ಕೋಲಾರ: ಅವೆಲ್ಲಾ ದೇವಾಲಯಗಳೆ ಆದರೂ ಅಲ್ಲಿ ಏನೇನೋ ನಡೆಯುತ್ತದೆ, ಅಲ್ಲಿ ಏನೇನು ಇರುತ್ತದೆ, ಅಲ್ಲಿರುವ ಧರ್ಮ (religion) ಗುರು ಹೇಳಿದ್ದನ್ನ ಚಾಚು ತಪ್ಪದೆ ಮಾಡುತ್ತಾರೆ ಅಲ್ಲಿದಂಲೆ ಎಲ್ಲವೂ ಹುಟ್ಟು ಹಾಕುತ್ತೆ ಅನ್ನೂ ಹಲವು ಅನುಮಾನಗಳು, ಗುಮಾನಿಗಳೊಂದಿಗೆ ಒಂದು ರೀತಿಯ ವಿವಾದಗಳು ಸೃಷ್ಟಿಯಾಗಿತ್ತು. ಇಂತಹ ಹಲವು ವಿವಾದಕ್ಕೆ ತೆರೆ ಎಳೆಯಲು ಮಸೀದಿ (mosque) ಮುಕ್ತವಾಗಿ ಪ್ರವೇಶ ನೀಡುವ ವಿಭಿನ್ನ ಪ್ರಯತ್ನವೊಂದಕ್ಕೆ ಕೋಲಾರ ಸಾಕ್ಷಿಯಾಗಿದೆ. ಹೌದು ಕೋಮು ಗಲಭೆ ಸೇರಿದಂತೆ ಮತೀಯ ಗಲಭೆಗಳಿಂದ ರಾಜ್ಯದಲ್ಲಿ ಸದ್ದು ಮಾಡುತ್ತಿದರೆ ಇತ್ತ ಕೋಲಾರದಲ್ಲಿ ವಿಭಿನ್ನ ಕಾರ್ಯಕ್ರಮದ ಮೂಲಕ ಸಾಮರಸ್ಯಕ್ಕೆ ವೇದಿಕೆಯೊಂದು ಸಿದ್ದವಾಗಿದೆ. ಅದಕ್ಕಾಗಿ ಇಂದು ಮುಸ್ಲಿಂ ಮುಖಂಡರು ಕೋಲಾರ ನಗರದ ಅಮ್ಮವಾರಿಪೇಟೆಯಲ್ಲಿರುವ ಜಾಮಿಯಾ ಮಸೀದಿಯನ್ನ ಸುಂದರವಾಗಿ ಅಲಂಕರಿಸಿ ಎಲ್ಲರಿಗೂ ಪ್ರವೇಶ ಅನ್ನೋ ನಾಮ ಫಲಕ ಹಾಕಿ ಸ್ವಾಗತ ಮಾಡಿದರು.
ಕೋಲಾರದ ಮುಸ್ಲಿಮರು ನಮ್ಮೂರ ಮಸೀದಿ ನೋಡ ಬನ್ನಿ ಎಂಬ ವಿಭಿನ್ನ ಕಾರ್ಯಕ್ರಮ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಮಸೀದಿಯಲ್ಲಿ ಏನೆಲ್ಲ ನಡೆಯುತ್ತೆ ಅನ್ನೋ ವಿಚಾರಗಳು ಚರ್ಚೆಗೆ ಬಂದಿತ್ತು, ಅದರಲ್ಲೂ ಹಿಜಾಬ್, ಹಲಾಲ್ ಸೇರಿದಂತೆ ಹಲವು ವಿಚಾರಗಳು ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನ ಕದಡಲು ಕಾರಣವಾಗಿತ್ತು. ಇಂತಹ ಸನ್ನಿವೇಶದಲ್ಲಿ ಕೋಲಾರ ನಗರದ ಅಮ್ಮವಾರಿಪೇಟೆ ವೃತ್ತದಲ್ಲಿರುವ ಜಾಮಿಯಾ ಮಸೀದಿಯಲ್ಲಿ ವಿಭಿನ್ನ ಕಾರ್ಯಕ್ರಮ ಮಾಡುವ ಮೂಲಕ ಮುಸ್ಲಿಂರು ಗಮನ ಸೆಳೆದರು.
ಅನ್ನ ಧರ್ಮಿಯ ಮಹಿಳೆಯರಿಗೂ ಪ್ರವೇಶ!
ವಿಶೇಷವಾಗಿ ಈ ಹಿಂದೆ ಮಸೀದಿ ಒಳಗೆ ಅನ್ಯ ಧರ್ಮಿಯರು, ಮಹಿಳೆಯರಿಗೆ ಕೆಲವು ನಿರ್ಬಂಧಗಳನ್ನ ಹೇರಲಾಗಿತ್ತು. ಆದರೆ ಇದೆಲ್ಲದಕ್ಕೂ ಮುಕ್ತ ಹೇಳುವ ಸಲುವಾಗಿ ಎಲ್ಲರಿಗೂ ಮುಕ್ತವಾಗಿ ಮಸೀದಿಗೆ ಸ್ವಾಗತ ಮಾಡಿ ಮಸೀದಿಗೆ ಪ್ರವೇಶ ಕೊಟ್ಟವರಿಗೆ ಸಾಕಷ್ಟು ಜನ ಗೈಡ್‌ಗಳು ಮಸೀದಿಯಲ್ಲಿ ಪ್ರಾರ್ಥನೆ ಸೇರಿದಂತೆ ಶಿಸ್ತು, ಎಲ್ಲವನ್ನ ತಿಳಿಸಿಕೊಟ್ಟರು. ಇನ್ನೂ ಹಿಂದೂ, ಕ್ರಿಶ್ಚಿಯನ್, ಮಹಿಳೆಯರು, ಮಕ್ಕಳು ಎಲ್ಲರಿಗೂ ಮಸೀದಿ ಹಾಗೂ ಪ್ರಾರ್ಥನೆ ಸಂಬಂಧ ಇದ್ದ ಎಲ್ಲಾ ವಿಚಾರಗಳ ಕುರಿತು ತಿಳಿಸಿಕೊಡಲಾಗಿದೆ.
ಕಾರ್ಯಕ್ರಮಕ್ಕೆ ಗಣ್ಯರ ದಂಡು ಆಗಮನ
ಇನ್ನೂ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗದೆ ಶಾಸಕರಾದ ಶ್ರೀನಿವಾಸಗೌಡ, ರಮೇಶ್ ಕುಮಾರ್, ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್, ಗೋವಿಂದರಾಜು ಸೇರಿದಂತೆ ಹಲವು ಗಣ್ಯರು ಮಸೀದಿ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅದರಂತೆ ಸಾವಿರಾರು ಜನರು ಮಸೀದಿ ನೋಡಲು ಬಂದು ಮಸೀದಿಯನ್ನ ವೀಕ್ಷಣೆ ಮಾಡಿ ತೆರಳಿದ್ರು. ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಮಸೀದಿ ವೀಕ್ಷಣೆ ಮಾಡಿ ತಮ್ಮ ಅನುಭವಗಳನ್ನ ಹೀಗೆ ಹಂಚಿಕೊಂಡರು. ಕೋಲಾರದಲ್ಲಿ ಈ ಹಿಂದೆ ದಲಿತರ ಗೃಹ ಪ್ರವೇಶ ಅನ್ನೋ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿಯಾದಂತೆ ಸದ್ಯ ಮಸೀದಿ ದರ್ಶನ ಅನ್ನೋ ಕಾರ್ಯಕ್ರಮವೂ ಹೊಸ ಸಂಚಲನ ಮೂಡಿಸಿದೆ.
ವರದಿ: ರಾಜೇಂದ್ರ ಸಿಂಹ, ಟಿವಿ9, ಕೋಲಾರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:25 pm, Sun, 6 November 22