ಕೊಪ್ಪಳ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ತಾಯಿಯಿಂದ ಗಂಗಾವತಿ ನಗರ ಠಾಣೆಗೆ ದೂರು

ಬಾಲಕಿ ತಾಯಿ ನಿನ್ನೆ (ನವೆಂಬರ್​ 2) ಗಂಗಾವತಿ ನಗರ ಠಾಣೆಯಲ್ಲಿ ಸುರೇಶ್ ಅಲಿಯಾಸ್ ಸೂರಿ ವಿರುದ್ಧ ದೂರು ದಾಖಲಿಸಿದ್ದಾರೆ.  

ಕೊಪ್ಪಳ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ತಾಯಿಯಿಂದ ಗಂಗಾವತಿ ನಗರ ಠಾಣೆಗೆ ದೂರು
ಅತ್ಯಾಚಾರ ತಡೆಯೋಣ
Edited By:

Updated on: Nov 03, 2021 | 11:17 AM

ಕೊಪ್ಪಳ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಬಾಲಕಿಯ ತಾಯಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ಟೋಬರ್​ 31ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಬಾಲಕಿ ತಾಯಿ ನಿನ್ನೆ (ನವೆಂಬರ್​ 2) ಗಂಗಾವತಿ ನಗರ ಠಾಣೆಯಲ್ಲಿ ಸುರೇಶ್ ಅಲಿಯಾಸ್ ಸೂರಿ ವಿರುದ್ಧ ದೂರು ದಾಖಲಿಸಿದ್ದಾರೆ.  ಕಳೆದ ತಿಂಗಳು 31 ರಂದು ಒಂದು ರೂಪಾಯಿ ನೀಡಿ ಬಾಲಕಿಯನ್ನು ಆರೋಪಿ ಕರೆದೊಯ್ದಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯನ್ನು ಕರೆದೊಯ್ದಿದ್ದಾನೆ ಎಂದು ಬಾಲಕಿ ತಾಯಿ ದೂರು ನೀಡಿದ್ದಾರೆ.

ಆರೋಪಿ ನನ್ನ ಬಟ್ಟೆ ಬಿಚ್ಚಿ ನನ್ನ ಮೇಲೆ ಮಲಗಿದ್ದ ಎಂದು ತಾಯಿಯ ಬಳಿ ಬಾಲಕಿ ಹೇಳಿಕೊಂಡಿದ್ದಾಳೆ. ಹೀಗಾಗಿ ತಾಯಿ ದೂರು ನೀಡಿದ್ದಾರೆ. ಸದ್ಯ ಗಂಗಾವತಿ ನಗರ ಠಾಣೆಯಲ್ಲಿ ಐಪಿಎಸ್​ 376, ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ಯಾದಗಿರಿಯಲ್ಲಿ ಅಣ್ಣನಿಂದ ತಂಗಿ ಮೇಲೆ ಅತ್ಯಾಚಾರ ಆರೋಪ! ಸಂತ್ರಸ್ತೆಯಿಂದ ದೂರು ದಾಖಲು

ಟ್ಯೂಷನ್​ಗೆ ಹೋದ 5ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಶಿಕ್ಷಕಿಯ ಮಗನೇ ಆರೋಪಿ

Published On - 11:16 am, Wed, 3 November 21