ಕೋಲಾರ: ತೋಟಗಾರಿಕೆ ಇಲಾಖೆ ಆವರಣದಲ್ಲಿರುವ ನೂತನ ಕೆವಿಕೆ ಕಚೇರಿಯನ್ನು ಇಂದು (ಅಕ್ಟೋಬರ್ 22) ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭ ಕರೆಂದ್ಲಾಜೆ ಉದ್ಘಾಟನೆ ಮಾಡಿದ್ದಾರೆ. ಕೋಲಾರದ ಟಮಕದಲ್ಲಿರುವ ಕೆವಿಕೆ ನೂತನ ಕೇಂದ್ರದ ಉದ್ಘಾಟನೆಯಲ್ಲಿ ಶೋಭಾ ಕರಂದ್ಲಾಜೆಗೆ ಸಂಸದ ಮುನಿಸ್ವಾಮಿ, ಶಾಸಕ ವೈ.ಎ.ನಾರಾಯಣಸ್ವಾಮಿ, ಶಾಸಕ ಶ್ರೀನಿವಾಸಗೌಡ, ಗೋವಿಂದರಾಜು ಸಾತ್ ನೀಡಿದ್ದಾರೆ.
ಕೆವಿಕೆ ಕಚೇರಿ ಉದ್ಘಾಟನೆ ಬಳಿಕ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭ ಕರೆಂದ್ಲಾಜೆ ಮಾತನಾಡಿದ್ದು, ದೇಶದ ಲಸಿಕೆ ಅಭಿಯಾನ ಇಡೀ ವಿಶ್ವಕ್ಕೆ ಮಾದರಿ. ವಿಶ್ವದಲ್ಲೇ ಮೊದಲು ದೇಶದಲ್ಲಿ ಲಸಿಕೆ ಕಂಡು ಹಿಡಿದಿದ್ದು, ಇದರಲ್ಲಿ ದೇಶದ ಪ್ರಧಾನಿ ಮೋದಿ ಶ್ರಮ ಬಹಳಷ್ಟಿದೆ. ಆದರೆ ವಿರೋಧ ಪಕ್ಷದವರು ಲಸಿಕೆ ಅಭಿಯಾನವನ್ನು ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಲಸಿಕೆ ಕುರಿತು ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರಿಗೂ ಸಿಎಂ ರಷ್ಟೇ ಅಧಿಕಾರ ಇದೆ. ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಮಾತನಾಡಿ. ಈ ರೀತಿ ಮಾತನಾಡಿ ಜನರಿಗೆ ತಪ್ಪು ಸಂದೇಶ ನೀಡಬಾರದು ಎಂದು ಹೇಳಿದ್ದಾರೆ.
ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರ ವೇದಿಕೆ ದರ್ಬಾರ್
ಕೋಲಾರ ಹೊರ ವಲಯದ ಟಮಕ ಬಳಿ ಆಯೋಜಿಸಲಾದ ಕೃಷಿ ವಿಜ್ಞಾನ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಮುಖಂಡರು ಭಾಗಿಯಾಗಿದ್ದಾರೆ. ವೇದಿಕೆಯಲ್ಲಿ ಸಂಸದ ಮುನಿಸ್ವಾಮಿ ಬೆಂಬಲಿಗರು ಹಾಗೂ ಬಿಜೆಪಿ ಮುಖಂಡರು ತುಂಬಿ ತುಳುಕಿತ್ತಿದ್ದರು. ವೇದಿಕೆ ಮೇಲಿನ ಎರಡು ಲೈನ್ನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕುಳಿತಿದ್ದಾರೆ. ವೇದಿಕೆ ಅಕ್ಕ ಪಕ್ಕ ಹಾಗೂ ಮುಂಭಾಗದಲ್ಲಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಕೈಕಟ್ಟಿ ನಿಂತಿದ್ದಾರೆ.
ಇದನ್ನೂ ಓದಿ:
ವಾಜಪೇಯಿಯವರೂ ಎತ್ತಿನಗಾಡಿಯಲ್ಲಿ ಸಂಸತ್ಗೆ ಬಂದಿದ್ದರು, ಶೋಭಾ ಕರಂದ್ಲಾಜೆ ಈಗೆಲ್ಲಿದ್ದಾರೆ? ಸಿದ್ದರಾಮಯ್ಯ ಸವಾಲ್
ಬೆಂಗಳೂರು: ಮಾಡ್ಯೂಲರ್ ಆಸ್ಪತ್ರೆ ಉದ್ಘಾಟನೆ; ಕೇಂದ್ರ ಸಚಿವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯ!
Published On - 1:20 pm, Fri, 22 October 21