ಕೋಲಾರ:ಅವರೆಲ್ಲಾ ಹಳೆ ಬಟ್ಟೆಯಿಂದಲೇ ಹೊಸ ಬದುಕು ಕಟ್ಟಿಕೊಳ್ಳುವ ಜನ. ತುತ್ತಿನ ಚೀಲ ತುಂಬಿಸಿಕೊಳ್ಳಲು ಜಿಲ್ಲೆಯಿಂದ ಜಿಲ್ಲೆಗೆ ಕುಟುಂಬ ಸಮೇತರಾಗಿ ತಿರುಗಾಡುತ್ತಾ ಜೀವನ ಚಕ್ರವನ್ನು ಸಾಗಿಸುತ್ತಿದ್ದ ಜನರು. ಆದ್ರೆ ಕೊರೊನಾ ಲಾಕ್ಡೌನ್ನಿಂದಾಗಿ ಅವರ ಅಲೆಮಾರಿ ಬದುಕು ನಿಂತ ನೀರಾಗಿ ಹೋಯಿತು.
ಮೂಲತ: ವಿಜಯಪುರ ಜಿಲ್ಲೆಯವರಾದ ಈ ಅಲೆಮಾರಿಗಳು ಹಳೆ ಬಟ್ಟೆಗಳನ್ನು ಸಂಗ್ರಹಿಸಿ ಅದನ್ನು ಮಾರಿಕೊಂಡು ಜೀವನ ನಡೆಸುತ್ತಿದ್ದರು. ಸುಮಾರು 12 ಕುಟುಂಬಗಳನ್ನು ಒಳಗೊಂಡ ಈ ಗುಂಪು ಲಾಕ್ಡೌನ್ಗೆ ಮೊದಲು ಕೋಲಾರದ ತಲಗುಂದ ಗ್ರಾಮಕ್ಕೆ ಬಂದವರು. ನಂತರ ಲಾಕ್ಡೌನ್ನಿಂದ ಅಲ್ಲೇ ಉಳಿಯುವಂತಾಯ್ತು. ಇನ್ನು ಜೀವನೋಪಾಯದ ದಾರಿಯೇ ಮುಚ್ಚಿಹೋದ ಮೇಲೆ ಮುಂದೇನು ಎಂಬ ಯೋಚನೆ ಇವರಿಗೂ ಕಾಡಿತ್ತು.
ಅಲೆಮಾರಿಗಳ ನೆರವಿಗೆ ಬಂದ ಸ್ಥಳೀಯರು, ಸಂಘ ಸಂಸ್ಥೆಗಳು
ಒಟ್ನಲ್ಲಿ ಜೀವನ ಸಾಗಿಸುವುದೇ ಕಷ್ಟವಾಗಿ ತಮ್ಮ ತಮ್ಮ ಊರುಗಳತ್ತ ಮುಖಮಾಡಿ ಹೊರಟ ಕೂಲಿ ಕಾರ್ಮಿಕರಿಗೆ ಮತ್ತು ಇತರರಿಗೆ ಈ ಅಲೆಮಾರಿಗಳು ಒಂದು ರೀತಿಯ ಸ್ಫೂರ್ತಿಯಾಗಿದ್ದಾರೆ. ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಎಂಬ ಡಾ.ವಿಷ್ಣುವರ್ಧನ್ ಅವರ ಸಿನಿಮಾದ ಹಾಡಿನ ಸಾಲುಗಳಂತೆ ಹಳೆ ಬಟ್ಟೆಯಿಂದ ಮಾಡಿದ ಸೂರು ಸಾಕು ಹಾಯಾಗಿರೋಕೆ ಎಂದು ಈ ಅಲೆಮಾರಿಗಳು ಎಲ್ಲರಿಗೆ ತೋರಿಸಿಕೊಟ್ಟಿದ್ದಾರೆ.
Published On - 11:29 am, Thu, 11 June 20