
ಕೋಲಾರ, ಅಕ್ಟೋಬರ್ 08: ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಮಹಿಳೆ (woman) ನಿರ್ಜನ ಪ್ರದೇಶದಲ್ಲಿ ಬರ್ಬರವಾಗಿ ಕೊಲೆಯಾಗಿರುವಂತಹ (kill) ಘಟನೆ ಕೋಲಾರ ತಾಲ್ಲೂಕು ಚಲುವನಹಳ್ಳಿ ಗ್ರಾಮದ ಬಳಿ ನಡೆದಿದೆ. ಮಾಲಾ (40) ಕೊಲೆಯಾದ ಮಹಿಳೆ. ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿಹಾಕಿ ಅಥವಾ ಬಲವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕೋಲಾರ ತಾಲೂಕಿನ ಬೆಳ್ಳೂರು ಗ್ರಾಮದ ಮಾಲಾ ಕೋಲಾರ ತಾಲ್ಲೂಕು ಚಲುವನಹಳ್ಳಿ ಗ್ರಾಮದ ಹೊರ ಹೊಲಯದಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಇಂದು ಬೆಳಗಿನ ಜಾವ ಆಂದ್ರದ ಬಾಯಿಕೊಂಡ ದೇವಾಲಯಕ್ಕೆ ಸ್ನೇಹಿತರ ಜೊತೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಮಾಲಾ, ಬೆಳಗಾಗುವಷ್ಟರಲ್ಲಿ ಕೊಲೆಯಾಗಿದ್ದಾರೆ.
ಇದನ್ನೂ ಓದಿ: ಓದುವ ವಯಸ್ಸಲ್ಲಿ ಪ್ರೀತಿ-ಪ್ರೇಮ: ಹೆದರಿ ದುರಂತ ಅಂತ್ಯ ಕಂಡ ಅಪ್ರಾಪ್ತ ಪ್ರೇಮಿಗಳು
ಕಳೆದ 35 ವರ್ಷಗಳ ಹಿಂದೆ ತನ್ನ ಸಂಬಂಧಿಯೊಬ್ಬರನ್ನು ಮಾಲಾ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗುವಿತ್ತು. ಹೀಗಿರುವಾಗಲೇ ಮಾಲಾ ಗಂಡ ಬೇರೊಂದು ಮದುವೆ ಮಾಡಿಕೊಂಡ ಹಿನ್ನಲೆ ಗಂಡನನ್ನು ಬಿಟ್ಟು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು. ಮಗಳಿಗೆ ಮದುವೆ ಕೂಡ ಮಾಡಿದ್ದರು.
ಮಾಲಾ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಕೂಲ್ ಮನ್ ಎಂಬ ಉಪ್ಪಿನಕಾಯಿ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ದುಡಿಮೆಯಲ್ಲಿ ತಮ್ಮ ಪಾಡಿಗೆ ತಾವು ಬದುಕುತ್ತಿದ್ದರು. ಇಂದು ಕೂಡ ಅದೇ ಕೂಲ್ ಮನ್ ಕಂಪನಿಯಲ್ಲಿ ಕೆಲಸ ಮಾಡುವ ಕೆಲವು ಸ್ನೇಹಿತರು ಎಲ್ಲರೂ ಆಂದ್ರದ ಬಾಯಿಕೊಂಡ ದೇವಾಲಯಕ್ಕೆ ಹೋಗಲು ಪ್ಲ್ಯಾನ್ ಮಾಡಿದ್ದು, ಆದರೆ ಮುಂಜಾನೆ ನಾಲ್ಕು ಗಂಟೆಗೆ ಮಾಲಾ ಬರ್ಬರವಾಗಿ ಕೊಲೆ ಆಗಿದ್ದರು.
ಮಾಲಾ ಯಾರ ಜೊತೆಗೆ ಬಂದಿದ್ದರು, ಕೊಲೆ ಮಾಡಲು ಕಾರಣವಾದರೂ ಏನು ಅನ್ನೋ ವಿಚಾರ ಸದ್ಯಕ್ಕೆ ತಿಳಿದು ಬಂದಿಲ್ಲ. ಆದರೆ ಮಾಲಾ ಹಾಗೂ ಅವರ ಕುಟುಂಬದಲ್ಲಿ ಜಮೀನಿಗೆ ಸಂಬಂಧಿಸಿದಂತೆ ವಿವಾದ ಇದ್ದು, ಜಮೀನು ಭಾಗ ಮಾಡಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರವಾಗಿ ಆಗಾಗ ಗಲಾಟೆಗಳು ನಡೆಯುತ್ತಿತ್ತು. ಇತ್ತೀಚೆಗೆ ಜಮೀನು ಮಾರಾಟ ಮಾಡಲು ನಿರ್ಧಾರ ಮಾಡಲಾಗಿತ್ತು. ಹಾಗಾಗಿ ಆ ವಿಚಾರವಾಗಿ ಮಾಲಾರನ್ನು ಕೊಲೆ ಮಾಡಿರಬಹುದು ಎಂಬ ಅನುಮಾನ ಕುಟುಂಬಸ್ಥರಲ್ಲಿ ಕೇಳಿಬರುತ್ತಿದೆ.
ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸೊಸೆ
ಒಟ್ಟಾರೆ ತಾನಾಯ್ತು, ತನ್ನ ಕೆಲಸವಾಯ್ತು ಎಂದು ನೆಮ್ಮದಿಯಿಂದ ಬದುಕುತ್ತಿದ್ದ ಮಾಲಾ, ಇಂದು ನಡು ರಸ್ತೆಯಲ್ಲಿ ನಿರ್ಜನ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಹತ್ಯೆಗೆ ಕಾರಣ ಏನು ಅನ್ನೋದು ಸದ್ಯ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.