ಕೊಪ್ಪಳ: ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ನಕಲಿ ಖಾತೆಗಳ (Fake Account) ಹಾವಳಿ ಜಾಸ್ತಿಯಾಗಿದೆ. ಫೇಕ್ ಅಕೌಂಟ್ ಮೂಲಕ ಬ್ಯ್ಲಾಕ್ ಮೇಲ್, ತೇಜೊವಧೆ, ಹಣ ಕೇಳುವುದು ಹಾಗೂ ದೇಶದ್ರೋಹದಂತ ಚಟುವಟಿಕೆಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಲು ರಾಜ್ಯ ಪೊಲೀಸರು (Police) ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಇಲ್ಲಿಯ ಕೆಲವರು ಜಿಲ್ಲಾಧಿಕಾರಿಯ ಹೆಸರಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ತೆರದಿದ್ದಾರೆ. ಹೌದು ಕೊಪ್ಪಳ (Koppal) ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರ ಹೆಸರಲ್ಲಿ ಕೆಲವರು ಫೇಸ್ಬುಕ್ನಲ್ಲಿ ಫೇಕ್ ಅಕೌಂಟ್ ಸೃಷ್ಟಿಸಿದ್ದಾರೆ.
ಈ ಫೇಕ್ ಅಕಂಟ್ಗೆ ಜಿಲ್ಲಾಧಿಕಾರಿಗಳ ಭಾವಚಿತ್ರ ಡಿಪಿ ಇಟ್ಟು ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದರು. ಈ ವಿಚಾರ ತಿಳಿದ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ನನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ವಂಚಿಸಲು ಯತ್ನಿಸುತ್ತಿದ್ದಾರೆ. ಈ ಫೇಕ್ ಸಂದೇಶಕ್ಕೆ ಯಾರೂ ಕೂಡ ಪ್ರತಿಕ್ರಿಯೆ ನೀಡಬಾರದೆಂದು ಅಧಿಕೃತ ಫೇಸ್‌ಬುಕ್ ಮೂಲಕ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ