಗಳನ್ನು ಕಡಿಯುತ್ತಿರುವ ದೃಶ್ಯ
Updated By: sandhya thejappa

Updated on: Feb 17, 2022 | 10:55 AM

ಕೋಲಾರ: ಮರಗಳನ್ನು ಕಡಿಯುವ ಜೊತೆಗೆ ಮರದಲ್ಲಿದ್ದ ಗಿಳಿ (Parrot) ಮರಿಗಳನ್ನ ಅನಾಥ ಮಾಡುವ ಮೂಲಕ ಬಿಜಿಎಂಎಲ್ ಅಧಿಕಾರಿಗಳು ಅಮಾನವೀಯವಾಗಿ ವರ್ತಿಸಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಬಿಜಿಎಂಎಲ್ ಶಾಲೆಯಲ್ಲಿ ಮರಗಳ ಮಾರಾಣ ಹೋಮ ನಡೆಯುತ್ತಿದೆ. ಮಾನವೀಯತೆ ಮರೆತ ಅಧಿಕಾರಿಗಳು ಚಿನ್ನದ ಗಣಿ ಶಾಲೆಯ ಆವರಣದಲ್ಲಿನ ಮರಗಳನ್ನ ಕಡಿಯಲು ಅನುಮತಿ ನೀಡಿ ಎಡವಟ್ಟು ಮಾಡಿದ್ದರು. ಆದರೆ ಮರ ಕಡಿಯುವ ವೇಳೆ ಮರದಲ್ಲಿದ್ದ ಪುಟ್ಟ ಪುಟ್ಟ ಗಿಳಿಗಳಿದ್ದ ಗೂಡನ್ನು ನೋಡದೆ ಕಟಾವು ಮಾಡಿದ್ದಾರೆ.

ಬಿಜಿಎಂಎಲ್ ಸಂಸ್ಥೆಗೆ ಸೇರಿದ ಹಳೆಯ ಬಿಜಿಎಂಎಲ್ ಶಾಲೆಯಲ್ಲಿದ್ದ ಮರಗಳಲ್ಲಿ ಹತ್ತಾರು ಗಿಳಿಗಳು ಗೂಡು ಕಟ್ಟಿಕೊಂಡಿದ್ದವು, ಇದರಲ್ಲಿ ಗೂಡು ಕಟ್ಟಿಕೊಂಡಿದ್ದ ಗೂಡಿನಲ್ಲಿ ಗಿಳಿ ಮರಿಗಳಿದ್ದವು. ಗೂಡಿನಲ್ಲಿದ್ದ ಪಕ್ಷಿಗಳನ್ನು ಗಮನಿಸದೆ ಮರಗಳನ್ನ ಕಡಿದಿರುವ ಗುತ್ತಿಗೆದಾರರು, ಗಿಳಿಗಳು ಗೂಡುಗಳನ್ನ ಹಾಳು ಮಾಡಿ 6 ಗಿಳಿ ಮರಿಗಳನ್ನ ಅನಾಥ ಮಾಡಿದ್ದಾರೆ. ಅನಾಥವಾಗಿ ನರಳಾಡುತ್ತಿದ್ದ ಗಿಣಿ ಮರಿಗಳನ್ನ ರಕ್ಷಣೆ ಮಾಡಿರುವ ಪರಿಸರ ಪ್ರೇಮಿಗಳು ಬ್ಲೂ ಕ್ರಾಸ್ ಸಂಸ್ಥೆಗೆ ನೀಡಿದ್ದಾರೆ.

ಮರ ಕಡಿದವರು ಹಾಗೂ ಅಧಿಕಾರಿಗಳಿಂದ ಗಿಳಿ ಮರಿಗಳು ಅನಾಥವಾಗಿದ್ದು, ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಗಿಳಿ ಮರಿಗಳನ್ನ ಅನಾಥ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ

ಮದುವೆ ಮನೆಗೆ ಹೋಗಿದ್ದ 13 ಮಹಿಳೆಯರು ಬಾವಿಗೆ ಬಿದ್ದು ಸಾವು; ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಮುಖ್ಯಮಂತ್ರಿ

ಮುದ್ದು ಮಗ ಜಿಯಾನ್ ಜೊತೆ ಶ್ವೇತಾ ಚೆಂಗಪ್ಪ ಚಂದದ ಫೋಟೋಶೂಟ್​; ಕ್ಯೂಟ್​ ಫೋಟೋಗಳಿಗೆ ಫ್ಯಾನ್ಸ್​ ಫಿದಾ

Published On - 10:53 am, Thu, 17 February 22