Kolar: ಮೊಬೈಲ್ ಫೋನ್ ಸಾಗಿಸುತ್ತಿದ್ದ ಲಾರಿ ದರೋಡೆ; 6 ಕೋಟಿ ಮೌಲ್ಯದ ಎಂಐ ಫೋನ್​ಗಳ ಕಳ್ಳತನ

| Updated By: ganapathi bhat

Updated on: Aug 06, 2021 | 4:38 PM

Crime News: ತಮಿಳುನಾಡಿನ ಕಾಂಚಿಪುರಂನಿಂದ ಬೆಂಗಳೂರಿಗೆ ಮೊಬೈಲ್ ಲೋಡ್ ಬರುತ್ತಿತ್ತು. ಆಗ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇ ಘಟನೆ ನಡೆದಿದೆ. ಸುಮಾರು ಆರು ಕೋಟಿ ಮೌಲ್ಯದ ಮೊಬೈಲ್​ಗಳು ದರೋಡೆ ಆಗಿವೆ ಎಂದು ತಿಳಿದುಬಂದಿದೆ.

Kolar: ಮೊಬೈಲ್ ಫೋನ್ ಸಾಗಿಸುತ್ತಿದ್ದ ಲಾರಿ ದರೋಡೆ; 6 ಕೋಟಿ ಮೌಲ್ಯದ ಎಂಐ ಫೋನ್​ಗಳ ಕಳ್ಳತನ
ಕೋಲಾರದಲ್ಲಿ ಲಾರಿ ದರೋಡೆ
Follow us on

ಕೋಲಾರ: ಮೊಬೈಲ್ ಫೋನ್ ಸಾಗಿಸುತ್ತಿದ್ದ ಲಾರಿ ದರೋಡೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗ್ರಾಮ ದೇವರಾಯಸಮುದ್ರ ಬಳಿಯ ರಾಷ್ಟ್ರೀಯ ಹೆದ್ದಾರೆ 75 ರಲ್ಲಿ ನಡೆದಿದೆ. ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ದರೋಡೆ ಆಗಿದೆ ಎಂದು ತಿಳಿದುಬಂದಿದೆ. ಎಂಐ ಕಂಪನಿಗೆ ಸೇರಿದ ಮೊಬೈಲ್ ಫೋನ್‌ಗಳ ದರೋಡೆ ಮಾಡಲಾಗಿದ್ದು, ಮೊಬೈಲ್​ನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಕೃತ್ಯ ನಡೆದಿದೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ತಮಿಳುನಾಡಿನ ಕಾಂಚಿಪುರಂನಿಂದ ಬೆಂಗಳೂರಿಗೆ ಮೊಬೈಲ್ ಲೋಡ್ ಬರುತ್ತಿತ್ತು. ಆಗ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇ ಘಟನೆ ನಡೆದಿದೆ. ಸುಮಾರು ಆರು ಕೋಟಿ ಮೌಲ್ಯದ ಮೊಬೈಲ್​ಗಳು ದರೋಡೆ ಆಗಿವೆ ಎಂದು ತಿಳಿದುಬಂದಿದೆ.

ಚಿಕ್ಕಮಗಳೂರು: ದರೋಡೆಕೋರರನ್ನು ಬಂಧಿಸಿದ ಪೊಲೀಸರಿಗೆ ಮೆಚ್ಚುಗೆ; 1 ಲಕ್ಷ ರೂ. ಬಹುಮಾನ
ಹೈಟೆಕ್ ದರೋಡೆಕೋರರನ್ನು ಬಂಧಿಸಿದ ಪೊಲೀಸರಿಗೆ ಜುಲೈ 20ರಂದು ಡಿಜಿ ಐಜಿಪಿ ಪ್ರವೀಣ್ ಸೂದ್ ಬಹುಮಾನ ಘೋಷಿಸಿದ್ದರು. ಹೈಟೆಕ್ ದರೋಡೆಕೋರರನ್ನು ಬಂಧಿಸಿದ ಪೊಲೀಸರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇವರಿಗೆ 1 ಲಕ್ಷ ಬಹುಮಾನ ನೀಡಿ ಗೌರವಿಸಿದ್ದರು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪೊಲೀಸರ ಕಾರ್ಯಾಚರಣೆ ವೇಳೆ ಹೆದ್ದಾರಿಯಲ್ಲಿ ದರೋಡೆ ಮಾಡಲು ಯತ್ನಿಸುತ್ತಿದ್ದ ನಾಲ್ವರು ಹೈಟೆಕ್ ಕಳ್ಳರು ಸೆರೆ ಸಿಕ್ಕಿದ್ದರು. ಬಂಧಿತರಿಂದ 10 ಸಾವಿರ ನಗದು ಸೇರಿದಂತೆ 2 ರಿವಾಲ್ವರ್, 30 ಬುಲೆಟ್ಸ್, ಚಾಕು, ಬೈಕ್ ವಶಕ್ಕೆ ಪಡೆಯಲಾಗಿತ್ತು. ತನಿಖೆ ವೇಳೆ ಉತ್ತರ ಪ್ರದೇಶದಿಂದ ರಿವಾಲ್ವರ್ ಖರೀದಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು.

ಜೂಜಾಟದ ಅಡ್ಡೆಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ನಾಲ್ವರ ಈ ತಂಡ, ಜೂಜಾಡುತ್ತಿದ್ದ ಸ್ಥಳಕ್ಕೆ ಹೋಗಿ ಗಾಳಿಯಲ್ಲಿ ಫೈರ್ ಮಾಡಿ ಹಣ ದೋಚುತ್ತಿದ್ದರು. ಅಲ್ಲದೆ ಗ್ಯಾಂಗ್ ವಾರ್ ನಡೆಸುವುದಕ್ಕೆ ಈ ತಂಡ ಹೊಂಚುಹಾಕಿತ್ತು. ಇನ್ನು ಕೆಲವು ದಿನಗಳ ಹಿಂದೆ ಹಾಸನದ ಸಮೀಪ ಯಾಚನಹಳ್ಳಿ ಚೇತನ್ ಮೇಲೆ ಫೈರ್ ಕೂಡ ಮಾಡಿದ್ದರು. ಸದ್ಯ ಮಂಡ್ಯದ ಶಿವಕುಮಾರ್, ಹೊಳೆನರಸೀಪುರದ ಕುಮಾರಸ್ವಾಮಿ, ಜಾರ್ಖಂಡ್ ಮೂಲದ ಅಜಯ್ ಕುಮಾರ್ ಸಿಂಗ್, ಮೂಡಿಗೆರೆಯ ಶಿವಕುಮಾರ್​ರನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ: Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್​ನಲ್ಲಿ ದರೋಡೆ!

ಎಟಿಎಂ ದರೋಡೆ ಕೇಸ್ ತನಿಖೆ ವೇಳೆ ಕಾರು ಕಳ್ಳತನ ಬೆಳಕಿಗೆ; 1.80 ಕೋಟಿ ರೂ ಮೌಲ್ಯದ 20 ಕಾರುಗಳ ಜಪ್ತಿ

(Mobile Theft Lorry Robbery in Kolar 6 Crore Loss estimated MI Mobile Phones Robbery)

Published On - 4:29 pm, Fri, 6 August 21