AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ನೋಟು ಜಾಲ ಪತ್ತೆ : ಮೂವರು ಆರೋಪಿಗಳ ಬಂಧನ

ಈವರೆಗೆ ಈ ಕೇಸ್ ಸಂಬಂಧ ಮೂವರನ್ನು ಬಂಧಿಸಿದ್ದು, ಲಾಕ್​ಡೌನ್ ವೇಳೆಯಿಂದ ಖೋಟಾನೋಟು ತಯಾರಿ ಆರಂಭಿಸಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ.

ನಕಲಿ ನೋಟು ಜಾಲ ಪತ್ತೆ : ಮೂವರು ಆರೋಪಿಗಳ ಬಂಧನ
ಪ್ರಾತಿನಿಧಿಕ ಚಿತ್ರ
sandhya thejappa
| Edited By: |

Updated on: Dec 26, 2020 | 4:31 PM

Share

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಖೋಟಾನೋಟುಗಳ ಮದ್ರಣ ಜಾಲ ಪತ್ತೆ ಆಗಿದೆ. ಈ ನೋಟುಗಳನ್ನು ಚಲಾವಣೆಗೆ ಯತ್ನಿಸಿದ ವ್ಯಕ್ತಿ ಸೇರಿ ಒಟ್ಟು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಲಾಕ್​ಡೌನ್ ವೇಳೆಯಿಂದ ಖೋಟಾನೋಟು ತಯಾರಿ ಆರಂಭಿಸಿದ್ದಾಗಿ ಬಂಧಿತರು ತಪ್ಪು ಒಪ್ಪಿಕೊಂಡಿದ್ದಾರೆ.  ಇಬ್ಬರನ್ನು ಪೊಲೀಸರು  ನ್ಯಾಯಾಲಯಕ್ಕೆ ಕರೆದೊಯ್ದು ನ್ಯಾಯಾಧೀಶರ​ ಮುಂದೆ ಹಾಜರುಪಡಿಸಿದ್ದಾರೆ.

ಆಟೋ ಚಾಲಕನಿಂದ ಬಣ್ಣ ಬಯಲು ಆಟೋದಲ್ಲಿ ತೆರಳುತ್ತಿದ್ದ ಜಮಾಲ್ ಎಂಬುವವನು ಖೋಟಾನೋಟನ್ನು ಆಟೋ ಚಾಲಕನಿಗೆ ನೀಡಿದ್ದ. ನೋಟಿನ ಬಗ್ಗೆ ಅನುಮಾನಗೊಂಡ ಚಾಲಕ ನೋಟನ್ನು ಪೊಲೀಸ್ ಠಾಣೆಗೆ ತಂದಾಗ ಜಮಾಲ್​ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಖೋಟಾನೋಟಿನ ದಂಧೆ ಬಗ್ಗೆ ಬಾಯಿಬಿಟ್ಟ ಜಮಾಲ್ ಸೇರಿದಂತೆ ಇಮ್ರಾನ್ ಹಾಗೂ ಮುಬಾರಕ್ ಎಂಬುವರನನ್ನು ಬಂಧಿಸಿದ್ದಾರೆ.

ಪ್ರಿಂಟರ್  ಬಳಸಿ ಬಿಲ್ ಪೇಪರ್ ಮುಖಾಂತರ 100 ರೂ. ಮುಖಬೆಲೆಯ ನಕಲಿ ನೋಟು ತಯಾರಿಸುತ್ತಿದ್ದರು. ಒಂದು ಶೀಟ್​ನಲ್ಲಿ 2ರಿಂದ 3 ಖೋಟಾನೋಟುಗಳ ಮುದ್ರಣ ಮಾಡುತ್ತಿದ್ದರು. ವಿಲ್ಸನ್​ಗಾರ್ಡನ್ ಠಾಣೆ ಪಿಐ ಶಂಕರಾಚಾರಿ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಸುಮಾರು 20 ಶೀಟ್ ಖೋಟಾನೋಟು ಪತ್ತೆಯಾಗಿದೆ.

ಪಾದರಾಯನಪುರದ ಅರಾಫತ್ ನಗರದ ನಿವಾಸಿಯಾದ ಆರೋಪಿ ಜಮಾಲ್ ಮನೆಯಲ್ಲಿ ಪ್ರಿಂಟರ್ ಬಳಸಿ 100 ರೂ. ಮುಖಬೆಲೆಯ ನಕಲಿ ನೋಟುಗಳು ತಯಾರಿಸುತ್ತಿದ್ದರು. ಸದ್ಯ ವಿಲ್ಸನ್ ಗಾರ್ಡನ್ ಪೊಲೀಸರು ಅರಾಫತ್ ನಗರದಲ್ಲಿ ದಾಳಿ ಮುಂದುವರೆಸಿದ್ದು, ಈವರೆಗೂ ಎಷ್ಟು ಖೋಟಾ ನೋಟು ತಯಾರಿಸಲಾಗಿದೆ ಎಂಬ ಲೆಕ್ಕಾಚಾರ ನಡೆಸುತ್ತಿದ್ದಾರೆ.

ಕಾಫಿನಾಡಿಗರೇ ಹುಷಾರ್! ಅಸಲಿ ನೋಟುಗಳನ್ನು ಮೀರಿಸಿ ಚಲಾವಣೆಗೆ ಬಂದಿವೆ ಖೋಟಾ ನೋಟುಗಳು..

Follow Us
ಅಮೆರಿಕದ ಜೆಡಿ ವ್ಯಾನ್ಸ್​ಗೆ ಪಾಕಿಸ್ತಾನದ ಯುದ್ಧವಿಮಾನಗಳ ಬೆಂಗಾವಲು
ಅಮೆರಿಕದ ಜೆಡಿ ವ್ಯಾನ್ಸ್​ಗೆ ಪಾಕಿಸ್ತಾನದ ಯುದ್ಧವಿಮಾನಗಳ ಬೆಂಗಾವಲು
ಏಕಾಏಕಿ ಮಾಲಕಿಯ ಮೇಲೆ ಸಾಕು ಬೆಕ್ಕು ದಾಳಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಏಕಾಏಕಿ ಮಾಲಕಿಯ ಮೇಲೆ ಸಾಕು ಬೆಕ್ಕು ದಾಳಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
6,6,6,6,6,6.. ಅಭಿ ‘ಸಿಕ್ಸರ್‘ ಶರ್ಮಾ ದಾಖಲೆಯ ಇನ್ನಿಂಗ್ಸ್
6,6,6,6,6,6.. ಅಭಿ ‘ಸಿಕ್ಸರ್‘ ಶರ್ಮಾ ದಾಖಲೆಯ ಇನ್ನಿಂಗ್ಸ್
ದಾವಣಗೆರೆ ಬೈ-ಎಲೆಕ್ಷನ್: ಕಾಂಗ್ರೆಸ್​ನಲ್ಲಿ ಶುರುವಾಗಿದೆಯಾ ಕೋಲ್ಡ್ ವಾರ್?
ದಾವಣಗೆರೆ ಬೈ-ಎಲೆಕ್ಷನ್: ಕಾಂಗ್ರೆಸ್​ನಲ್ಲಿ ಶುರುವಾಗಿದೆಯಾ ಕೋಲ್ಡ್ ವಾರ್?
ಲವ್ ಜಿಹಾದ್ ಪ್ರಕರಣ ಕಾಂಗ್ರೆಸ್​​​ ಇರೋ ಕಡೆ ಮಾತ್ರ ಹೆಚ್ಚಾಗುತ್ತಿದೆ
ಲವ್ ಜಿಹಾದ್ ಪ್ರಕರಣ ಕಾಂಗ್ರೆಸ್​​​ ಇರೋ ಕಡೆ ಮಾತ್ರ ಹೆಚ್ಚಾಗುತ್ತಿದೆ
ರಾಹುಲ್ ಗಾಂಧಿ ಜೊತೆ ಪ್ರಧಾನಿ ಮೋದಿಯ ಅಪರೂಪದ ಕ್ಷಣ ಇಲ್ಲಿದೆ
ರಾಹುಲ್ ಗಾಂಧಿ ಜೊತೆ ಪ್ರಧಾನಿ ಮೋದಿಯ ಅಪರೂಪದ ಕ್ಷಣ ಇಲ್ಲಿದೆ
20ಕ್ಕೂ ಹೆಚ್ಚು ‘ಕೈ’ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಜಯಚಂದ್ರ
20ಕ್ಕೂ ಹೆಚ್ಚು ‘ಕೈ’ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಜಯಚಂದ್ರ
'ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!': ಫೈರೋಜ್ ತಾಯಿ
'ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!': ಫೈರೋಜ್ ತಾಯಿ
PSL 2026: ಪಿಎಸ್​ಎಲ್​ನಲ್ಲಿ ಹಿಂದೆಂದೂ ಕಂಡರಿಯದ ಗೆಲುವು
PSL 2026: ಪಿಎಸ್​ಎಲ್​ನಲ್ಲಿ ಹಿಂದೆಂದೂ ಕಂಡರಿಯದ ಗೆಲುವು
ಯೂತ್ ಕಾಂಗ್ರೆಸ್​ನ ಫೈರೋಜ್ ಪಠಾಣ್​ ಕೊಲೆ ಬಗ್ಗೆ ಸ್ಫೋಟಕ ಮಾಹಿತಿ ಬಯಲು!
ಯೂತ್ ಕಾಂಗ್ರೆಸ್​ನ ಫೈರೋಜ್ ಪಠಾಣ್​ ಕೊಲೆ ಬಗ್ಗೆ ಸ್ಫೋಟಕ ಮಾಹಿತಿ ಬಯಲು!