ಕೊಪ್ಪಳ: ಕರ್ನಾಟಕ ಸಾರಿಗೆ ಇಲಾಖೆ ದಿವಾಳಿ ಎದ್ದಿದೆ. ನೌಕರರಂತೂ ಪೂರ್ಣ ಸಂಬಳವಿಲ್ಲದೆ ಬರ್ಬಾದ್ ಆಗಿದ್ದಾರೆ. ಅವರ ಸ್ಥಿತಿ ಹೇಗಿದೆ ಎಂಬ ಬಗ್ಗೆ ತಾಜಾ ಉದಾಹರಣೆ ಇಲ್ಲಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ವಾಯವ್ಯ ಸಾರಿಗೆ ಡಿಪೋ ನಿರ್ವಾಹಕ ಹನುಮಂತಪ್ಪನ ಪರಿಸ್ಥಿತಿ ಆ ದೇವರಿಗೇ ಪ್ರೀತಿ ಎಂಬಂತಿದೆ. ಏಕೆಂದರೆ ಈತ ಮನೆಯ ಬಾಡಿಗೆ ಕಟ್ಟಲೂ ಹಣವಿಲ್ಲದೆ ಕುಳಿತಿದ್ದಾನೆ. ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಹ ಪರಿಸ್ಥಿತಿ ಈತನ ಕುಟುಂಬಕ್ಕೆ ಬಂದಿದೆ. ಹೀಗಾಗಿ ಈತ ಕೈಗೊಂಡ ನಿರ್ಧಾರವೆಂತದು ಗೊತ್ತಾ? ಈತ ತನ್ನ ಕಿಡ್ನಿ ಮಾರಿ ಜೀವನ ನಿರ್ವಾಹಣೆಗೆ ಮುಂದಾಗಿದ್ದಾನೆ.
ಹೌದು ಕಳೆದ ನಾಲ್ಕು ವರ್ಷದಿಂದ ಗಂಗಾವತಿ ಡಿಪೋದಲ್ಲಿ ನಿರ್ವಾಹಕನಾಗಿ ಕೆಲಸ ಮಾಡ್ತಿರೋ ಹನುಮಂತಪ್ಪ ಜೀವನ ನಿರ್ವಹಣೆಗೆ ಕಿಡ್ನಿ ಮಾರಲು ಮುಂದಾಗಿದ್ದಾರೆ. ಮನೆ ಬಾಡಿಗೆ, ರೇಷನ್ ತರಲು ಹಣ ಇಲ್ಲದೆ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು ತನ್ನ ಪರಿಸ್ಥಿತಿಯನ್ನು ವ್ಯಕ್ತಪಡಿಸಿದ್ದಾನೆ. ಮೂಲತಃ ರಾಯಚೂರು ಜಿಲ್ಲೆಯವರಾಗಿರುವ ಹನುಮಂತಪ್ಪ 3 ತಿಂಗಳಿಂದ ಸಂಬಳ ಇಲ್ಲದೆ ಜೀವನ ನಿರ್ವಹಣೆಗೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಡಿಸೆಂಬರ್ ತಿಂಗಳಲ್ಲಿ ಕೇವಲ ಅರ್ಧ ಸಂಬಳ ಮಾತ್ರ ಸಾರಿಗೆ ಇಲಾಖೆ ನೀಡಿತ್ತು. ಹೀಗಾಗಿ ಸಾರಿಗೆ ಸಿಬ್ಬಂದಿ ಜೀವನ ನಡೆಸುವುದೇ ಕಷ್ಟಕರವಾಗಿದೆ. ಇದಲ್ಲದೆ ಸಾರಿಗೆ ನೌಕರರು ಸಹ ಫೆಬ್ರವರಿ 10ರಂದು ಸಾರಿಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಆದ್ರೆ ಡಿಸಿಎಂ ಲಕ್ಷ್ಮಣ ಸವದಿ ನೌಕರರ ಮನವೊಲಿಸಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಿದ್ರು. ಆದ್ರೆ ನೌಕರರ ಕಷ್ಟ ನೌಕರರಿಗೆ ಮಾತ್ರ ಗೊತ್ತು. ತುತ್ತು ಜನ್ನಕ್ಕೂ ಪರದಾಡುತ್ತ ಜೀವನ ನಡೆಸುವುದು ಕಷ್ಟಕರವಾಗಿದೆ.
ಹನುಮಂತಪ್ಪರ ಫೇಸ್ಬುಕ್ ಪೋಸ್ಟ್