AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಡಿಡಿ ಕೊಟ್ಟು ವಂಚಿಸುತ್ತಿದ್ದ ದಂಪತಿ ; ಆರೋಪಿಗಳನ್ನು ಬಂಧಿಸಿದ ಬೇಗೂರು ಪೊಲೀಸರು

ನಕಲಿ ಡಿಡಿಯನ್ನು ಮುದ್ರಿಸಿ ವಂಚಿಸುತ್ತಿದ್ದ ದಂಪತಿಯನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 7 ಕೋಟಿ ಮೌಲ್ಯದ ನಕಲಿ ಡಿಡಿಯನ್ನು ವಶಕ್ಕೆ ಪಡೆಯಲಾಗಿದೆ.

ನಕಲಿ ಡಿಡಿ ಕೊಟ್ಟು ವಂಚಿಸುತ್ತಿದ್ದ ದಂಪತಿ ; ಆರೋಪಿಗಳನ್ನು ಬಂಧಿಸಿದ ಬೇಗೂರು ಪೊಲೀಸರು
ಪ್ರಾತಿನಿಧಿಕ ಚಿತ್ರ
Follow us
shruti hegde
| Updated By: ಸಾಧು ಶ್ರೀನಾಥ್​

Updated on: Feb 10, 2021 | 1:43 PM

ಬೆಂಗಳೂರು: ನಕಲಿ ಡಿಡಿ ಕೊಟ್ಟು ವಂಚಿಸುತ್ತಿದ್ದ ದಂಪತಿಯಾದ ಇಂದ್ರಜಿತ್ ನಾಯಕ್, ಮಂಜುಳಾ ಸೇರಿ ನಾಲ್ವರನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 7 ಕೋಟಿ ಮೌಲ್ಯದ ನಕಲಿ ಡಿಡಿಗಳು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ನಕಲಿ ಡಿಡಿಯನ್ನು ಮುದ್ರಿಸಿ ಮಾರ್ವಾಡಿಗಳಿಗೆ ನೀಡುತ್ತಿದ್ದರು. ನಮಗೆ ತುರ್ತಾಗಿ ಹಣದ ಅವಶ್ಯಕತೆ ಇದೆ, ಡಿಡಿ ಮೇಲೆ ಕಮೀಷನ್ ಇಟ್ಟುಕೊಂಡು ಸ್ವಲ್ಪ ಹಣ ಕೊಡಿ ಎಂದು ಡೀಲ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಆರೋಪಿ ಇಂದ್ರಜಿತ್ ನಾಯಕ್ ಡಿಪ್ಲೊಮಾ ಪದವೀಧರ. ತುಂಬಾ ಹಣ ಗಳಿಸಿ  ಐಷಾರಾಮಿಯಿಂದ ಜೀವನ ಸಾಗಿಸಬೇಕು ಎಂಬುದಾಗಿ ಈ ಕೃತ್ಯಕ್ಕೆ ಇಳಿದಿದ್ದಾನೆ. ಇಂದ್ರಜಿತ್​ ನಾಯಕ್, ಆತನ ಪತ್ನಿ ಮಂಜುಳಾ ಜೊತೆ ಸೇರಿ ನಕಲಿ ಡಿಡಿ ತಯಾರಿಗೆ ಇಳಿದಿದ್ದರು. ಸೀಲುಗಳ ತಯಾರಿ ಮತ್ತು ಕಂಪ್ಯೂಟರ್ ಕೆಲಸಕ್ಕೆ ಇಬ್ಬರು ಅಸಿಸ್ಟೆಂಟ್​ಗಳನ್ನು ಇಟ್ಟಿದ್ದರು. ಈ ನಾಲ್ವರು ಸೇರಿ ನಕಲಿ ಡಿಡಿ ತಯಾರಿಕೆಗೆ ಇಳಿದಿದ್ದು, ಈಗ ಪೊಲೀಸರಿಂದ ಬಂಧಿತರಾಗಿದ್ದಾರೆ.

ಆರೋಪಿ ದಂಪತಿ ಒಂದು ಲಕ್ಷ ಮೌಲ್ಯದ ಡಿಡಿಗೆ 50ದಿಂದ 60 ಸಾವಿರ ಹಣ ಪಡೆಯುತ್ತಿದ್ದರು. ಹೀಗೆ ಹತ್ತಾರು ಮಾರ್ವಾಡಿಗಳಿಗೆ ನಕಲಿ ಡಿಡಿ ಕೊಟ್ಟು ಮಕ್ಮಲ್ ಟೋಪಿ ಹಾಕಿದ್ದರು. ಇತ್ತೀಚಿಗೆ ಬೇಗೂರಿನ ಓರ್ವ ಮಾರ್ವಾಡಿಗೆ ನಾಲ್ಕು ಲಕ್ಷದ ನಕಲಿ ಡಿಡಿ ಕೊಟ್ಟು ಚೀಟಿಂಗ್ ಮಾಡಿದ್ದರು. ಈ ನಿಟ್ಟಿನಲ್ಲಿ ಮೋಸ ಹೋದ ಮಾರ್ವಾಡಿ ಬೇಗೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಡಿಡಿ ತಯಾರಿಸಲು ಬಳಸಿದ್ದ ಕಂಪ್ಯೂಟರ್, ನಕಲಿ ಸೀಲುಗಳನ್ನು ಜಪ್ತಿ ಮಾಡಲಾಗಿದೆ.

ನಕಲಿ ನೋಟು ಜಾಲ ಪತ್ತೆ : ಮೂವರು ಆರೋಪಿಗಳ ಬಂಧನ

OMC Mining Case, ಜನಾರ್ದನ್​ ರೆಡ್ಡಿಗೆ ಜಾಮೀನು ಸಿಗುವ ಸಾಧ್ಯತೆ: ವಕೀಲ
OMC Mining Case, ಜನಾರ್ದನ್​ ರೆಡ್ಡಿಗೆ ಜಾಮೀನು ಸಿಗುವ ಸಾಧ್ಯತೆ: ವಕೀಲ
ಬೆಂಗಳೂರಿನ 35 ಭಾಗಗಳಲ್ಲಿ ಸೈರನ್ ಅಳವಡಿಕೆ, 32 ಕಾರ್ಯ ನಿರ್ವಹಿಸಲಿವೆ
ಬೆಂಗಳೂರಿನ 35 ಭಾಗಗಳಲ್ಲಿ ಸೈರನ್ ಅಳವಡಿಕೆ, 32 ಕಾರ್ಯ ನಿರ್ವಹಿಸಲಿವೆ
ಮಹಿಳೆ ವಿಚಾರಕ್ಕೆ ನಡೆಯಿತಾ ಮೈಸೂರಿನ ಕಾರ್ತಿಕ್​ ಕೊಲೆ? SP ಹೇಳಿದ್ದಿಷ್ಟು
ಮಹಿಳೆ ವಿಚಾರಕ್ಕೆ ನಡೆಯಿತಾ ಮೈಸೂರಿನ ಕಾರ್ತಿಕ್​ ಕೊಲೆ? SP ಹೇಳಿದ್ದಿಷ್ಟು
ರಾಜ್ಯ ಸರ್ಕಾರಕ್ಕೆ ಸೋರಿಕೆ ಇಲ್ಲದೆ ಒಂದು ಪರೀಕ್ಷೆಯನ್ನೂ ನಡೆಸಲಾಗಲ್ಲ: ರವಿ
ರಾಜ್ಯ ಸರ್ಕಾರಕ್ಕೆ ಸೋರಿಕೆ ಇಲ್ಲದೆ ಒಂದು ಪರೀಕ್ಷೆಯನ್ನೂ ನಡೆಸಲಾಗಲ್ಲ: ರವಿ
ಬ್ಲ್ಯಾಂಕ್ ಲೆಟರ್ ಹೆಡ್ ಯತ್ನಾಳ್​ಗೆ ಕೊಡುತ್ತೇನೆ, ಅವರೇ ಬರೆಯಲಿ: ಶಿವಾನಂದ
ಬ್ಲ್ಯಾಂಕ್ ಲೆಟರ್ ಹೆಡ್ ಯತ್ನಾಳ್​ಗೆ ಕೊಡುತ್ತೇನೆ, ಅವರೇ ಬರೆಯಲಿ: ಶಿವಾನಂದ
ಭಾರತದ ಯುದ್ಧ ತಯಾರಿ ಕಂಡು ಪತರುಗುಟ್ಟಿದೆ ಪಾಕಿಸ್ತಾನ
ಭಾರತದ ಯುದ್ಧ ತಯಾರಿ ಕಂಡು ಪತರುಗುಟ್ಟಿದೆ ಪಾಕಿಸ್ತಾನ
BBMP ಕಾರ್ಯವನ್ನು ಶ್ಲಾಘಿಷಿಸಿದ ಟಿಮ್ ಡೇವಿಡ್
BBMP ಕಾರ್ಯವನ್ನು ಶ್ಲಾಘಿಷಿಸಿದ ಟಿಮ್ ಡೇವಿಡ್
ಹೇಗಿರಲಿದೆ ಯುದ್ಧದ ಅಣಕು ಕಾರ್ಯಾಚರಣೆ? ಸಾರ್ವಜನಿಕರ ಜವಾಬ್ದಾರಿ ಏನು?
ಹೇಗಿರಲಿದೆ ಯುದ್ಧದ ಅಣಕು ಕಾರ್ಯಾಚರಣೆ? ಸಾರ್ವಜನಿಕರ ಜವಾಬ್ದಾರಿ ಏನು?
ಡ್ರೋನ್ ಪ್ರತಾಪ್ ಸಹಾಯ ಮನೋಭಾವ ಎಂಥದ್ದು ನೋಡಿ; ಒಂದು ಚಪ್ಪಾಳೆ ಬರಲೇಬೇಕು
ಡ್ರೋನ್ ಪ್ರತಾಪ್ ಸಹಾಯ ಮನೋಭಾವ ಎಂಥದ್ದು ನೋಡಿ; ಒಂದು ಚಪ್ಪಾಳೆ ಬರಲೇಬೇಕು
ದಾಖಲಾತಿ ಅರ್ಜಿಗಾಗಿ ರಾತ್ರಿ ಶಾಲಾ ಆವರಣದಲ್ಲಿ ಮಲಗುತ್ತಿದ್ದರಂತೆ ಪೋಷಕರು
ದಾಖಲಾತಿ ಅರ್ಜಿಗಾಗಿ ರಾತ್ರಿ ಶಾಲಾ ಆವರಣದಲ್ಲಿ ಮಲಗುತ್ತಿದ್ದರಂತೆ ಪೋಷಕರು