ಅಪ್ಪ ಶಂಕರ್ಗೆ ಕಾಲ್ಗರ್ಲ್ಸ್, ವೇಶ್ಯೆಯರ ಸಹವಾಸ ಇತ್ತು; ಶಂಕರ್ ಹೊರ ಜಗತ್ತಿಗೆ ಮುಖವಾಡ ಹಾಕಿ ಬದುಕುತ್ತಿದ್ದ: ಪುತ್ರನ ವರಸೆ
ತಂದೆ ವಿರುದ್ಧ ಗಂಭೀರ ಆರೋಪ ಮಾಡಿದ್ದ ಮಧುಸಾಗರ್, ದೂರಿನ ಪ್ರತಿಗಳನ್ನು ಜೆರಾಕ್ಸ್ ಮಾಡಿ ಹಂಚಿದ್ದನಂತೆ. ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಂದೆಯ ಬಗ್ಗೆ ಮಗ ಆರೋಪಗಳ ಸುರಿ ಮಳೆಯಲ್ಲೇ ಮಾಡಿದ್ದ.
ಬೆಂಗಳೂರು: ನಗರದ ಬಂದೇ ಕುಟುಂಬದ ಐವರ ಸಾವು ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಕುತೂಹಲಕಾರಿ ಸಂಗತಿ ಹೊರ ಬಿದ್ದಿದೆ. ನಿನ್ನೆ ಸಿಕ್ಕ ಮೃತರ ಡೆತ್ನೋಟ್ನಲ್ಲಿ ತಂದೆ ವಿರುದ್ಧವೇ ಆರೋಪಿಸಿ ಆತ್ಮಹತ್ಯೆಗೆ ಅವರೇ ಕಾರಣ ಎಂದು ಮಕ್ಕಳು ತಮ್ಮ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದರು. ಈಗ ಮತ್ತೊಂದು ಕಡೆ ಮೃತ ಮಧು ಆತ್ಮಹತ್ಯೆಗೂ ಕೆಲ ದಿನಗಳ ಹಿಂದೆ ತಂದೆ ಶಂಕರ್ ವಿರುದ್ಧ ದೂರು ನೀಡಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಶಂಕರ್ ಪುತ್ರ ಮಧುಸಾಗರ್ ತಂದೆ ವಿರುದ್ಧ ಆರೋಪ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದನಂತೆ.
ತಂದೆ ವಿರುದ್ಧ ಗಂಭೀರ ಆರೋಪ ಮಾಡಿದ್ದ ಮಧುಸಾಗರ್, ದೂರಿನ ಪ್ರತಿಗಳನ್ನು ಜೆರಾಕ್ಸ್ ಮಾಡಿ ಹಂಚಿದ್ದನಂತೆ. ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಂದೆಯ ಬಗ್ಗೆ ಮಗ ಆರೋಪಗಳ ಸುರಿ ಮಳೆಯಲ್ಲೇ ಮಾಡಿದ್ದ. ಮಹಿಳಾಪೀಡಕ, ಸೈಕೋಪಾಥ್ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದನಂತೆ. ಶಂಕರ್ ಸಮಾಜದಲ್ಲಿ ‘ಪ್ರತಿಷ್ಠೆ’ಗಾಗಿ ಏನು ಬೇಕಾದರೂ ಮಾಡಬಲ್ಲರು. ನನ್ನ ತಾಯಿಗೆ ಹಲವು ವರ್ಷಗಳಿಂದ ಕಿರುಕುಳ ಕೊಟ್ಟಿದ್ದಾನೆ. ಶಂಕರ್‌ನದ್ದು ದುರ್ವರ್ತನೆಯಿಂದ ಕೂಡಿದ ಜೀವನವಾಗಿತ್ತು. ಶಂಕರ್ ಹೊರ ಜಗತ್ತಿಗೆ ‘ಮುಖವಾಡ’ ಹಾಕಿ ಬದುಕುತ್ತಿದ್ದ. ಅಪ್ಪ ಶಂಕರ್ ತುಂಬಾ ಸ್ವಾರ್ಥಿ ಅಂತಾ ಮಧುಸಾಗರ್ ದೂರಿನಲ್ಲಿ ಉಲ್ಲೇಖಿಸಿದ್ದ.
ಅಪ್ಪ ಶಂಕರ್ಗೆ ಅನೈತಿಕ ಸಂಬಂಧ ಇತ್ತು ಅಂತಾ ಮಗ ಮಧುಸಾಗರ್ ಆರೋಪ ಮಾಡಿದ್ದ. ಶಂಕರ್ಗೆ ಕಾಲ್ಗರ್ಲ್ಸ್, ವೇಶ್ಯೆಯರ ಸಹವಾಸ ಇತ್ತು. ‘ರಾಜಾಜಿನಗರದ ಕಚೇರಿಯಲ್ಲೇ ಅನೈತಿಕ ಚಟುವಟಿಕೆ’ ನಡೆಸುತ್ತಿದ್ದರು ಎಂದು ದೂರಿನ ಪ್ರತಿಯಲ್ಲಿ 3-4 ಮಹಿಳೆಯರ ಹೆಸರು ಕೂಡ ಉಲ್ಲೇಖ ಮಾಡಿದ್ದ. ಹಾಗೂ ಈನ ಆರೋಪಗಳಿಗೆ ವಾಟ್ಸಾಪ್ ಸ್ಕ್ರೀನ್ ಶಾಟ್ ಸಾಕ್ಷಿ ಇದೆಯೆಂದು ದೂರಿನಲ್ಲಿ ಮಧು ಉಲ್ಲೇಖಿಸಿದ್ದಾನೆ. ಐವರು ಮಹಿಳೆಯರ ಜೊತೆ ಅಪ್ಪನಿಗೆ ಅಕ್ರಮ ಸಂಬಂಧ ಇದೆ. ಅಪ್ಪ ಶಂಕರ್ ಕಾಮುಕ ಅನ್ನೋದು ಅಮ್ಮನಿಗೆ ಗೊತ್ತಿತ್ತು. ನನ್ನ ಅಮ್ಮನನ್ನ ಕೆಲಸದವರಂತೆ ಅಪ್ಪ ನೋಡಿಕೊಂಡಿದ್ದಾನೆ. ಅಮ್ಮನ ವಿರುದ್ಧ ಸೇಡು ತೀರಿಸಿಕೊಳ್ತಿದ್ದ ಅಪ್ಪ ಎಂದು ದೂರಿನಲ್ಲಿ ಮೃತ ಮಧು ಉಲ್ಲೇಖಿಸಿ ಈ ಹಿಂದೆಯೇ ತಂದೆಯ ವಿರುದ್ಧ ದೂರು ನೀಡಿದ್ದ.
ಇದನ್ನೂ ಓದಿ: ಒಂದೇ ಕುಟುಂಬದ ಐವರ ಸಾವು ಪ್ರಕರಣ; ಅಪ್ಪನ ವಿರುದ್ಧ ಆರೋಪಿಸಿ ಡೆತ್ನೋಟ್ ಬರೆದ ಶಂಕರ್ ಮಕ್ಕಳು, ಏನಿದೆ ಅದರಲ್ಲಿ?
Published On - 9:54 am, Mon, 20 September 21