ಯುವತಿ ಮೇಲೆ ಹಲ್ಲೆ ನಡೆಸಿ, ರಾತ್ರೋ ರಾತ್ರಿ ಮನೆ ಧ್ವಂಸಗೊಳಿಸಿದ ಕಿಡಿಗೇಡಿಗಳು

|

Updated on: Jan 07, 2020 | 8:25 PM

ಕೋಲಾರ: ಯುವತಿ ಒಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿ ಹಲ್ಲೆ ನಡೆಸಿ ಜೆಸಿಬಿಯಿಂದ ಮನೆ ಧ್ವಂಸಗೊಳಿಸಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಇಂದಿರಾನಗರದಲ್ಲಿ ನಡೆದಿದೆ. ಕಾವ್ಯಾ ಎಂಬ ಯುವತಿ ಕಳೆದ ಎರಡು ವರ್ಷಗಳಿಂದ ಆಶ್ರಯ ಯೋಜನೆಯಡಿ ನೀಡಲಾಗಿದ್ದ ಮನೆಯಲ್ಲಿ ವಾಸವಾಗಿದ್ದರು. ಮನೆ ವಿಚಾರಕ್ಕೆ ಸಂಬಂಧಿಸಿ ಕಾವ್ಯಾ ತಾಯಿ ಜಯಮ್ಮ ಹಾಗೂ ವಿಜಯಮ್ಮ ಎಂಬುವವರ ನಡುವೆ ವಿವಾದವಿತ್ತು. ಈ ವಿವಾದ ಪ್ರಕರಣ ಕೋರ್ಟ್‌ನಲ್ಲಿರುವಾಗಲೇ ರೌಡಿಗಳಿಂದ ಜೀವ ಬೆದರಿಕೆ ಹಾಕಿ ಜಯಮ್ಮ ಪುತ್ರಿ ಕಾವ್ಯಾ ಮೇಲೆ ಹಲ್ಲೆ ಮಾಡಿ, ರಾತ್ರೋ […]

ಯುವತಿ ಮೇಲೆ ಹಲ್ಲೆ ನಡೆಸಿ, ರಾತ್ರೋ ರಾತ್ರಿ ಮನೆ ಧ್ವಂಸಗೊಳಿಸಿದ ಕಿಡಿಗೇಡಿಗಳು
Follow us on

ಕೋಲಾರ: ಯುವತಿ ಒಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿ ಹಲ್ಲೆ ನಡೆಸಿ ಜೆಸಿಬಿಯಿಂದ ಮನೆ ಧ್ವಂಸಗೊಳಿಸಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಇಂದಿರಾನಗರದಲ್ಲಿ ನಡೆದಿದೆ. ಕಾವ್ಯಾ ಎಂಬ ಯುವತಿ ಕಳೆದ ಎರಡು ವರ್ಷಗಳಿಂದ ಆಶ್ರಯ ಯೋಜನೆಯಡಿ ನೀಡಲಾಗಿದ್ದ ಮನೆಯಲ್ಲಿ ವಾಸವಾಗಿದ್ದರು.

ಮನೆ ವಿಚಾರಕ್ಕೆ ಸಂಬಂಧಿಸಿ ಕಾವ್ಯಾ ತಾಯಿ ಜಯಮ್ಮ ಹಾಗೂ ವಿಜಯಮ್ಮ ಎಂಬುವವರ ನಡುವೆ ವಿವಾದವಿತ್ತು. ಈ ವಿವಾದ ಪ್ರಕರಣ ಕೋರ್ಟ್‌ನಲ್ಲಿರುವಾಗಲೇ ರೌಡಿಗಳಿಂದ ಜೀವ ಬೆದರಿಕೆ ಹಾಕಿ ಜಯಮ್ಮ ಪುತ್ರಿ ಕಾವ್ಯಾ ಮೇಲೆ ಹಲ್ಲೆ ಮಾಡಿ, ರಾತ್ರೋ ರಾತ್ರಿ ಮನೆ ಧ್ವಂಸ ಮಾಡಲಾಗಿದೆ. ಮನೆಯಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿವೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.