AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಬ್ಬಿಂಗ್ ಸಿನಿಮಾಗಳಿಂದ ನಮ್ಮ ಸಂಸ್ಕೃತಿಗೆ ಹೊಡೆತ ಬೀಳುತ್ತೆ, ಡಬ್ಬಿಂಗ್ ಸಿನಿಮಾ ಬೇಡ: ಮಾಜಿ ಸಚಿವೆ, ನಟಿ ಉಮಾಶ್ರೀ

Dubbing Movies | ಡಬ್ಬಿಂಗ್ ಸಿನಿಮಾಗಳಿಂದ ನಮ್ಮ ಸಂಸ್ಕೃತಿಗೆ ಹೊಡೆತ ಬೀಳುತ್ತೆ. ವ್ಯಾಪಾರ ಮನೋಭಾವದಿಂದ ಡಬ್ಬಿಂಗ್ ಚಿತ್ರ ಮಾಡುತ್ತಿದ್ದಾರೆ. ಆದ್ರೆ ಸ್ಟಾರ್ ನಟರ ಡಬ್ಬಿಂಗ್ ಸಿನಿಮಾಗಳಿಂದ ಹೊಡೆತ ಬೀಳುತ್ತೆ ಎಂದು ಜಿಲ್ಲೆಯ ಬನಹಟ್ಟಿಯಲ್ಲಿ ಮಾಜಿ ಸಚಿವೆ, ನಟಿ ಉಮಾಶ್ರೀ ಹೇಳಿದರು.

ಡಬ್ಬಿಂಗ್ ಸಿನಿಮಾಗಳಿಂದ ನಮ್ಮ ಸಂಸ್ಕೃತಿಗೆ ಹೊಡೆತ ಬೀಳುತ್ತೆ, ಡಬ್ಬಿಂಗ್ ಸಿನಿಮಾ ಬೇಡ: ಮಾಜಿ ಸಚಿವೆ, ನಟಿ ಉಮಾಶ್ರೀ
ಮಾಜಿ ಸಚಿವೆ, ನಟಿ ಉಮಾಶ್ರೀ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Feb 10, 2021 | 3:15 PM

Share

ಬಾಗಲಕೋಟೆ: ಡಬ್ಬಿಂಗ್ ಸಿನಿಮಾಗಳಿಂದ ನಮ್ಮ ಸಂಸ್ಕೃತಿಗೆ ಹೊಡೆತ ಬೀಳುತ್ತೆ. ವ್ಯಾಪಾರ ಮನೋಭಾವದಿಂದ ಡಬ್ಬಿಂಗ್ ಚಿತ್ರ ಮಾಡುತ್ತಿದ್ದಾರೆ. ಆದ್ರೆ ಸ್ಟಾರ್ ನಟರ ಡಬ್ಬಿಂಗ್ ಸಿನಿಮಾಗಳಿಂದ ಹೊಡೆತ ಬೀಳುತ್ತೆ ಎಂದು ಜಿಲ್ಲೆಯ ಬನಹಟ್ಟಿಯಲ್ಲಿ ಮಾಜಿ ಸಚಿವೆ, ನಟಿ ಉಮಾಶ್ರೀ ಹೇಳಿದರು. ಈ ವೇಳೆ ಮಾತನಾಡಿದ ಅವರು ಸ್ಟಾರ್ ನಟರ ಡಬ್ಬಿಂಗ್ ಸಿನಿಮಾಗಳಿಂದ ಚಿಕ್ಕ ನಟರ ಸಿನಿಮಾಗಳಿಗೆ ಹೊಡೆತ ಬೀಳುತ್ತದೆ. ಹೀಗಾಗಿ ಡಬ್ಬಿಂಗ್ ಸಿನಿಮಾ ಬೇಡವೆಂಬುದು ನನ್ನ ಅಭಿಪ್ರಾಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವ್ಯಾಪಾರಿ ಮನೋಭಾವದ ಕನ್ನಡಿಗರಿಂದಲೇ ಇದೆಲ್ಲ ಆಗುತ್ತಿದೆ. ಮೊದಲು ಕನ್ನಡ ಸ್ವಮೇಕ್ ಚಿತ್ರವೇ ಬೇಕು ಅಂತಿದ್ದೆವು. ರಿಮೇಕ್ ಚಿತ್ರವೇ ಬೇಡ ಎಂಬ ಕೂಗು ಕೇಳಿ ಬರುತ್ತಿತ್ತು. ಆದ್ರೆ ಈಗ ಡಬ್ಬಿಂಗ್​ನಿಂದ ನಮ್ಮ ಸಂಸ್ಕೃತಿಗೆ ಹೊಡೆತ ಬೀಳುತ್ತೆ. ಒಂದು ಸಂಸ್ಕೃತಿ‌ ಮೇಲೆ ಇನ್ನೊಂದು ಸಂಸ್ಕೃತಿ ಹೇರಿದಂತಾಗುತ್ತದೆ. ಡಬ್ಬಿಂಗ್ ಹೀಗೆಯೇ ಮುಂದುವರೆದರೆ ಜನರಿಗೂ ಅದು ಬೇಸರವಾಗುತ್ತದೆ. ಇದು ನಮ್ಮ ಟೈಪ್ ಸಿನಿಮಾವಲ್ಲ ಅಂತ‌ ಜನ ಬೇಸರ ಪಡ್ತಾರೆ. ಸದ್ಯ ಅನೇಕ ಥಿಯೇಟರ್​ಗಳು ಮುಚ್ಚಿವೆ. ಥಿಯೇಟರ್​ಗಳು ಕಾಂಪ್ಲೆಕ್ಸ್​ಗಳಾಗಿ ಬದಲಾಗುತ್ತಿವೆ. ದೊಡ್ಡ ಸ್ಟಾರ್ ನಟರ ಡಬ್ಬಿಂಗ್ ಸಿನಿಮಾದಿಂದ ಸಣ್ಣ ಪುಟ್ಟ ಸಿನಿಮಾಗಳಿಗೆ ಹೊಡೆತ ಬೀಳುತ್ತಿದೆ. ಅದನ್ನು ಮಾಡದಿದ್ದರೆ ಒಳ್ಳೆಯದು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದುಷ್ಟ ಚಟಗಳು ಯಾವ ಕ್ಷೇತ್ರದಲ್ಲಿಲ್ಲ ಹೇಳಿ? ಇನ್ನು ರಾಗಿಣಿ ಮತ್ತು ಸಂಜನಾ ಡ್ರಗ್ಸ್ ಕೇಸ್ ಸಂಬಂಧ ಪ್ರತಿಕ್ರಿಯೆ ನೀಡಿದ ಉಮಾಶ್ರೀ ಅವರು, ಸದ್ಯ ಈ ವಿಚಾರಣೆ ಕೋರ್ಟ್ ನಲ್ಲಿದೆ. ಈ ಬಗ್ಗೆ ನಾನು ಮಾತನಾಡೋಕೆ ಆಗುವುದಿಲ್ಲ. ಅವರು ಆರೋಪಿ ಅಂತ ಸಾಬೀತಾದರೆ ನಾವು ಹೀಗೆ ಮಾಡಬಾರದು ಅಂತ ಹೇಳಬಹುದು. ಅವರನ್ನು ಹೊರತು ಪಡಿಸಿ ದುಷ್ಟ ಚಟಗಳು ಬಗ್ಗೆ ಮಾತನಾಡಬಹುದು. ದುಷ್ಟ ಚಟಗಳು ಯಾವ ಕ್ಷೇತ್ರದಲ್ಲಿಲ್ಲ ಹೇಳಿ? ಎಲ್ಲ ಕ್ಷೇತ್ರದಲ್ಲೂ ಇರುತ್ತೆ, ನಿನಗೆ ಬೇಕು ಬೇಡ ಅನ್ನೋ ತೀರ್ಮಾನ ನೀ‌ನು ಮಾಡಬೇಕು.

ಸಿನಿಮಾ‌ ನಟರೆಂದ ತಕ್ಷಣ ವಿಶೇಷ ಗೌರವ ಅಭಿಮಾನ ಇರುತ್ತೆ. ಅದನ್ನು ಉಳಿಸಿಕೊಳ್ಳಬೇಕಾದರೆ ಹೇಗಿರಬೇಕು ಎಂದು ಕಲಾವಿದರೇ ತೀರ್ಮಾನ ಮಾಡಬೇಕು. ನಮ್ಮಲ್ಲೂ ಸುಂದರವಾದ ನಟಿಯರಿದ್ದಾರೆ. ನಮ್ಮ ಸಿನಿಮಾ ರಂಗದಲ್ಲಿ ಹೆಚ್ಚಿನ ಅವಕಾಶ ಜೊತೆಗೆ ಹೆಚ್ಚಿನ ಸಂಭಾವನೆ ಸಿಗಬೇಕು. ಪರಭಾಷೆ ಸಿನಿಮಾದಲ್ಲಿ ಯಾಕೆ ನಟಿಸಬಾರದು. ನಮ್ಮ ಪ್ರತಿಭೆ ನೋಡಿ ಹೊರಗಿನವರು ಕೇಳ್ತಾರೆ ಅಂದರೆ ಯಾಕೆ ಹೋಗಬಾರದು. ತಪ್ಪೇನಿಲ್ಲ ಭಾಷೆಯ ಭೇದವಿಲ್ಲದೆ ಕಲಾವಿದರಿರಬೇಕು. ನಾನಂತೂ ಸದ್ಯಕ್ಕೆ ಪರಭಾಷೆಗೆ ಹೋಗೋದಿಲ್ಲ. ನನ್ನನ್ನು ಯಾರೂ ಕರೆದಿಲ್ಲ, ಕನ್ನಡ ಚಿತ್ರರಂಗ ನನಗೆ ಸಾಕಷ್ಟು ಅವಕಾಶ ಕೊಟ್ಟಿದೆ. ಸದ್ಯ ‘ರತ್ನನ್ ಪ್ರಪಂಚ’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿಸಿದರು.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!