ಅಕ್ರಮ ಮರಳುಗಾರಿಕೆ ತಡೆಗೆ ಹೊಸ ಮಾರ್ಗ ಕಂಡುಹಿಡಿದ ಕೊಪ್ಪಳ ಎಸ್​ಪಿ

| Updated By: Rakesh Nayak Manchi

Updated on: Nov 12, 2022 | 9:21 AM

ಬರಡು ನಾಡು ಎಂದೇ ಕುಖ್ಯಾತಿ ಪಡೆದ ನಾಡು ಕೊಪ್ಪಳದಲ್ಲಿ ಎಗ್ಗಿಲ್ಲದೇ ಅಕ್ರಮ ಗಣಿಕಾರಿಗೆ ನಡೆಯುತ್ತಿದೆ. ಇದನ್ನು ತಡೆಯಲು ಜಿಲ್ಲಾ ಎಸ್​ಪಿ ಹೊಸ ಮಾರ್ಗ ಕಂಡು ಹಿಡಿದಿದ್ದಾರೆ. ಅದೇನೆಂದು ಇಲ್ಲಿದೆ ನೋಡಿ.

ಅಕ್ರಮ ಮರಳುಗಾರಿಕೆ ತಡೆಗೆ ಹೊಸ ಮಾರ್ಗ ಕಂಡುಹಿಡಿದ ಕೊಪ್ಪಳ ಎಸ್​ಪಿ
ಅಕ್ರಮ ಗಣಿಗಾರಿಕೆ ತಡೆಗೆ ಹೊಸ ಮಾರ್ಗ ಕಂಡುಹಿಡಿದ ಕೊಪ್ಪಳ ಎಸ್​ಪಿ
Image Credit source: ಸಾಂದರ್ಭಿಕ ಚಿತ್ರ
Follow us on

ಕೊಪ್ಪಳ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ದಿನ ಬೆಳಗಾದರೆ ಸಾಕು ಪೊಲೀಸರು ಜಿಲ್ಲೆಯಾದ್ಯಂತ ಪ್ರತಿದಿನ ಕನಿಷ್ಟ ಅಂದರೂ ಹತ್ತಕ್ಕೂ ಹೆಚ್ಚು ಟ್ರಕ್​ಗಳನ್ನ ಜಪ್ತಿ ಮಾಡುತ್ತಿದ್ದಾರೆ. ಹೀಗೆ ಸೀಜ್ ಮಾಡಿರುವ ವಾಹನಗಳ ಮಾಲೀಕರು ಮತ್ತು ಮರಳಗಾರರು ನ್ಯಾಯಾಲಯದ ಮೂಲಕ ತಮ್ಮ ವಾಹನವನ್ನ ಬಿಡಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಏನೇ ಮಾಡಿದರೂ ಅಕ್ರಮ ಮರಳುಗಾರಿಗೆ ದಂಧೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇತ್ತ ಸಾರ್ವಜನಿಕರಿಂದ ಪೊಲೀಸರಿಗೆ ಪ್ರತಿನಿತ್ಯ ದೂರುಗಳು ಬರುತ್ತಿರುತ್ತವೆ. ಇದೇ ಕಾರಣಕ್ಕೆ ದಂಧೆ ಕೊನೆಗಾಣಿಸಲು ಜಿಲ್ಲೆಯ ಎಸ್​ಪಿ ಅರುಣಾಂಗ್ಷು ಗಿರಿ ಹೊಸದೊಂದು ಐಡಿಯಾ ಕಂಡು ಹಿಡಿದ್ದಿದ್ದಾರೆ. ಕಂದಾಯ ಇಲಾಖೆ ಹಾಗೂ ಗಣಿ ಭೂವಿಜ್ಞಾನ ಇಲಾಖೆಗೆ ಜಿಲ್ಲೆಯಲ್ಲಿ ಸರ್ಕಾರ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುನತಿ ಪಡೆದಿರುವ ಎಷ್ಟು ಮರಳುಗಾರಿಕೆ ಪಾಯಿಂಟ್​ಗಳಿವೆ ಎನ್ನುವುದನ್ನು ಸರ್ವೆ ಮಾಡಲು ಮತ್ತು ಅನುಮತಿ ಪಡೆದಯದೇ ಗಣಿಕಾರಿಕೆ ನಡೆಸುತ್ತಿರುವ ಜಮೀನುಗಳ ಸರ್ವೆ ಮಾಡಲು ಸೂಚಿಸಿದ್ದಾರೆ. ಅಕ್ರಮ ಪಾಯಿಂಟ್​ಗಳು ಪತ್ತೆಯಾದರೆ ದಾಖಲೆ ಸಹಿತ ಭೂಮಿಯನ್ನು ಸೀಜ್ ಮಾಡಿ ಭೂ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಹೇಳಿದ್ದಾರೆ. ಇದರಿಂದ ಸ್ವಲ್ಪ ಮಟ್ಟಿಗಾದರೂ ಅಕ್ರಮ ಮರಳುಗಾರಿಗೆ ಕಂಟ್ರೋಲ್ ಮಾಡಬಹುದು ಎಂದು ಎಸ್​ಪಿ ಹೇಳುತ್ತಾರೆ.

ಅರುಣಾಂಗ್ಷು ಗಿರಿಯವರು ಎಸ್​ಪಿ ಆದ ಮೇಲೆ ಜಿಲ್ಲಯಲ್ಲಿ ಇಲ್ಲಿಯವರೆಗೆ ಸುಮಾರು 300ಕ್ಕೂ ಹೆಚ್ಚು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳನ್ನ ಸೀಜ್ ಮಾಡಲಾಗಿದೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ಅಕ್ರಮ ಮರಳು ಸಾಗಣಿಕೆ ಇನ್ನಷ್ಟು ಹೆಚ್ಚಾಗಿತ್ತು. ಹೀಗಾಗಿ ಸದ್ಯ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಗಣಿ ಭೂವಿಜ್ಞಾನ ಇಲಾಖೆ ಜಂಟಿಯಾಗಿ ಕಾರ್ಯಚರಣಗೆ ಇಳಿದಿದೆ.

ಅಕ್ರಮ ಪಾಯಿಂಟ್​ಗಳನ್ನ ಗುರುತಿಸಿ ಅವುಗಳನ್ನೇ ಟಾರ್ಗೆಟ್ ಮಾಡಿದರೆ ಕೊನೆ ಪಕ್ಷ ಭೂಮಾಲೀಕರು ತಮ್ಮ ಜಮೀನು ಕೈತಪ್ಪಿ ಹೋಗುವ ಭಯಕ್ಕಾದರೂ ಗಣಿಕಾರಿಗೆಗೆ ಅನುಮತಿ ನೀಡಲ್ಲ ಮತ್ತು ಅಕ್ರಮ ಪಾಯಿಂಟ್​ಗಳನ್ನ ಬಂದ್ ಮಾಡಿದರೆ ಮರಳು ಸಾಗಟಕ್ಕೆ ಅಕ್ರಮ ದಂಧೆಕೋರರು ಬರುವುದಿಲ್ಲ ಎನ್ನುವುದು ಪೊಲೀಸರ ಪ್ಲಾನ್ ಆಗಿದೆ. ಸದ್ಯ ಪೊಲೀಸ್ ಇಲಾಖೆಯ ಹೊಸ ಫ್ಲ್ಯಾನ್ ಯಶಸ್ವಿಯಾಗುತ್ತದೆಯೇ ಅಥವಾ ಪೊಲೀಸರ ಚಾಪೆ ಕೆಳಗೆ ತೂರಿದರೆ ದಂಧೆಕೋರರು ರಂಗೋಲಿ ಕೆಳಗೆ ತೂರುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.

ವರದಿ: ದತ್ತಾತ್ರೇಯ ಪಾಟೀಲ್, ಟಿವಿ 9 ಕೊಪ್ಪಳ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:11 am, Sat, 12 November 22