ಕೊಪ್ಪಳದಲ್ಲಿ ಹಾಲಿನೋಕುಳಿಯ ರಥೋತ್ಸವ, ಊರಿನ ತುಂಬಾ ಹಬ್ಬದ ರಂಗು

|

Updated on: Dec 27, 2019 | 5:21 PM

ಕೊಪ್ಪಳ: ಶಿಳ್ಳೆ ಕೇಕೆ.. ವಾದ್ಯಗಳ ನಿನಾದ.. ಕಲಾತಂಡಗಳ ಕಲರವ.. ಎಲ್ಲರನ್ನೂ ಸೀಳಿ ರಥ ಮುನ್ನುಗ್ತಿದ್ರೆ ನೋಡೋವ್ರ ಕಣ್ಣು ತಣಿದಿದ್ವು. ಮನಸ್ಸು ತುಂಬಿ ಬಂದಿತ್ತು. ಮೈತುಂಬಾ ಆಧ್ಯಾತ್ಮದ ಸಿಂಚನವಾದಂತಿತ್ತು. ಭಕ್ತಿ ಭಂಡಾರವನ್ನ ಎರಚುತ್ತಾ ಮಂದಿ ಸಾಗ್ತಿದ್ರೆ ಕಣ್ಣಿಗೆ ಹಬ್ಬದಂತಿತ್ತು. ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಮುಸಲಾಪೂರ ಗ್ರಾಮದಲ್ಲಿ ನಡೆದ ಚನ್ನಬಸವೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಥೋತ್ಸವಕ್ಕೂ ಮುನ್ನ ಹಾಲೋಕುಳಿ ಆಡಿದ್ರು. ಯಾವದ ಸಮುದಾಯದವ್ರು ತಮ್ಮ ಜಾನುವಾರುಗಳಿಗೆ ಏನೂ ಆಗಬಾರದು ಹಾಗೂ ಗ್ರಾಮದ ಒಳಿತಿಗಾಗಿ ಹಾಲೋಕುಳಿಯಲ್ಲಿ ಮಿಂದೆದ್ರು. ಕಳೆದ 11 […]

ಕೊಪ್ಪಳದಲ್ಲಿ ಹಾಲಿನೋಕುಳಿಯ ರಥೋತ್ಸವ, ಊರಿನ ತುಂಬಾ ಹಬ್ಬದ ರಂಗು
Follow us on

ಕೊಪ್ಪಳ: ಶಿಳ್ಳೆ ಕೇಕೆ.. ವಾದ್ಯಗಳ ನಿನಾದ.. ಕಲಾತಂಡಗಳ ಕಲರವ.. ಎಲ್ಲರನ್ನೂ ಸೀಳಿ ರಥ ಮುನ್ನುಗ್ತಿದ್ರೆ ನೋಡೋವ್ರ ಕಣ್ಣು ತಣಿದಿದ್ವು. ಮನಸ್ಸು ತುಂಬಿ ಬಂದಿತ್ತು. ಮೈತುಂಬಾ ಆಧ್ಯಾತ್ಮದ ಸಿಂಚನವಾದಂತಿತ್ತು. ಭಕ್ತಿ ಭಂಡಾರವನ್ನ ಎರಚುತ್ತಾ ಮಂದಿ ಸಾಗ್ತಿದ್ರೆ ಕಣ್ಣಿಗೆ ಹಬ್ಬದಂತಿತ್ತು.

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಮುಸಲಾಪೂರ ಗ್ರಾಮದಲ್ಲಿ ನಡೆದ ಚನ್ನಬಸವೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಥೋತ್ಸವಕ್ಕೂ ಮುನ್ನ ಹಾಲೋಕುಳಿ ಆಡಿದ್ರು. ಯಾವದ ಸಮುದಾಯದವ್ರು ತಮ್ಮ ಜಾನುವಾರುಗಳಿಗೆ ಏನೂ ಆಗಬಾರದು ಹಾಗೂ ಗ್ರಾಮದ ಒಳಿತಿಗಾಗಿ ಹಾಲೋಕುಳಿಯಲ್ಲಿ ಮಿಂದೆದ್ರು.

ಕಳೆದ 11 ವರ್ಷಗಳ ಹಿಂದೆ ಮುಸಲಾಪೂರ ಗ್ರಾಮದಲ್ಲಿ ಚನ್ನಬಸವೇಶ್ವರ ಜಾತ್ರೆಗೆ ರಥೋತ್ಸವ ನಿರ್ಮಾಣ ಮಾಡಿದ್ರು. ಇನ್ನು ಚನ್ನಬಸವೇಶಸ್ವರ ರಥೋತ್ಸವದ 11 ದಿನ ಮುಂಚಿನಿಂದಲೇ ಗ್ರಾಮದಲ್ಲಿ ತಮ್ಮ ಜಾನುವಾರು ಹಾಲನ್ನು ಉಪಯೋಗಿಸದೆ ಹಾಲೋಕುಳಿಗೆ ಮೀಸಲಿಡುತ್ತಾರೆ.

ರಥೋತ್ಸವದ ದಿನ ಎಲ್ಲ ಹಾಲನ್ನು ಒಂದೆಡೆ ಸಂಗ್ರಹಿಸಿ ಅದಕ್ಕೆ ಪೂಜೆ ಮಾಡಿ ಬಳಿಕ ರಥೋತ್ಸವದ ಪೂರ್ವದಲ್ಲಿ ಹಾಲೋಕುಳಿ ಆಡುತ್ತಾರೆ. ಕೇವಲ ಮುಸಲಾಪೂರ ಅಲ್ಲದೆ ಕನಕಗಿರಿ, ವೆಂಕಟಾಪೂರ, ಬಂಕಾಪೂರ ಸೇರಿದಂತೆ 10 ಕ್ಕೂ ಹೆಚ್ಚು ಹಳ್ಳಿಗಳ ಯಾದವ ಸಮಾಜದವರು ಪಾಲ್ಗೊಳ್ಳುತ್ತಾರೆ. ಹೀಗೆ ಹಾಲೋಕುಳಿ ಆಡುವುದರಿಂದ ಜಾನುವಾರು ಹಾಗೂ ಗ್ರಾಮಸ್ಥರಿಗೆ ಒಳ್ಳೇದಾಗುತ್ತೆ ಅನ್ನೋದು ನಂಬಿಕೆ.



Published On - 11:40 am, Fri, 27 December 19