KGF ವೈನ್​ ಉತ್ಸವಕ್ಕೆ ಕಿಕ್ ಕೊಡಲು ಬಯಲು ಸೀಮೆಯೇ ಮಲೆನಾಡಾಗಿ ಬದಲಾಗಿತ್ತು!

| Updated By: ಸಾಧು ಶ್ರೀನಾಥ್​

Updated on: Dec 12, 2022 | 4:34 PM

kick start: ಅಚ್ಚರಿ ಎಂಬಂತೆ ಬಯಲು ಸೀಮೆ KGF ನಲ್ಲಿ ನಡೆದಿರುವ ವೈನ್​ ಉತ್ಸವಕ್ಕೆ ಮೆರಗು ನೀಡಲು ಇಲ್ಲಿನ ಪ್ರಕೃತಿಯೇ ಬದಲಾಗಿ ಹೋಗಿದೆ. ಬಯಲು ಸೀಮೆಯೇ ಮಲೆನಾಡಾಗಿ ಬದಲಾಗಿ ಹೋಗಿದೆ. ವೈನ್​ ಉತ್ಸವ ಮಾಡಲು ಬಂದವರಿಗೂ ಅದು ಅಚ್ಚರಿ ಅನ್ನಿಸಿ, ವೈನ್​ ಪ್ರಿಯರಿಂದ ಭರ್ಜರಿ ರೆಸ್ಪಾನ್ಸ್​ ಸಿಕ್ಕಿತ್ತು.

KGF ವೈನ್​ ಉತ್ಸವಕ್ಕೆ ಕಿಕ್ ಕೊಡಲು ಬಯಲು ಸೀಮೆಯೇ ಮಲೆನಾಡಾಗಿ ಬದಲಾಗಿತ್ತು!
KGF ವೈನ್​ ಉತ್ಸವಕ್ಕೆ ಕಿಕ್ ಕೊಡಲು ಬಯಲು ಸೀಮೆಯೇ ಮಲೆನಾಡಾಗಿ ಬದಲಾಗಿತ್ತು!
Follow us on

ಅದೇನು ಕಾಕತಾಳಿಯವೋ, ಇಲ್ಲಾ ಅಚ್ಚರಿಯೋ ಗೊತ್ತಿಲ್ಲ ಆ ಬಯಲು ಸೀಮೆಯಲ್ಲಿ ಮಾಡಿದ ವೈನ್​ ಉತ್ಸವಕ್ಕೆ ಮೆರಗು ನೀಡಲು ಇಲ್ಲಿನ ಪ್ರಕೃತಿಯೇ ಬದಲಾಗಿ ಹೋಗಿತ್ತು, ಬಯಲು ಸೀಮೆಯೇ ಅಲ್ಲಿ ಮಲೆನಾಡಾಗಿ ಬದಲಾಗಿ ಹೋಗಿತ್ತು. ವೈನ್​ ಉತ್ಸವ ಮಾಡಲು ಬಂದವರಿಗೂ ಅದು ಅಚ್ಚರಿ ಅನ್ನಿಸಿ, ವೈನ್​ ಪ್ರಿಯರಿಂದ ಭರ್ಜರಿ ರೆಸ್ಪಾನ್ಸ್​ ಸಿಕ್ಕಿತ್ತು.

ಚಿನ್ನದ ನಾಡಿನಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ವೈನ್​ ಉತ್ಸವ, ವೈನ್​ ಉತ್ಸವದಲ್ಲಿ ಹಲವು ಬ್ರಾಂಡ್​ ಕಂಪನಿಗಳ ವೈನ್​ ಮಾರಾಟಗಾರರು, ಸ್ಟಾಲ್​ ಗಳಲ್ಲಿ ವೈನ್​ ಖರೀದಿ ಮಾಡುತ್ತಿರುವ ವೈನ್​ ಪ್ರಿಯರು ಇದೆಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಕೆಜಿಎಫ್​ನಲ್ಲಿ (KGF wine festival). ಹೌದು ಕರ್ನಾಟಕ ವೈನ್​ ಬೋರ್ಡ್​ ಹಾಗೂ ತೋಟಗಾರಿಕಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕೋಲಾರ ಜಿಲ್ಲೆ ಕೆಜಿಎಫ್​ನಲ್ಲಿ ಮೂರು ದಿನಗಳ ಕಾಲ ವೈನ್​ ಉತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

ಕೆಜಿಎಫ್​ನ ಬೆಮೆಲ್​ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಸುಮಾರು ಹತ್ತಕ್ಕೂ ಹೆಚ್ಚು ವೈನ್​ ಕಂಪನಿಗಳು ಭಾಗವಹಿಸಿ ತಮ್ಮಲ್ಲಿ ಉತ್ಪಾದನೆಯಾಗುವ ವಿವಿಧ ಮಾದರಿಯ ವೈನ್​ಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಪ್ರಮುಖವಾಗಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ವೈನ್​ ಬೋರ್ಡ್​ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲದ ಹಲವು ರೀತಿಯ ಪ್ರಯೋಜನ ಹೊಂದಿರುವ, ಹಲವು ರೋಗ ರುಜಿನಗಳಿಗೆ ವೈನ್ ಉಪಯುಕ್ತ ಎಂದು ವೈದ್ಯಕೀಯವಾಗಿ ಸಾಬೀತವಾಗಿದೆ.

ಈ ಹಿನ್ನೆಲೆಯಲ್ಲಿ ವೈನ್​ಗೆ ಉತ್ತೇಜನ ನೀಡುವ ಉದ್ದೇಶದಿಂದ ಈಗಾಗಲೇ ರಾಜ್ಯದಲ್ಲಿ ನೂರಕ್ಕೂ ಹೆಚ್ಚು ವೈನ್​ ಫೆಸ್ಟ್​ ಆಯೋಜನೆ ಮಾಡಿರುವ ವೈನ್​ ಬೋರ್ಡ್​ ಇದೇ ಮೊದಲ ಬಾರಿಗೆ ಚಿನ್ನದ ನಾಡು ಕೆಜಿಎಫ್​ನಲ್ಲಿ ಭಾನುವಾರದಿಂದ ಮೂರು ದಿನಗಳ ಕಾಲ ವೈನ್​ ಉತ್ಸವ ಆಯೋಜಿಸಿದೆ. ಇದರಲ್ಲಿ ನಿರೀಕ್ಷೆಗೂ ಮೀರಿದ ಬೆಂಬಲ ಸಿಕ್ಕಿದೆ.

Also Read: ನೀರು ಹೇಗೆ ಕುಡಿಯುತ್ತೀರಿ ಎಂಬುದರ ಮೇಲೆಯೇ ನಿಮ್ಮ ಆರೋಗ್ಯ ನಿಂತಿದೆ? ನೀರು ಕುಡಿಯುವ ಸರಿಯಾದ ಮಾರ್ಗ ತಿಳಿಯಿರಿ

ಕಳೆದ ಎರಡು ದಿನಗಳಿಂದ ಕಾಕತಾಳಿಯ ಎನ್ನುವಂತೆ ಸೈಕ್ಲೋನ್​ ಎಫೆಕ್ಟ್​ ಇದ್ದು ವೈನ್​ ಉತ್ಸವಕ್ಕಾಗಿ ಬಯಲು ಸೀಮೆ ಕೋಲಾರವೇ ಮಲೆನಾಡಿನಂತಾಗಿ ಹೋಗಿದ್ದು ವೈನ್​ ಫೆಸ್ಟ್​ ವೀಕ್ಷಿಸಲು ಮಳೆಯಲ್ಲೂ ಜನರು ಆಸಕ್ತಿಯಿಂದ ಭಾಗವಹಿಸಿದ್ದರು ಅನ್ನೋದು ಆಯೋಜಕರೂ ಆದ ವೈನ್​ ಬೋರ್ಡ್​ ನಿರ್ದೇಶಕ ಅಭಿಲಾಷ್​ ಕಾರ್ತಿಕ್​ ಮಾತು.

ಮೂರು ದಿನಗಳ ಕಾಲ ನಡೆಯುವ ಈ ವೈನ್​ ಉತ್ಸವದಲ್ಲಿ ರಾಜ್ಯದ 16 ವೈನ್​ ಕಂಪನಿಗಳ ಪೈಕಿ ಕಿನ್ವಾ, ರಿಕೋ, ತಲಿಸ್ಮಾ, ಅದರಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ವೈನ್​ ತಯಾರಕರು ಭಾಗವಹಿಸಿ ಗ್ರಾಹಕರಿಗೆ ವೈನ್​ ಕುರಿತು ಅರಿವು ಮೂಡಿಸುವ ಅದರ ಮಹತ್ವವನ್ನು ತಿಳಿಸುವ ಕೆಲಸ ಮಾಡುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹಲವು ಮಾರಕ ಕಾಯಿಲೆಗಳಿಗೂ ವಿವಿಧ ಬಗೆಯ ವೈನ್​ ಗಳು ಸಹಕಾರಿ ಎನ್ನಲಾಗುತ್ತಿದೆ.

ಕೆಜಿಎಫ್​ನಲ್ಲಿ ಹೆಚ್ಚು ವೈನ್ ಪ್ರಿಯರಿದ್ದು ವೈನ್​ ಉತ್ಸವಕ್ಕೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದೆ. ವೈನ್​ ಫೆಸ್ಟ್​ನಲ್ಲಿ ಸ್ಟಾಲ್​ ಗಳನ್ನು ಹಾಕಿದ್ದ ವೈನ್​ ತಯಾರಕರು, ಈ ಮೊದಲು ಎಲ್ಲೂ ಸಿಗದಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಿದ್ದಾರೆ. ಅಲ್ಲದೆ ಜನರು ಅಷ್ಟೇ ಉತ್ಸಹ ಆಸಕ್ತಿಯಿಂದ ವೈನ್​ ಉತ್ಸವದಲ್ಲಿ ಭಾಗವಹಿಸಿ ವೈನ್​ ಟೇಸ್ಟ್​ ಮಾಡಿದ್ದಲ್ಲದೆ ವೈನ್ ಖರೀದಿ ಮಾಡಿದ್ದಾರೆ. ವೈನ್​ ಫೆಸ್ಟ್​ನಲ್ಲಿ ಭಾಗವಹಿಸಿದ ವೈನ್ ಪ್ರಿಯರಂತೂ ಫುಲ್​ ಖುಷಿಯಾಗಿದ್ದಾರೆ.

ಒಟ್ಟಾರೆ ಚಿನ್ನದ ನಾಡು ಕೋಲಾರದಲ್ಲಿ ಆಯೋಜನೆ ಮಾಡಿದ್ದ ವೈನ್​ ಉತ್ಸವಕ್ಕೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದ್ದು ವೈನ್​ ಬೋರ್ಡ್​ನ ಅಧಿಕಾರಿಗಳು ಹಾಗೂ ವೈನ್​ ತಯಾರಿಕಾ ಕಂಪನಿಗಳು ಪುಲ್​ ಖುಷಿಯಾಗಿದ್ದು, ರೈತರಿಗೆ ಹಾಗೂ ಕೃಷಿಗೆ ಉತ್ತೇಜನ ನೀಡುವ ಇಂಥ ಹಲವು ಉತ್ಸವ ಗಳು ನಡೆಯಲಿ ಅನ್ನೋದು ನೆರೆದಿದ್ದವರ ಆಶಯ ಕೂಡಾ ಆಗಿತ್ತು. (ವರದಿ: ರಾಜೇಂದ್ರಸಿಂಹ, ಟಿವಿ 9, ಕೋಲಾರ)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ