ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು(Contaminated Water) ಸೇವಿಸಿ ಓರ್ವ ವೃದ್ಧೆ ಮೃತಪಟ್ಟ ಘಟನೆ ನಡೆದಿತ್ತು. ಆದ್ರೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ವೃದ್ಧೆ ಸಾವಿಗೆ ಕಲುಷಿತ ನೀರು ಕಾರಣವಲ್ಲ ಎಂದು ಕೊಪ್ಪಳದ ಡಿಹೆಚ್ ಓ ತಿಳಿಸಿದ್ದಾರೆ. ಬಸರಿಹಾಳ ಗ್ರಾಮದ ಹೊನ್ನಮ್ಮಗೆ ಬೇರೆ ಬೇರೆ ಕಾಯಿಲೆ ಇದ್ದವು. ಹೀಗಾಗಿ ಮೃತ ಪಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಸರಿಹಾಳ ಗ್ರಾಮದ ಹೊನ್ನಮ್ಮಗೆ ಬೇರೆ ಬೇರೆ ಕಾಯಿಲೆ ಇದ್ದವು. ನ್ಯೂಮೋನಿಯಾ,ಕಿಡ್ನಿ ಪೆಲ್ಯೂರ್ ಆಗಿದ್ದವು. ನಾವು ಮೇ 30ರಂದು ಅವರಿಗೆ ಆಸ್ಪತ್ರೆಗೆ ದಾಖಲು ಮಾಡುವಂತೆ ಹೇಳಿದ್ದೆವು. ಕಲಷಿತ ನೀರಿನ ಟೆಸ್ಟ್ ರಿಪೋರ್ಟ್ ಬರಬೇಕಾಗಿದೆ. ವೃದ್ದೆ ಹೊನಮ್ಮ ಸಾವು ಕಲುಷಿತ ನೀರಿನಿಂದಲೇ ಆಗಿದೆ ಎಂದು ಹೇಳೋಕ್ಕಾಗಲ್ಲ. ಅವರಿಗೆ ಸಿವಿಯರ್ ಹಾರ್ಟ್ ಸಮಸ್ಯೆ ಇತ್ತು ಎಂದು ಡಿಹೆಚ್ಓ ಪ್ರಕರಣಕ್ಕೆ ಬೇರೆಯದ್ದೇ ತಿರುವು ನೀಡಿದ್ದಾರೆ.
ಇದನ್ನೂ ಓದಿ: ರಾಯಚೂರು ಆಯ್ತು, ಈಗ ಕೊಪ್ಪಳದಲ್ಲಿ ಕಲುಷಿತ ನೀರು ಕುಡಿದು ವೃದ್ಧೆ ಸಾವು; ಮಂದಿ ಅಸ್ವಸ್ಥ
ಇನ್ನು ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ರತ್ನಂ ಪಾಂಡೇಯ, ಆ ಗ್ರಾಮದಲ್ಲಿ ಜನರು ಜಾಸ್ತಿ ನೀರು ಬರಲಿ ಎನ್ನುವ ಕಾರಣಕ್ಕೆ ಗುಂಡಿ ತೋಡಿದ್ದಾರೆ. ಅಲ್ಲಿ ಬಟ್ಟೆ ತೊಳೆದ ನೀರು, ಚರಂಡಿ ನೀರು ಸೇರಿ ಕಲುಷಿತವಾಗಿದೆ. ಈಗಾಗಲೇ ಸುತ್ತ ಮುತ್ತ ಇರುವ ಗ್ರಾಮಗಳಲ್ಲಿ ವಾಟರ್ ಟೆಸ್ಟಿಂಗ್ ಮಾಡೋಕೆ ಹೇಳಿದ್ದೇವೆ. ಅಲ್ಲದೇ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಪ್ರತಿದಿನ ಸಭೆ ಮಾಡಲು ಹೇಳಿದ್ದೇನೆ. ಯಾರ್ಯಾರು ಮನೆ ಮುಂದೆ ಗುಂಡಿ ತೋಡಿದ್ದಾರೆ. ಅದನ್ನ ಮುಚ್ಚಿಸಲು ಹೇಳಿದ್ದೇನೆ. ಈಗಾಗಲೇ ಡಿಸಿ, ನಾನು ಖುದ್ದು ಭೇಟಿ ನೀಡಿ ಪರಿಶೀಲಿನೆ ಮಾಡಿದ್ದೇವೆ. ಇನ್ಮೇಲೆ ಈ ರೀತಿ ಆಗೋಕ್ಕೆ ಬಿಡೋದಿಲ್ಲ. ಮಳೆಗಾಲ ಹತ್ತಿರ ಇರುವುದರಿಂದ ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನ ನೀಡುವುದಕ್ಕೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಕೊಪ್ಪಳದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ