ಕೊಪ್ಪಳ: ಸಾವಿನಲ್ಲೂ ಒಂದಾದ ದಂಪತಿ, ಪತಿ ನಿಧನದ ಸುದ್ದಿ ತಿಳಿದು ಪತ್ನಿ ಸಾವು!

| Updated By: ರಮೇಶ್ ಬಿ. ಜವಳಗೇರಾ

Updated on: Oct 03, 2023 | 11:20 AM

ಹಲವು ವರ್ಷಗಳ ಹಿಂದೆ ಕೈ ಹಿಡಿದು ಹಸೆಮಣೆ ತುಳಿದಿದ್ದ ಹನುಮಂತಪ್ಪ ಮೇಟಿ(81) ಹಾಗೂ ಗೌರಮ್ಮ ಮೇಟಿ(65) ದಂಪತಿ ಜೊತೆಯಾಗಿ ಕೈಲಾಸ ಸೇರಿದ್ದಾರೆ. ಪತಿ ಹನುಮಂತಪ್ಪ ನಿಧನದ ಕೆಲವೇ ಗಂಟೆಗಳಲ್ಲಿ ಪತ್ನಿ ಗೌರಮ್ಮ ಸಹ ಮೃತಪಟ್ಟಿದ್ದಾರೆ. ಇದರೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದೆ.

ಕೊಪ್ಪಳ: ಸಾವಿನಲ್ಲೂ ಒಂದಾದ ದಂಪತಿ, ಪತಿ ನಿಧನದ ಸುದ್ದಿ ತಿಳಿದು ಪತ್ನಿ ಸಾವು!
ಸಾವಿನಲ್ಲೂ ಒಂದಾದ ದಂಪತಿ
Follow us on

ಕೊಪ್ಪಳ, (ಅಕ್ಟೋಬರ್ 03): ಹಲವು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ದಂಪತಿ (Couple) ಜೊತೆಯಲ್ಲೇ ಜೀವನ ಪಯಣ ಮುಗಿಸಿದ್ದಾರೆ. ಮೂಲತಃ ಕೊಪ್ಪಳದ (Koppal) ಯಲಬುರ್ಗಾ ತಾಲೂಕಿನ ಹಿರೇಅರಳಹಳ್ಳಿ ಗ್ರಾಮ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಸೋಮವಾರ ರಾತ್ರಿ ಹೃದಯಾಘಾತದಿಂದ (Heart Attack) ಪತಿ ಹನುಮಂತಪ್ಪ ಮೇಟಿ(81) ಕುಷ್ಟಗಿಯಲ್ಲಿರವ ನಿವಾಸದಲ್ಲಿ ನಿಧನರಾಗಿದ್ದರು. ಇತ್ತ ಪತಿಯ ಸಾವಿನಿಂದ ಆಘಾತಗೊಂಡಿದ್ದ ಪತ್ನಿ ಗೌರಮ್ಮ, ಇಂದು(ಮಂಗಳವಾರ) ನಸುಕಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಐದಾರು ಗಂಟೆಗಳ ಅಂತರದಲ್ಲಿ ವೃದ್ಧ ದಂಪತಿ ಸಾವಿನಲ್ಲಿ ಒಂದಾಗಿದೆ.

ಮೂಲತಃ ಯಲಬುರ್ಗಾ ತಾಲೂಕಿನ ಹಿರೇಅರಳಹಳ್ಳಿ ಗ್ರಾಮಸ್ಥರಾಗಿರುವ ಮೃತ ದಂಪತಿ, ಪ್ರಸ್ತುತ ಅನ್ನದಾನೇಶ್ವರ ನಗರದಲ್ಲಿ ವಾಸವಾಗಿದ್ದರು. ಪತಿ ನಿಧನದ ಕೆಲವೇ ಗಂಟೆಗಳಲ್ಲಿ ಪತ್ನಿ ಸಹ ಮೃತಪಟ್ಟಿದ್ದು, ಹಲವು ವರ್ಷಗಳ ಹಿಂದೆ ಕೈ ಹಿಡಿದು ಹಸೆಮಣೆ ತುಳಿದಿದ್ದ ಹನುಮಂತಪ್ಪ ಮೇಟಿ ಹಾಗೂ ಗೌರಮ್ಮ ಮೇಟಿ ಜೊತೆಯಾಗಿ ಕೈಲಾಸ ಸೇರಿದ್ದಾರೆ.

ಕೆಲವೇ ತಾಸುಗಳಲ್ಲಿ ದಂಪತಿ ಸಾವಿನಿಂದ ಕುಟುಂಬದಲ್ಲಿ  ನೀರವ ಮೌನ ಆವರಿಸಿದ್ದು, ಸ್ಥಳೀಯರು ಸಂಬಂಧಿಕರು ದಂಪತಿಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:16 am, Tue, 3 October 23