ಕೊಪ್ಪಳ: ಅಪಾಯಕಾರಿ ಡ್ರೈವಿಂಗ್ ಮಾಡಿ ಚಾಲಕನ ದುರ್ವರ್ತನೆ; 10ಕ್ಕೂ ಹೆಚ್ಚು ಕಿ.ಮೀ ಟೈರ್ ಇಲ್ಲದೆ ಲಾರಿ ಚಾಲನೆ

| Updated By: preethi shettigar

Updated on: Nov 21, 2021 | 10:00 AM

ಖಾಸಗಿ ಕಂಪನಿಗೆ ಸೇರಿದ ಲಾರಿಯನ್ನು ಟೈರ್ ಇಲ್ಲದೆ ಡಿಸ್ಕ್ ಮೇಲೆಯೇ ಕೊಪ್ಪಳದ ಮುಖ್ಯ ರಸ್ತೆಯಲ್ಲಿ ಲಾರಿ ಚಾಲಕ ತಿರುಗಾಡಿಸಿದ್ದಾನೆ. ನಿನ್ನೆ (ನವೆಂಬರ್ 21) ರಾತ್ರಿ ವೇಳೆ ನಡೆದ ಘಟನೆ ಇದಾಗಿದ್ದು, ಸ್ಥಳೀಯರ ಮೊಬೈಲ್​ನಲ್ಲಿ ಚಾಲಕನ ಅಪಾಯಕಾರಿ ವರ್ತನೆ ಸೆರೆಯಾಗಿದೆ.

ಕೊಪ್ಪಳ: ಅಪಾಯಕಾರಿ ಡ್ರೈವಿಂಗ್ ಮಾಡಿ ಚಾಲಕನ ದುರ್ವರ್ತನೆ; 10ಕ್ಕೂ ಹೆಚ್ಚು ಕಿ.ಮೀ ಟೈರ್ ಇಲ್ಲದೆ ಲಾರಿ ಚಾಲನೆ
ಟೈರ್ ಇಲ್ಲದೆ ಡಿಸ್ಕ್ ಮೇಲೆಯೇ ಲಾರಿ ಓಡಾಟ
Follow us on

ಕೊಪ್ಪಳ: ಟೈರ್ ಇಲ್ಲದೆ ಲಾರಿ ಚಲಾಯಿಸಿ ಚಾಲಕ ದುರ್ವರ್ತನೆ ಮೆರೆದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಅಪಾಯಕಾರಿ ಡ್ರೈವಿಂಗ್ ಮಾಡಿದ ಚಾಲಕ, ಟೈರ್ ಇಲ್ಲದೆ ಡಿಸ್ಕ್ ಮೇಲೆಯೇ ಲಾರಿ ಓಡಿಸಿದ್ದಾನೆ. ಕೊಪ್ಪಳ ನಗರಕ್ಕೆ ಪ್ರವೇಶ ಮಾಡುತ್ತಿದ್ದ ವೇಳೆಯೇ ಲಾರಿಯ ಟೈರ್ ಸ್ಫೋಟಗೊಂಡಿತ್ತು (Tyre burst). ಆದರೆ ಲಾರಿ‌ ನಿಲ್ಲಿಸದೆ ಚಾಲಕ (Driver)  ಹಾಗೆಯೇ ಚಲಾಯಿಸಿಕೊಂಡು ಬಂದಿದ್ದಾನೆ. ಸುಮಾರು 10ಕ್ಕೂ ಹೆಚ್ಚು ಕಿ.ಮೀ ಟೈರ್ ಇಲ್ಲದೆ ಲಾರಿ ಚಾಲನೆ ಮಾಡಿದ ಚಾಲಕನನ್ನು ಕಂಡ ಸ್ಥಳೀಯ ಲಾರಿ ಚಾಲಕರು, ಓವರ್​ಟೇಕ್​ ಮಾಡಿ ಲಾರಿ ನಿಲ್ಲಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಖಾಸಗಿ ಕಂಪನಿಗೆ ಸೇರಿದ ಲಾರಿಯನ್ನು ಟೈರ್ ಇಲ್ಲದೆ ಡಿಸ್ಕ್ ಮೇಲೆಯೇ ಕೊಪ್ಪಳದ ಮುಖ್ಯ ರಸ್ತೆಯಲ್ಲಿ ಲಾರಿ ಚಾಲಕ ತಿರುಗಾಡಿಸಿದ್ದಾನೆ. ನಿನ್ನೆ (ನವೆಂಬರ್ 20) ರಾತ್ರಿ ವೇಳೆ ನಡೆದ ಘಟನೆ ಇದಾಗಿದ್ದು, ಸ್ಥಳೀಯರ ಮೊಬೈಲ್​ನಲ್ಲಿ ಚಾಲಕನ ಅಪಾಯಕಾರಿ ವರ್ತನೆ ಸೆರೆಯಾಗಿದೆ.

ನಡುರಸ್ತೆಯಲ್ಲಿ ಯುವಕರ ಸೈಕಲ್ ವೀಲಿಂಗ್ ಕಂಡು ವಾಹನ ಸವಾರರು ಕಕ್ಕಾಬಿಕ್ಕಿ
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಬುದ್ದ ಸರ್ಕಲ್​ನ ಮುಖ್ಯರಸ್ತೆಯಲ್ಲಿ ಸೈಕಲ್​​ಗಳ ಮೂಲಕ ಯುವಕರು ವೀಲಿಂಗ್ ಮಾಡುತ್ತಿದ್ದು, ವಾಹನ ಸವಾರರಿಗೆ ಕಿರಿ ಕಿರಿ ಉಂಟುಮಾಡಿದೆ. ಇತ್ತೀಚೆಗೆ ನಡು ರಸ್ತೆಯಲ್ಲಿ ಯುವಕರು ಬೈಕ್​ನಲ್ಲಿ ವೀಲಿಂಗ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಬಗ್ಗೆ ನಾವು ಕೇಳಿದ್ದೇವು. ಆದರೆ ಇಲ್ಲಿ ಯುವಕರು ಸೈಕಲ್​ನಲ್ಲಿ ವೀಲಿಂಗ್ ಮಾಡಿ ಸಾರ್ವಜನಿಕರ ಆತಂಕಕ್ಕೆ ಕಾರಣರಾಗಿದ್ದಾರೆ. ಸದ್ಯ ಈ ವೀಲಿಂಗ್ ವಿಡಿಯೋಗಳು ವೈರಲ್ ಆಗಿದೆ.

ನಗರದಲ್ಲಿ ಸೈಕಲ್ ವೀಲಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಯಾರೋ ಒಂದಿದಬ್ಬರು ಮಾಡಿರಬಹುದು, ನಮ್ಮ ಪೊಲೀಸರು ಟ್ರಾಫಿಕ್​ನಲ್ಲಿ ಸರಿಯಾದ ಕೆಲಸ ಮಾಡುತ್ತಿದ್ದಾರೆ. ಕೆಲವೊಂದು ಕಡೆ ಕ್ರೇಜ್​ಗಾಗಿ ಹುಡಗರು ಈ ರೀತಿ ಮಾಡುತ್ತಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಗಂಗಾವತಿ ಸಂಚಾರಿ ಠಾಣೆ ಸಬ್ಇ ನ್ಸ್‌ಪೆಕ್ಟರ್ ಪುಂಡಪ್ಪ ಟಿವಿ9 ಡಿಜಿಟಲ್​ಗೆ ತಿಳಿಸಿದ್ದಾರೆ.

ನಗರದಲ್ಲಿ ವೀಲಿಂಗ್​ ಹಾವಳಿ ಹೆಚ್ಚಾಗಿದೆ. ಕೆಲ ಕಡೆ ಬೈಕ್ ವೀಲಿಂಗ್​ ಮಾಡಿದರೆ, ಕೆಲ ಕಡೆ ಸೈಕಲ್ ‌ಮೂಲಕ ನಡು ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದಾರೆ. ಇದರಿಂದ ಕೆಲವೊಂದು ಸಲ ಅಪಘಾತ ಸಂಭಿವಿಸುತ್ತಿವೆ‌. ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕು ಎಂದು ಕರವೇ ಹೋರಾಟಗಾರರಾದ ಪಂಪಣ್ಣ ನಾಯಕ್ ಹೇಳಿದ್ದಾರೆ.

ಇದನ್ನೂ ಓದಿ:
ರೈತರು, ಮಹಿಳೆಯರ ಮೇಲೆ ಪೊಲೀಸರ ದಬ್ಬಾಳಿಕೆ; ಧರಣಿ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಜಮೀನು ಮಾಲೀಕ

ಅಪ್ಪ ಶಂಕರ್​​ಗೆ ಕಾಲ್​ಗರ್ಲ್ಸ್, ವೇಶ್ಯೆಯರ ಸಹವಾಸ ಇತ್ತು; ಶಂಕರ್ ಹೊರ ಜಗತ್ತಿಗೆ ಮುಖವಾಡ ಹಾಕಿ ಬದುಕುತ್ತಿದ್ದ: ಪುತ್ರನ ವರಸೆ

 

Published On - 9:55 am, Sun, 21 November 21