Anjanadri: ಹನುಮ ಜನಿಸಿದ ಸ್ಥಳ ಈ ಬಾರಿಯಾದರೂ ಅಭಿವೃದ್ಧಿಯಾಗುತ್ತಾ? ಏಲೆಕ್ಷನಲ್ಲಿ ಅಂಜನಾದ್ರಿ ಜಪ ಮಾಡಿದ್ದ ಜನಾರ್ದನ ರೆಡ್ಡಿ ಹೈಟೆಕ್ ಕಾಯಕಲ್ಪ ನೀಡ್ತಾರಾ‌?

| Updated By: ಸಾಧು ಶ್ರೀನಾಥ್​

Updated on: Jun 05, 2023 | 11:06 AM

ಅತ್ತ ಭಜರಂಗದಳ ಬ್ಯಾನ್ ಮಾಡ್ತೀವಿ ಎಂದಿತ್ತು ಕಾಂಗ್ರೆಸ್. ಅದನ್ನೆ ಅಸ್ತ್ರವಾಗಿಸಿಕೊಂಡಿದ್ದ ಬಿಜೆಪಿ ಬಜರಂಗಬಲಿಯನ್ನು ಮುಂದೆಬಿಟ್ಟು ದೊಡ್ಡಮಟ್ಟದ ಲಾಭ ಪಡೆಯೋಕೆ ಪ್ರಯತ್ನಿಸಿತ್ತು. ಈ ಮಧ್ಯೆ, ಏಲೆಕ್ಷನ್​​ನಲ್ಲಿ ಅಂಜನಾದ್ರಿ ಜಪ ಮಾಡಿದ್ದ ಜನಾರ್ದನ ರೆಡ್ಡಿ ಗೆದ್ದು ಬಂದಿದ್ದು, ಹೈಟೆಕ್ ಕಾಯಕಲ್ಪ ನೀಡ್ತಾರಾ‌?

Anjanadri: ಹನುಮ ಜನಿಸಿದ ಸ್ಥಳ ಈ ಬಾರಿಯಾದರೂ ಅಭಿವೃದ್ಧಿಯಾಗುತ್ತಾ? ಏಲೆಕ್ಷನಲ್ಲಿ ಅಂಜನಾದ್ರಿ ಜಪ ಮಾಡಿದ್ದ ಜನಾರ್ದನ ರೆಡ್ಡಿ ಹೈಟೆಕ್ ಕಾಯಕಲ್ಪ ನೀಡ್ತಾರಾ‌?
ಏಲೆಕ್ಷನಲ್ಲಿ ಅಂಜನಾದ್ರಿ ಜಪ ಮಾಡಿದ್ದ ಜನಾರ್ದನ ರೆಡ್ಡಿ ಹೈಟೆಕ್ ಕಾಯಕಲ್ಪ ನೀಡ್ತಾರಾ‌?
Follow us on

ಅದು ವಾಯುಪುತ್ರ ಆಂಜನೇಯ ಜನ್ಮಸ್ಥಳವೆಂದೆ ಖ್ಯಾತಿ ಪಡೆದ ಸ್ಥಳ. ಇಲ್ಲಿಯವರೆಗೇ ಆಡಳಿತ ನಡೆಸಿದ್ದ ಬಿಜೆಪಿ ಆ ಸ್ಥಳವನ್ನ ರಾಜಕೀಯಕ್ಕಾಗಿ ಬಳಸಿಕೊಂಡಿತ್ತು. ನಯಾಪೈಸೆ ಅಭಿವೃದ್ಧಿ ಮಾಡದೇ ಏಲೆಕ್ಷನ್ ಸರಕಾಗಿಸಿಕೊಂಡಿತ್ತು. ಸದ್ಯ ಗಣಿಧಣಿ ಜನಾರ್ದನ ರೆಡ್ಡಿ (Gangavati MLA Janardhan Reddy) ಕೂಡಾ ಅದೇ ಅಂಜನಾದ್ರಿ ಅಭಿವೃದ್ಧಿ ಮೇಲೆ ಗೆದ್ದು ಬಂದಿದ್ದಾರೆ‌. ಹೀಗಾಗೇ ಅಭಿವೃದ್ಧಿಯ ನಿರೀಕ್ಷೆ (Anjanadri hill temple) ಗರಿಗೆದರಿದೆ. ಹೌದು.‌ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರೋ ಅಂಜನಾದ್ರಿ ಬೆಟ್ಟ ಸದ್ಯ ಇಡೀ ದೇಶಾದ್ಯಂತ ಪ್ರಚಲಿತದಲ್ಲಿದೆ. ಯಾಕೆಂದ್ರೆ ಪವನ ಪುತ್ರ ಆಂಜನೇಯ ಜನಿಸಿದ ಸ್ಥಳವೆಂದೆ ಇದು ಖ್ಯಾತಿ ಪಡೆದಿದೆ. ಹೀಗಾಗೇ ಪ್ರತಿ ಬಾರಿ ಏಲೆಕ್ಷನ್ ಬಂದಾಗಲೊಮ್ಮೆ ಅಂಜನಾದ್ರಿ ಅಭಿವೃದ್ಧಿ ಮುನ್ನೆಲೆಗೆ ಬರುತ್ತೆ. ಕಳೆದ ಬೊಮ್ಮಾಯಿ ಸರ್ಕಾರವಂತೂ ಅಂಜನಾದ್ರಿಯನ್ನ ದೇಶವೇ ತಿರುಗಿ ನೋಡುವಂತೆ ಅಭಿವೃದ್ಧಿ ಮಾಡ್ತೀವಿ ಎನ್ನುವಂತೆ ಬಿಂಬಿಸಿತ್ತು. ಅಷ್ಟೇ ಯಾಕೆ 100 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದೀವಿ, ಆಯೋಧ್ಯೆ ರಾಮ ಮಂದಿರ ಮಾದರಿಯಲ್ಲಿ ಅಭಿವೃದ್ಧಿ ಮಾಡ್ತೀವಿ ಎಂದು ಪ್ರಚಾರ ಪಡೆದು, ಹಿಂದೂ ಮತ ಬ್ಯಾಂಕ್ ಗಟ್ಟಿ ಮಾಡೋಕೆ ಯತ್ನಿಸಿದ್ದರು.

ಆದ್ರೆ ಬಿಜೆಪಿ ಸರ್ಕಾರ 100 ಕೊಟಿ ಅನುದಾನದಲ್ಲಿ ಕೇವಲ 15-20 ಕೋಟಿಯ ಯೋಜನೆಗಷ್ಟೆ ಭೂಮಿ ಪೂಜೆ ಮಾಡಿದ್ದು, ಅದು ಬಿಟ್ರೆ ನಯಾ ಪೈಸೆ ಅಭಿವೃದ್ಧಿ ಮಾಡಿಲ್ಲ. ಅದಾದ ಮೇಲೆ ಸ್ವಂತ ಪಕ್ಷ ಕಟ್ಟಿ ಗಂಗಾವತಿಯಿಂದ ಅಖಾಡಕ್ಕಿಳಿದಿದ್ದ ಗಣಿಧಣಿ ರೆಡ್ಡಿ ಕೂಡಾ ಆಂಜನೇಯನ ಜಪ ಶುರು ಮಾಡಿದ್ದರು. ಅದು ಬರೋಬ್ಬರಿ 5 ಸಾವಿರ ಕೋಟಿ ಅನುದಾನದಲ್ಲಿ ಅಂಜನಾದ್ರಿ ಅಭಿವೃದ್ಧಿ ಮಾಡ್ತೀನಿ ಎಂದಿದ್ದಾರೆ.

ಸಧ್ಯ ಗಂಗಾವತಿ ಜನ ರೆಡ್ಡಿಯನ್ನ ಗೆಲ್ಲಿಸಿ ತಂದಿದ್ದಾರೆ. ಆಂಜನೇಯನ ಜನ್ಮಭೂಮಿ ಈ ಬಾರಿಯಾದ್ರು ಅಭಿವೃದ್ಧಿಯಾಗುತ್ತಾ ಅನ್ನೋ ನೀರಿಕ್ಷೆಯಲ್ಲಿದ್ದಾರೆ. ಗೆದ್ದ ಮೇಲೂ ಸದ್ಯ ರೆಡ್ಡಿ ಅದೇ ಮಾತನಾಡ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹತ್ತಿರ ಅನುದಾನ ತರೋದಲ್ಲದೇ ತಮ್ಮ ವೈಯಕ್ತಿಕ ಸ್ನೇಹ ಸಂರ್ಪಕದ ಮೂಲಕವೂ ಅನುದಾನ ತಂದು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡ್ತೀನಿ ಎನ್ನುತ್ತಿದ್ದಾರೆ ಗಂಗಾವತಿ ನೂತನ ಶಾಸಕ.

ಇದನ್ನೂ ಓದಿ: ಟೋಲ್​ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ; ಫಾಲೋ ಮಾಡಿಕೊಂಡು ಹೋಗಿ ಟೋಲ್​ ಸಿಬ್ಬಂದಿ ಹತ್ಯೆ

ಸದ್ಯ ಗಣಿಧಣಿ ರೆಡ್ಡಿ ಮೇಲೆ ಗಂಗಾವತಿ ಕ್ಷೇತ್ರದ ಜನ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದ್ರೆ ಅದೆಲ್ಲವೂ ಈಡೇರುತ್ತಾ ಅನ್ನೋದೆ ಯಕ್ಷಪ್ರಶ್ನೆಯಾಗಿದೆ. ಈ ಬಾರಿ ಏಲೆಕ್ಷನಲ್ಲಿ ಕಾಂಗ್ರೆಸ್, ಬಿಜೆಪಿ, ಮತ್ತು ಜರ್ನಾದನ ರೆಡ್ಡಿ ಅಂಜನಾದ್ರಿ ವಿಷಯದ ಮೇಲೆಯೇ ಮತಯಾಚನೆ ಮಾಡಿದ್ದರು. ಅತ್ತ ಕಾಂಗ್ರೆಸ್ ಭಜರಂಗದಳ ಬ್ಯಾನ್ ಮಾಡ್ತೀವಿ ಅನ್ನೋದನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಅದನ್ನೆ ಅಸ್ತ್ರವಾಗಿಸಿಕೊಂಡಿದ್ದ ಬಿಜೆಪಿ ದೊಡ್ಡ ಮಟ್ಟದ ಲಾಭ ಪಡೆಯೋಕೆ ಪ್ರಯತ್ನಿಸಿದ್ದಲ್ಲದೇ ಅಂಜನಾದ್ರಿಯಲ್ಲಿ ಹನುಮಾನ ಚಾಲೀಸ್ ಪಠಣ ಮಾಡಿದ್ದರು. ಬಜರಂಗಬಲಿಯನ್ನು ಮುಂದೆಬಿಟ್ಟಿದ್ದರು.

ಸದ್ಯ ಏಲೆಕ್ಷನ್ ಮುಗಿದು, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಎಲ್ಲರ ಗಮನವಿರೋದು ಅಂಜನಾದ್ರಿಯನ್ನ ಯಾರು ಡೆವಲಪ್​ ಮಾಡ್ತಾರೆ ಎನ್ನೋ ಕಡೆ ಕಣ್ಣು ನೆಟ್ಟಿದೆ. ಅದೇ ಏನೆ ಇರಲಿ ಈ ಬಾರಿಯಾದ್ರು ರಾಜಕೀಯ ನಾಯಕರು ಅಂಜನಾದ್ರಿಯನ್ನ ಏಲೆಕ್ಷನ್ ಗಷ್ಟೆ ಸೀಮಿತ ಮಾಡದೇ, ಮುಂದಕ್ಕೆ ಅಭಿವೃದ್ಧಿ ಮಾಡಿದ್ರೆ ಒಳೆಯದು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:48 am, Mon, 5 June 23