ಕೋಲಾರ: ಒಂದೇ ದಿನಕ್ಕೆ ಕಿತ್ತು ಬಂದ ರಸ್ತೆಗೆ ಪೂಜೆ ಮಾಡಿ ವಿನೂತನ ಪ್ರತಿಭಟನೆ..!

| Updated By: ಗಂಗಾಧರ​ ಬ. ಸಾಬೋಜಿ

Updated on: Jul 13, 2022 | 10:47 AM

ಸಿಂಹ ಘರ್ಜನೆ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಸನ್ನ ಕುಮಾರ್ ಮತ್ತು ಕಾರ್ಯಕರ್ತರು ರಸ್ತೆಯಲ್ಲಿ ಪೂಜೆ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ. ಕಳಪೆ ಕಾಮಗಾರಿ ಸ್ಥಳದಲ್ಲಿ ಪೂಜೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿ ಗಮನ ಸೆಳೆದಿದ್ದಾರೆ.

ಕೋಲಾರ: ಒಂದೇ ದಿನಕ್ಕೆ ಕಿತ್ತು ಬಂದ ರಸ್ತೆಗೆ ಪೂಜೆ ಮಾಡಿ ವಿನೂತನ ಪ್ರತಿಭಟನೆ..!
ಕಿತ್ತು ಬಂದ ಡಾಂಬರು ರಸ್ತೆಗೆ ಪೂಜೆ ಮಾಡಿ ವಿನೂತನ ಪ್ರತಿಭಟನೆ ಮಾಡುತ್ತಿರುವುದು
Follow us on

ಕೋಲಾರ: ಮಳೆಯಲ್ಲೇ ರಸ್ತೆಗೆ ಡಾಂಬರು ಹಾಕಿದ ಪರಿಣಾಮ ಡಾಂಬರು ಹಾಕಿದ ಒಂದೇ ದಿನಕ್ಕೆ ರಸ್ತೆ (Road) ಕಿತ್ತು ಬಂದಿದ್ದು, ಪರಿಣಾಮ ಕಿತ್ತು ಬರುತ್ತಿರುವ ಡಾಂಬರು ರಸ್ತೆಗೆ ಪೂಜೆ ಮಾಡಿ ವಿನೂತನ ಪ್ರತಿಭಟನೆ ಮಾಡಲಾಗಿದೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಡಿ.ಕೆ.ಹಳ್ಳಿ ಗ್ರಾಮ ಪಂಚಾಯ್ತಿಯ ಡಿ.ಕೆ.ಹಳ್ಳಿ ಗ್ರಾಮದಿಂದ ಬ್ಯಾಟರಾಯನಹಳ್ಳಿ ಬೆಟ್ಟದವರೆಗೂ ಬಂಗಾರಪೇಟೆ ಶಾಸಕ ಎಸ್.ಎನ್​. ನಾರಾಯಣಸ್ವಾಮಿ ಅವರ ಅನುದಾನದಲ್ಲಿ ಸುಮಾರು 6 ಕಿ.ಮೀ ಉದ್ದದ ರಸ್ತೆಯ ಡಾಂಬರೀಕರಣ ಮಾಡಲಾಗಿದೆ. ಮುಳಬಾಗಿಲು ತಾಲೂಕಿನ ಗುತ್ತಿಗೆದಾರನೊಬ್ಬ ಗುತ್ತಿಗೆ ಪಡೆದಿದ್ದು, ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಜಡಿ ಮಳೆಯಾಗುತ್ತಿದೆ. ಮಳೆಯನ್ನು ಲೆಕ್ಕಿಸದೆ ಗುತ್ತಿಗೆದಾರ ತನ್ನ ಕೆಲಸ ಮುಗಿಸಿ ಹೊರಟಿದ್ದಾನೆ. ಮಳೆಯಲ್ಲಿ ಡಾಂಬರೀಕರಣ ಮಾಡಿದರೆ ಬೆನ್ನಲ್ಲೆ ಹಾಕಿದ್ದ ಡಾಂಬರು ಹಾಕಿದ ಒಂದೆ ದಿನದಲ್ಲಿ ಕಿತ್ತು ಬರುತ್ತಿದೆ.

ಇದನ್ನೂ ಓದಿ: Kolar: ಅಗ್ನಿಪಥ್​ಗೆ ಸೇರುವ ಯುವಕರ ಆಸೆಗೆ ನೆರವಾಗುತ್ತಿದೆ ಕೋಲಾರ ಸ್ಪೋರ್ಟ್ಸ್​ ಕ್ಲಬ್

ಸಿಂಹ ಘರ್ಜನೆ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಸನ್ನ ಕುಮಾರ್ ಮತ್ತು ಕಾರ್ಯಕರ್ತರು ರಸ್ತೆಯಲ್ಲಿ ಪೂಜೆ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ. ಕಳಪೆ ಕಾಮಗಾರಿ ಸ್ಥಳದಲ್ಲಿ ಪೂಜೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿ ಗಮನ ಸೆಳೆದಿದ್ದಾರೆ. ಮಳೆಯಲ್ಲಿ ಡಾಂಬರೀಕರಣ ಬೇಡ ಮಳೆ ನಿಂತಮೇಲೆ ಹಾಕಿ ಎಂದು ಗ್ರಾ.ಪಂ ಸದಸ್ಯರೂ ಗ್ರಾಮಸ್ಥರು ಮನವಿ ಮಾಡಿದರು ಗುತ್ತಿಗೆದಾರ ಲೆಕ್ಕಿಸದೆ ಇಂಥ ಕೆಲಸ ಮಾಡಿದ್ದಾನೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Karnataka Weather: ಕರಾವಳಿ ಜಿಲ್ಲೆಗಳಿಗೆ ಇಂದು, ನಾಳೆ ಆರೆಂಜ್ ಅಲರ್ಟ್ ಘೋಷಣೆ! ಬೆಂಗಳೂರಿನಲ್ಲಿ ಇನ್ನು ಎರಡು ದಿನ ಮಳೆ

ವರ್ಷದಲ್ಲಿ ಎರಡನೇ ಬಾರಿ ತುಂಬಿ ಹರಿಯುತ್ತಿದೆ ಕೋಲಾರದ ಮಿನಿ ಕೆ.ಆರ್.ಎಸ್:

ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ, ಬಯಲು ಸೀಮೆ ಕೋಲಾರದಲ್ಲಿರುವ ಏಕೈಕ ಡ್ಯಾಂ ಮೈಸೂರಿನಲ್ಲಿರುವ ಕೆ.ಆರ್.ಎಸ್(KRS Dam) ರೀತಿಯಲ್ಲಿ ಇದು ಬಯಲು ಸೀಮೆಗೆ ಮಿನಿ ಕೆ.ಆರ್.ಎಸ್ ಎಂದೇ ಪ್ರಸಿದ್ದಿ, ಮಳೆ ಇಲ್ಲದೆ ಹತ್ತಾರು ವರ್ಷಗಳಿಂದ ಬರಡಾಗಿದ್ದ ಡ್ಯಾಂನಲ್ಲಿ ನೀರು ತುಂಬಿದ್ದೇ ತಡ ಅದು ತನ್ನ ಸೌಂದರ್ಯದಿಂದಲೇ ಸಾವಿರಾರು ಜನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಮಾರ್ಕಂಡೇಯ ಅಣೆಕಟ್ಟು ಅಂದರೆ ಅದನ್ನು ಕೋಲಾರದ ಮಿನಿ ಕೆಆರ್ಎಸ್ ಎಂದು ಕರೆಯಲಾಗುತ್ತದೆ. ಮಾರ್ಕಂಡೇಯ ಆಣೆಕಟ್ಟು ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾದ ಈ ಬೃಹತ್ ಆಣೆಕಟ್ಟು ನೋಡಲು ಮೈಸೂರಿನ ಕೃಷ್ಣರಾಜಸಾಗರ ಅಣೆಕಟ್ಟಿನಂತೆ ಬಾಸವಾಗುತ್ತದೆ. ಆ ಕಾಲದಲ್ಲಿ ಈ ಭಾಗದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ನಿರ್ಮಾಣ ಮಾಡಲಾಗಿತ್ತು. ಕಳೆದ ಹದಿಮೂರು ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ಸರಿಯಾದ ಮಳೆ ಇಲ್ಲದೆ ಆಣೆಕಟ್ಟು ಒಣಗಿಹೋಗಿತ್ತು ಆದ್ರೆ ಕಳೆದೊಂದು ವರ್ಷದಲ್ಲಿ ಉತ್ತಮ ಮಳೆಯಾದ ಪರಿಣಾಮ ಒಂದೇ ವರ್ಷದಲ್ಲಿ ಇದು ಎರಡನೇ ಬಾರಿಗೆ ಅಣೆಕಟ್ಟು ತುಂಬಿ ಕೋಡಿ ಹರಿಯುವ ಮೂಲಕ ಜಿಲ್ಲೆಯ ಜನರನ್ನು ತನ್ನತ್ತ ಆಕರ್ಶಿಸುತ್ತಿದೆ.