ಕೋಲಾರ: ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನಾ(Loan Waiver of Women’s Self Help Groups) ಮಾಡಬೇಕೆನ್ನುವ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಅದರಲ್ಲೂ ಕೋಲಾರ ಜಿಲ್ಲೆಯಲ್ಲಿ ನಿತ್ಯ ಮಹಿಳೆಯರು ಹೋರಾಟ ನಡೆಸುತ್ತಿದ್ದಾರೆ. ಗ್ರಾಮಗಳಿಗೆ ಸಾಲ ವಸೂಲಿಗೆ ಬಂದ ಡಿಸಿಸಿ ಬ್ಯಾಂಕ್(DCC Bank) ಸಿಬ್ಬಂದಿಗಳನ್ನು ಗ್ರಾಮದಿಂದ ಓಡಿಸುತ್ತಿದ್ದರು. ಆದ್ರೆ ಇಂದು ಒಂದು ಹೆಜ್ಜೆ ಮುಂದಿಟ್ಟಿದ್ದು ಸಾಲ ವಸೂಲಿಗೆ ಬಂದ ಸಿಬ್ಬಂದಿ ಮೇಲಿನ ಆಕ್ರೋಶದ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಡಿಸಿಸಿ ಬ್ಯಾಂಕ್ ಸಿಬ್ಬಂದಿಯದ್ದು ಎಂದುಕೊಂಡು ತಮ್ಮೂರಿನವರ ಬೈಕ್ಗೆ ಬೆಂಕಿ ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆ.
ಹೌದು, ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಶಾಸಕರುಗಳು ಹಾಗೂ ಮಾಜಿ ಶಾಸಕರುಗಳು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಯಾರೊಬ್ಬರೂ ಮಹಿಳೆಯರ ಪರವಾಗಿ ದ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿ ಕೋಲಾರದಲ್ಲಿ ಮಹಿಳೆಯರು ಪ್ರತಿ ದಿನ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗೂ ಸಾಲ ವಸೂಲಿಗೆ ಬರುವ ಡಿಸಿಸಿ ಬ್ಯಾಂಕ್ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಬೈದು ಕಳಿಸುತ್ತಿದ್ದಾರೆ. ಆದ್ರೆ ಇಂದು ಎಡವಟ್ಟು ಮಾಡಿಕೊಂಡಿದ್ದಾರೆ. ಸಾಲ ವಸೂಲಿಗೆ ಬಂದ ಸಿಬ್ಬಂದಿಯ ಬೈಕ್ ಎಂದು ತಿಳಿದು ತಮ್ಮೂರಿನವರ ಬೈಕ್ಗೆ ಬೆಂಕಿ ಹಚ್ಚಿದ್ದಾರೆ. ಬಳಿಕ ತಮ್ಮದೆ ಗ್ರಾಮಸ್ಥರಂದು ಎಂದು ತಿಳಿದು ಗ್ರಾಮಸ್ಥರು ಬೆಂಕಿ ಹಾರಿಸಿದ್ದಾರೆ.
ಇದನ್ನೂ ಓದಿ: Kolar News: ಸ್ತ್ರೀಶಕ್ತಿ ಸಂಘದ ಸಾಲ ಕಟ್ಟಿ ಎಂದು ಮನೆಗೆ ಬಂದ ಬ್ಯಾಂಕ್ ಅಧಿಕಾರಿಗೆ ಮಹಿಳೆಯರಿಂದ ತರಾಟೆ
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಬಿಸ್ನಹಳ್ಳಿಯಲ್ಲಿ ಗೋಕುಂಟೆ ಸೊಸೈಟಿಯಲ್ಲಿ ಸಾಲ ಪಡೆದಿದ್ದ ಗ್ರಾಮದ ಮಹಿಳೆಯರು ಬೈಕ್ಗೆ ಬೆಂಕಿ ಹಚ್ಚಿದ್ದರು. ಇಷ್ಟೇ ಅಲ್ಲದೆ ಸಾಲ ವಸೂಲಿಗೆ ಬಂದ ಸಿಬ್ಬಂದಿ ಮೇಲೆ ಮಹಿಳೆರು ಹಲ್ಲೆಗೆ ಯತ್ನಿಸಿದ ಘಟನೆ ಸಹ ನಡೆದಿದೆ. ಸಾಲ ಮರುಪಾವತಿ ಮಾಡಲ್ಲ ಅಂತಾ ಬಿಸ್ನಹಳ್ಳಿ ಮಹಿಳೆಯರು ಪಟ್ಟು ಹಿಡಿದಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೋಲಾರ ಡಿಸಿಸಿ ಬ್ಯಾಂಕ್ ಸಿಬ್ಬಂದಿಗೆ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಂದ ಸಾಲ ವಸೂಲಿ ಮಾಡೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಾಲ ಕೇಳಲು ಹೋಗುವ ಬ್ಯಾಂಕ್ ಸಿಬ್ಬಂದಿ ಮೇಲೆ ಗ್ರಾಮದ ಮಹಿಳೆಯರು ಹರಿಹಾಯ್ದು ಬೀಳುತ್ತಿದ್ದಾರೆ. ಅಷ್ಟೇ ಅಲ್ಲ ನಾವು ಯಾವುದೇ ಕಾರಣಕ್ಕೂ ಸಾಲ ಕಟ್ಟೋದಿಲ್ಲ ಎಂದು ಖಡಕ್ಕಾಗಿ ಹೇಳಿ ವಾಪಸ್ ಕಳಿಸುತ್ತಿದ್ದಾರೆ. ಒಂದು ವೇಳೆ ಬಲವಂತ ಮಾಡಿದ್ರೆ, ತಕ್ಕ ಶಾಸ್ತಿ ಮಾಡ್ತೀವಿ ಅನ್ನೋ ಮಾತುಗಳನ್ನಾಡುತ್ತಿದ್ದಾರೆ.
ಸದ್ಯಕ್ಕೆ, ಸಾಲ ಕೊಟ್ಟಿರುವ ಡಿಸಿಸಿ ಬ್ಯಾಂಕ್ನವರಿಗೆ ಹೋಬಳಿ ಮಟ್ಟದ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಾಲ ಕೊಟ್ಟಿರುವ ಸೊಸೈಟಿಗಳಿಗೆ ಸಾಲ ವಸೂಲಿ ಮಾಡೋದೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದ್ದು, ಸಾಲ ವಸೂಲಿಯಾಗದೆ ಬ್ಯಾಂಕ್ನ್ನು ಹೇಗಪ್ಪಾ ಮುನ್ನಡೆಸೋದು ಅನ್ನೋ ಆತಂಕ ಶುರುವಾಗಿದೆ. ಜೊತೆಗೆ ಸಾಲ ಸರಿಯಾಗಿ ಮರುಪಾವತಿ ಮಾಡಲಿಲ್ಲ ಎಂದರೆ ಮಹಿಳೆಯರಿಗೇ ಹೊರೆಯಾಗುತ್ತದೆ ಅನ್ನೋದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರ ಅಭಿಪ್ರಾಯಪಟ್ಟಿದ್ದಾರೆ.
ಕೋಲಾರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:02 pm, Thu, 22 June 23