ಮುಳಬಾಗಿಲು: ದಲಿತ ಯುವಕನೊಬ್ಬ ನಾಲ್ವರ ಕಿರುಕುಳ ತಾಳಲಾರದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ನಡೆದಿದೆ. ಮೃತರನ್ನು ಮುಳಬಾಗಿಲಿನ ಬೇವನಹಳ್ಳಿ ನಿವಾಸಿ ಉದಯ್ ಕಿರಣ್ (25) ಎಂದು ಗುರುತಿಸಲಾಗಿದೆ. ಉದಯ್ ಸೋದರ ಮಾವ ಹನುಮಪ್ಪ ನೀಡಿದ ದೂರಿನ ಪ್ರಕಾರ, ಮೃತರು ದ್ವಿಚಕ್ರ ವಾಹನದಲ್ಲಿ ನಾಗರಾಜ್ ಎಂಬುವವರೊಂದಿಗೆ ಬೈರುಕೂರು ಕಡೆಗೆ ಯಾವುದೋ ಕೆಲಸದ ನಿಮಿತ್ತ ಹೋಗುತ್ತಿದ್ದಾಗ ಬೈಕ್ ಸವಾರ ರಾಜು ಎಂಬಾತನನ್ನು ಹಿಂದಿಕ್ಕಿದ್ದು ಇಬ್ಬರ ನಡುವೆ ಜಗಳ ನಡೆದಿದೆ. ರಾಜು ಉದಯ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ನಂತರ ಉದಯ್ ಬೇವನಹಳ್ಳಿಗೆ ವಾಪಸಾಗುತ್ತಿದ್ದಾಗ ರಾಜು, ಶಿವರಾಜ್, ಗೋಪಾಲಕೃಷ್ಣಪ್ಪ ಮತ್ತು ಮುನಿವೆಂಕಟಪ್ಪ ಎಂಬ ಮೂವರು ಸೇರಿ ಆತನನ್ನು ಅಡ್ಡಗಟ್ಟಿ ಮೊಬೈಲ್ ಕಸಿದುಕೊಂಡಿದ್ದರು. ನಂತರ ಅವರು ಉದಯ್ ಅವರಿಗೆ ಫೋನ್ ಬೇಕಾದರೆ ನಿಮ್ಮ ಮನೆಯವರನ್ನು ಕರೆದುಕೊಂಡು ಬರಲು ಹೇಳಿದ್ದಾರೆ. ಆದರೆ ಉದಯ್ ಗ್ರಾಮಕ್ಕೆ ಹಿಂತಿರುಗಿ ಫೋನ್ ತೆಗೆದುಕೊಂಡು ಬರಲು ಪೇತಾಂಡಹಳ್ಳಿಗೆ ತೆರಳಿದ್ದ.
ಇದನ್ನು ಓದಿ: ಕೋಲಾರದ ಕೆರೆಯಂಗಳದಲ್ಲಿ ಮಗಳನ್ನು ಎದೆಗಪ್ಪಿಕೊಂಡೇ ಕೊಂದುಬಿಟ್ಟ ಬೆಂಗಳೂರಿನ ಟೆಕ್ಕಿ ಅಪ್ಪ! ಇಲ್ಲಿದೆ ಡೀಟೇಲ್ಸ್
ಆದರೆ, ರಾಜು ಮತ್ತು ಇತರ ಮೂವರು ಆತನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಹನುಮಪ್ಪ ಎಂಬವವರು ಉದಯ್ನನ್ನು ರಕ್ಷಿಸಲು ಪೇತಾಂಡಹಳ್ಳಿಗೆ ಹೋಗಿ ಕರೆತಂದರು. ಆದರೆ, ಅವಮಾನ ತಾಳಲಾರದೆ ಉದಯ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಗಿದುಕೊಂಡಿದ್ದಾನೆ.
ಆತ್ಮಹತ್ಯೆಗೆ ಪ್ರಚೋದನೆ
ಹನುಮಪ್ಪ ನೀಡಿದ ದೂರಿನ ಮೇರೆಗೆ ನಂಗಲಿ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುನಿವೆಂಕಟಪ್ಪನನ್ನು ಬಂಧಿಸಿದ್ದಾರೆ ಎಂದು ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ತಿಳಿಸಿದ್ದಾರೆ. ಕೆಲವು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿರುವ ಪ್ರಕಾರ ಉದಯ್ 2019ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಮತ್ತು ವಿಚಾರಣೆಗೆ ಒಳಪಟ್ಟಿದ್ದಾನೆ ಎಂದು ಹೇಳಲಾಗಿತ್ತು. ಇದೀಗ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:58 am, Sat, 3 December 22