ಜೆಡಿಎಸ್ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ: ಶಾಸಕ ಶ್ರೀನಿವಾಸಗೌಡ ವ್ಯಂಗ್ಯ

| Updated By: guruganesh bhat

Updated on: Oct 01, 2021 | 4:01 PM

4 ಬಾರಿ ಶಾಸಕನಾಗಿದ್ದೆ, ನನಗೂ ಆಸೆ ಆಕಾಂಕ್ಷೆಗಳಿದ್ದವು. ಆದರೆ ಎಚ್.ಡಿ.ಕುಮಾರಸ್ವಾಮಿ ನನಗೆ ಮಂತ್ರಿ ಸ್ಥಾನ ನೀಡಲೇ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ: ಶಾಸಕ ಶ್ರೀನಿವಾಸಗೌಡ ವ್ಯಂಗ್ಯ
ಶ್ರೀನಿವಾಸಗೌಡ
Follow us on

ಕೋಲಾರ: ಜೆಡಿಎಸ್ ವರಿಷ್ಠರ ವಿರುದ್ಧವೇ ಜೆಡಿಎಸ್ ಶಾಸಕರೋರ್ವರು ವಾಗ್ದಾಳಿ ನಡೆಸಿದ್ದಾರೆ. ಶ್ರೀನಿವಾಸಗೌಡ ಅವರೇ ಸ್ವಪಕ್ಷದ ವಿರುದ್ಧ ಹರಿಹಾಯ್ದ ಶಾಸಕ. ಜೆಡಿಎಸ್ ಪಕ್ಷ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ. ಎಲ್ಲಾ ಅಧಿಕಾರ ಹೆಚ್.ಡಿ.ದೇವೇಗೌಡ ಕುಟುಂಬಕ್ಕೆ ಬೇಕು. ಹಿರಿಯ ಶಾಸಕನಾಗಿದ್ದರೂ ಎಚ್.ಡಿ.ಕುಮಾರಸ್ವಾಮಿ ನನ್ನನ್ನು ಮಂತ್ರಿ ಮಾಡಿಲ್ಲ. 4 ಬಾರಿ ಶಾಸಕನಾಗಿದ್ದೆ, ನನಗೂ ಆಸೆ ಆಕಾಂಕ್ಷೆಗಳಿದ್ದವು. ಆದರೆ ಎಚ್.ಡಿ.ಕುಮಾರಸ್ವಾಮಿ ನನಗೆ ಮಂತ್ರಿ ಸ್ಥಾನ ನೀಡಲೇ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಕೆ.ಸಿ.ವ್ಯಾಲಿ ನೀರಿನ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ಮಾಡಿದ್ದರು. ನನಗೇ ಬೇಜಾರಾಗಿ ಇವರ ಸಹವಾಸ ಸಾಕೆಂದು ಜೆಡಿಎಸ್ ಬಿಟ್ಟಿದ್ದೇನೆ. ಕಾಂಗ್ರೆಸ್ ನನ್ನನ್ನು ಮಂತ್ರಿ ಮಾಡಿತ್ತು. ಆದರೆ ಜೆಡಿಎಸ್ ನನಗೆ ಮಂತ್ರಿ ಸ್ಥಾನ ನೀಡಲಿಲ್ಲ ಎಂದು ಅವರು ಹರಿಹಾಯ್ದರು. ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆ ರಾಜಕೀಯ ಪ್ರೇರಿತವಾದದ್ದು. ಪಾತಾಳಕ್ಕೆ ಕುಸಿದಿದ್ದ ಬ್ಯಾಂಕ್​ನ್ನು ಅಧ್ಯಕ್ಷ ಗೋವಿಂದ ಗೌಡ ಉನ್ನತ ಸ್ಥಾನಕ್ಕೆ ತಂದಿದ್ದಾರೆ. ಸಮಯ ಬಂದರೆ ವಿಧಾನಸಭಾ ಅಧಿವೇಶನದಲ್ಲಿ ಡಿಸಿಸಿ ಬ್ಯಾಂಕ್ ಬಗ್ಗೆ ಧ್ವನಿ ಎತ್ತುತ್ತೇನೆ ಎಮದು ಅವರು ತಿಳಿಸಿದರು.

ಇದನ್ನೂ ಓದಿ: 

ಕುಮಾರಸ್ವಾಮಿ ಅವರಲ್ಲಿ ಇಷ್ಟವಾದ ಗುಣಗಳೇನು? ಜೆಡಿಎಸ್ ಸಂಘಟನಾ ಕಾರ್ಯಗಾರದಲ್ಲಿ ಟಿಕೆಟ್ ಆಕಾಂಕ್ಷಿಗಳಿಗೆ ಕಠಿಣ ಪರೀಕ್ಷೆ!

Temple Tour: ಕೋಲಾರದಲ್ಲಿದೆ ದಿನಕರನ ಏಕೈಕ ದಿವ್ಯ ಮಂದಿರ

Published On - 4:00 pm, Fri, 1 October 21