ಕೋಲಾರ ಬಸ್​ ನಿಲ್ದಾಣದಲ್ಲಿ ಸೀಟಿಗಾಗಿ ಮಹಿಳೆಯರ ಕಿತ್ತಾಟ. ಪೊಲೀಸರಿಂದ ಲಾಠಿಚಾರ್ಜ್

| Updated By: ರಮೇಶ್ ಬಿ. ಜವಳಗೇರಾ

Updated on: Jul 04, 2023 | 11:41 AM

ಬಸ್​ ಸೀಟಿಗಾಗಿ ಮಹಿಳೆಯರ ನಡುವೆ ಶುರುವಾದ ಮಾತಿನ ಚಕಮಕಿ ದೊಡ್ಡ ಗಲಾಟೆಯಾಗಿ ಮಾರ್ಪಟ್ಟಿದ್ದು, ಅದನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.

ಕೋಲಾರ ಬಸ್​ ನಿಲ್ದಾಣದಲ್ಲಿ ಸೀಟಿಗಾಗಿ ಮಹಿಳೆಯರ ಕಿತ್ತಾಟ. ಪೊಲೀಸರಿಂದ ಲಾಠಿಚಾರ್ಜ್
ಕೋಲಾರದಲ್ಲಿ ಪೊಲೀಸರಿಂದ ಲಾಠಿಚಾರ್ಜ್
Follow us on

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ(Free Bus For Women) ಕಲ್ಪಿಸುವ ಶಕ್ತಿ ಯೋಜನೆಗೆ(Shakti Yojana) ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಕೆಎಸ್​​ಆರ್​ಟಿಸಿ (KSRTC), ಬಿಎಂಟಿಸಿ, ಕೆಕೆಆರ್​ಟಿಸಿ, NWRTC ನಾಲ್ಕು ನಿಗಮದ ಸಾರಿಗೆಗಳಲ್ಲಿ ಮಹಿಳೆಯರ ಸಂಚಾರ ಸಂಖೆಯಲ್ಲಿ ಹೆಚ್ಚಳವಾಗಿದೆ. ಆದ್ರೆ, ಕೆಲವೆಡೆ ಗಲಾಟೆಗಳು ನಡೆದಿರುವ ಪ್ರಸಂಗಗಳು ಬೆಳಕಿಗೆ ಬಂದಿವೆ. ಇದಕ್ಕೆ ಪೂರಕವೆಂಬಂತೆ ಕೋಲಾರ(Kolar) ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿಸೀಟ್​​ಗಾಗಿ ಮಹಿಳೆಯರ ನಡುವೆ ಕಿತ್ತಾಟ ನಡೆದಿದ್ದು, ಇದನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.

ಇದನ್ನೂ ಓದಿ: Shakti Scheme: ಶಕ್ತಿ ಯೋಜನೆ ಜಾರಿ ನಂತರ ಕರ್ನಾಟಕದ ಸಾರಿಗೆ ನಿಗಮಗಳ ಸರಾಸರಿ ಆದಾಯದಲ್ಲಿ ಹೆಚ್ಚಳ

ಕೋಲಾರಿಂದ ಬೆಂಗಳೂರಿಗೆ ತೆರಳುವ ಬಸ್​​​ನಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರ ಕಿತ್ತಾಡಿಕೊಂಡಿದ್ದಾರೆ. ಬಸ್​​ ಸೀಟು ಹಿಡಿಯಲು ಓರ್ವ ಮಹಿಳೆ ಕಿಟಕಿಯಿಂದ ಬ್ಯಾಗ್ ಹಾಕಿದ್ದಾಳೆ. ಬ್ಯಾಗ್​ ಹಾಕಿದ್ದ ಸೀಟ್​ನಲ್ಲಿ ಬೇರೆ ಮಹಿಳೆ ಬಂದು ಕುಳಿತ್ತಿದ್ದಕ್ಕೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಸಾಲದಕ್ಕೆ ಸ್ಥಳಕ್ಕೆ ತನ್ನ ಸಂಬಂಧಿಕರನ್ನು ಕರೆಸಿ ಮಹಿಳೆ ದೊಡ್ಡ ಗಲಾಟೆ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಜನರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಅಲ್ಲದೇ ಈ ಗಲಾಟೆ ಪ್ರಕರಣರಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿ ಕೆಎಸ್​​ಆರ್​ಟಿಸಿ, ಬಿಎಂಟಿಸಿ, ಕೆಕೆಆರ್​ಟಿಸಿ, NWRTC ನಾಲ್ಕು ನಿಗಮದ ಸಾರಿಗೆಗಳಲ್ಲಿ ಈವರೆಗೆ ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ 10 ಕೋಟಿ ಸನಿಹದಲ್ಲಿದೆ. ಇದರಿಂದ ಸಾರಿಗೆ ನಿಗಮಗಳಲ್ಲಿ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 222 ಕೋಟಿ ರೂಪಾಯಿ ದಾಟಿದೆ.

ಯೋಜನೆ ಘೋಷಣೆ ಮಾಡದ ಆರಂಭದಲ್ಲಿ ರಾಜ್ಯದ ಹಲವೆಡೆ ಮಹಿಳಾ ಪ್ರಯಾಣಿಕರು ಹಾಗೂ ಕಂಡಕ್ಟರ್-ಚಾಲಕರ ನಡುವೆ ವಾಗ್ವಾದಗಳು, ಗಲಾಟೆಗಳು ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

Published On - 11:40 am, Tue, 4 July 23