ಕಲ್ಲು ಕ್ವಾರಿಯಲ್ಲಿ ಸ್ಫೋಟಗೊಂಡು ಕಾರ್ಮಿಕ ಸಾವು: ಪ್ರಕರಣವನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ

| Updated By: ವಿವೇಕ ಬಿರಾದಾರ

Updated on: Oct 21, 2022 | 3:45 PM

ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಕಲ್ಲು ಕ್ವಾರಿಯಲ್ಲಿ ಸ್ಫೋಟಗೊಂಡು ಕಾರ್ಮಿಕ ಮೃತಪಟ್ಟ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ಚಿಂತೆನೆ ನಡೆಸಿದೆ.

ಕಲ್ಲು ಕ್ವಾರಿಯಲ್ಲಿ ಸ್ಫೋಟಗೊಂಡು ಕಾರ್ಮಿಕ ಸಾವು: ಪ್ರಕರಣವನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ
​​ಕಲ್ಲು ಕ್ವಾರಿಯಲ್ಲಿ ಸ್ಫೋಟಗೊಂಡು ಕಾರ್ಮಿಕ ಸಾವು ಪ್ರಕರಣ
Follow us on

ಕೋಲಾರ: ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಕಲ್ಲು ಕ್ವಾರಿಯಲ್ಲಿ (stone quarry) ಸ್ಫೋಟಗೊಂಡು ಕಾರ್ಮಿಕ ಮೃತಪಟ್ಟ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಜಿಲೆಟಿನ್ ಸ್ಫೋಟದಿಂದ ಅ. 14 ರಂದು ಬಿಹಾರ (Bihar) ಮೂಲದ ಕಾರ್ಮಿಕ ರಾಕೇಶ್ ಸಾಣಿ(33) ಮೃತಪಟ್ಟಿದ್ದನು. ಮಹಮದ್‌ ಎಂಬಾತನ ಎರಡು ಕೈ ಛಿದ್ರವಾಗಿದ್ದವು. ಪ್ರಕರಣವನ್ನು ಅಪಘಾತವೆಂದು ಮುಚ್ಚಿಹಾಕಲು‌ ಯತ್ನಿಸಲಾಗುತ್ತಿದೆ  ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾದ ಹಿನ್ನೆಲೆ ಪಾರದರ್ಶಕ ತನಿಖೆಯಾಗಬೇಕು ಎಂದು ಜಿಲ್ಲೆಯ ಬಿಜೆಪಿ ನಾಯಕರು ಒತ್ತಾಯಿಸಿದ್ದರು. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲು ಸರ್ಕಾರ ಚಿಂತನೆ ನಡೆಸಿದೆ.

ಘಟನೆ ಹಿನ್ನೆಲೆ

ಅಕ್ಟೋಬರ್​ 13 ರಂದು ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಕಲ್ಲು ಕ್ವಾರಿಯಲ್ಲಿ ಕಲ್ಲು ಕ್ವಾರಿಯಲ್ಲಿ ಸ್ಫೋಟಕ ಸಿಡಿದು ಬಿಹಾರ ಮೂಲದ ಕಾರ್ಮಿಕ ರಾಕೇಶ್ ಸಾಣಿ (34) ಸಾವನ್ನಪ್ಪಿದ್ದನು. ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಡಾಗ್ ಮತ್ತು ಬಾಂಬ್ ಸ್ಕ್ವಾಡ್ ತಂಡ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದವು

ಕೇಂದ್ರ ವಲಯ ಐಜಿ ಚಂದ್ರಶೇಖರ್ ಸ್ಪಷ್ಟನೆ

ಸ್ಥಳಕ್ಕೆ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಎಸ್ಪಿ ದೇವರಾಜ್ ಅವರಿಂದ ಮಾಹಿತಿ ಪಡೆದಿದು ಮಾತನಾಡಿದ್ದ ಅವರು  (ಅ. 13) ರಂದು ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಟ್ರಕ್ ನಿಂದ ಅಪಘಾತ ಆಗಿದೆ ಎಂದು ನಿತೀಶ್ ಕುಮಾರ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ದೂರು ಹಿನ್ನೆಲೆ ಪ್ರಕರಣ ದಾಖಲಾಗಿತ್ತು. ಬಿಹಾರ್ ಮೂಲದ ರಾಕೇಶ್ ಎಂಬ ವ್ಯಕ್ತಿ ಮೃತ ಪಟ್ಟಿದ್ದಾನೆ. ಆದರೆ ನಮಗೆ ರಾಕೇಶ್​​ನ ಸಾವಿನ ಕುರಿತು ಅನುಮಾನ ವ್ಯಕ್ತವಾಗಿದ್ದು, ತನಿಖೆ ಮಾಡುತ್ತಿದ್ದೇವೆ. ಸದ್ಯ ಮೇಲ್ನೋಟಕ್ಕೆ ಬ್ಲ್ಯಾಸ್ಟ್ ನಿಂದ ಸಾವು ಆಗಿದೆ ಅಂತ ಹೇಳಲಾಗುತ್ತಿದೆ. ಇಬ್ಬರಿಗೆ ಗಾಯಾಳಾಗಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದರು.

ದೀಪೆನ್ ಎಂಬುವವರು ಬ್ಲ್ಯಾಸ್ಟ್ ಪರವಾನಿಗೆ ಹೊಂದಿದ್ದಾರೆ. ಕ್ರಷರ್ ಮಂಜುನಾಥ್ ಎಂಬುವವರಿಗೆ ಸೇರಿದೆ. ಆಕ್ಸಿಡೆಂಟ್ ಅನ್ನೋ ಕಟ್ಟು ಕಥೆ ಎಲ್ಲಿಂದ ಬಂತು ಅನ್ನೋ ತನಿಖೆ ಆಗುತ್ತಿದೆ. ಪೊಲೀಸರು ಏಕೆ ಆಕ್ಸಿಡೆಂಟ್ ಅಂತ ದೂರು ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಮಾಡಿಸುತ್ತೇವೆ. ಎಫ್​ಐಆರ್​ ದಾಖಲು ಮಾಡಿರುವ ಅಧಿಕಾರಿ ಬಗ್ಗೆಯೂ ತನಿಖೆ ಮಾಡಲಾಗುತ್ತೆ. ಮೈನಿಂಗ್ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕಾಗಿದೆ ಎಂದು ಕೊಮ್ಮನಹಳ್ಳಿಯಲ್ಲಿ ಹೇಳಿದ್ದರು.

ಜಿಲ್ಲಾಸ್ಪತ್ರೆಗೆ  ಸಚಿವ ಮುನಿರತ್ನ ಭೇಟಿ 

ಇದಾದ ಬಳಿಕ ಕೋಲಾರ ಜಿಲ್ಲಾಸ್ಪತ್ರೆ ಶವಗಾರಕ್ಕೆ ಸಚಿವ ಮುನಿರತ್ನ ಭೇಟಿ ನೀಡಿ  ಶವವನ್ನು ಮರು ಮರಣೋತ್ತರ ಪರೀಕ್ಷೆ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿಡಿಯೋ ಸಹಿತಿ ಮರಣೋತ್ತರ ಪರೀಕ್ಷೆಗೆ ಸೂಚನೆ ನೀಡಿದ್ದರು. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ಯಾರೇ ಭಾಗಿಯಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲಾ. ಪ್ರಕರಣದ ಸಂಪೂರ್ಣ ತನಿಖೆಗೆ ಸೂಚನೆ ನೀಡಿದ್ದೇನೆ.  ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುವೆ ಎಂದು ಭರವಸೆ ನೀಡಿದ್ದರು.

ಕರ್ತವ್ಯ ಲೋಪ ಎಸಗಿದ ಇನ್ಸ್​​ಪೆಕ್ಟರ್ ಅಮಾನತು

ಪ್ರಕರಣ ಸಂಬಂಧ ಸ್ಪೋಟಕ ಸರಬರಾಜು ಮಾಡಿದ್ದ ಆರೋಪಿ ದಿಪೇನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಕರ್ತವ್ಯ ಲೋಪ ಎಸಗಿದ ಆರೋಪದಡಿ ಮಾಸ್ತಿ ಪೊಲೀಸ್​ ಠಾಣೆ ಇನ್ಸ್​​ಪೆಕ್ಟರ್ ವಸಂತ​ನನ್ನು ಅಮಾನತು ಮಾಡಲಾಗಿದೆ. ಸದ್ಯ ಮಾಸ್ತಿ ಪೊಲೀಸರು ಅಪಘಾತ ಪ್ರಕರಣದ ಬದಲಾಗಿ ಸ್ಪೋಟಕ ಕಾಯ್ದೆ ಹಾಗೂ ಐಪಿಸಿ 201 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖಾಧಿಕಾರಿಯಾಗಿ ಕೋಲಾರದ ಡಿವೈಎಸ್​ಪಿ ದೇವರಾಜ್​ರವರು ನೇಮಕಗೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Fri, 21 October 22