ಹುಡುಗಿಯ ಕೊಂದು, ತಾನೂ ಸೂಸೈಡ್ ಮಾಡಿಕೊಂಡ ಪ್ರೇಮಿ: ಹಾಡಹಗಲೇ ಇಬ್ಬರ ದುರಂತ ಅಂತ್ಯ

| Updated By: ಸಾಧು ಶ್ರೀನಾಥ್​

Updated on: Jan 14, 2023 | 8:19 PM

one side love: ರಕ್ತದ ಮಡುವಿಗೆ ಜಾರಿದ ಯುವತಿ - ಯುವಕನ ಹೆಸರು ಸುಮಾ ಹಾಗೂ ಪ್ರಕಾಶ ಭಜಂತ್ರಿ ಅಂತ. ಇಬ್ಬರೂ ಹೆಚ್ಚು ಕಮ್ಮಿ ಒಂದೇ ಏರಿಯಾದವರೇ. ಒಬ್ಬರಿಗೊಬ್ಬರ ಪರಿಚಯವಿತ್ತು. ಪ್ರಕಾಶ ಸುಮಾಳನ್ನ ಪ್ರೀತಿಸುತ್ತಿದ್ದ. ಆದರೆ ಅದು ಒನ್ ಸೈಡ್ ಲವ್ ಆಗಿತ್ತಂತೆ.

ಹುಡುಗಿಯ ಕೊಂದು, ತಾನೂ ಸೂಸೈಡ್ ಮಾಡಿಕೊಂಡ ಪ್ರೇಮಿ: ಹಾಡಹಗಲೇ ಇಬ್ಬರ ದುರಂತ ಅಂತ್ಯ
ಯುವತಿಯ ಕೊಂದು, ತಾನೂ ಸೂಸೈಡ್ ಮಾಡಿಕೊಂಡ ಪ್ರೇಮಿ
Follow us on

ಅವರಿಬ್ಬರದ್ದು ಹದಿಹರಯದ ವಯಸ್ಸು. ಆ ವಯಸ್ಸೆ ಹಾಗೇ ಎಂತಹವರನ್ನೂ ಕೂಡಾ ಪ್ರೀತಿ ಎಂಬ ಮಾಯೆಗೆ ಸಿಕ್ಕಿಸಿಬಿಡುತ್ತೆ. ಇಲ್ಲೊಬ್ಬ ಯುವಕ ಕೂಡಾ ಪ್ರೀತ್ಸೆ ಪ್ರೀತ್ಸೆ ಅಂತ (lover) ಹುಡುಗಿಯ ಪ್ರಾಣ ತಿಂತಿದ್ದ‌.ಇಂದು ಆಕೆಯ ಮನೆಗೆ ಹೋಗಿದ್ದ ಆತ ಕ್ಷಣ ಮಾತ್ರದಲ್ಲಿ ಇಬ್ಬರು ರಕ್ತದ ಮಡುವಿನಲ್ಲಿ ತೇಲುತ್ತಿದ್ದರು.. ಹಾಗಿದ್ರೆ ಅಲ್ಲೇನಾಯ್ತು…? ಅವರನ್ನ ಕೊಂದವರ್ಯಾರು ಅನ್ನೋ ವಿವರ-ಪ್ರವರ ಇಲ್ಲಿದೆ. ಹಾಡ ಹಗಲೇ ಇಬ್ಬರ ದುರಂತ ಅಂತ್ಯ -ಹೌದು.‌ ಪ್ರೀತಿ ಮಾಯೆ ಹುಷಾರು…ಕಣ್ಣೀರ್ ಮಾರೋ ಬಜಾರು ಎನ್ನೋ ಹಾಡಿನಂತೆ, ಇಲ್ಲೊಂದು ಒನ್ ಸೈಡ್ ಲವ್ ಸ್ಟೋರಿ ದುರಂತ ಅಂತ್ಯ ಕಂಡು ಹೆತ್ತವರನ್ನು ಕಣ್ಣೀರು ಹಾಕುವಂತೆ ಮಾಡಿದೆ. ಪಾಗಲ್ ಪ್ರೇಮಿಯ ಅಟ್ಟಹಾಸಕ್ಕೆ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದರು (murder, suicide). ಇಂತಹ ಭೀಕರ ದೃಶ್ಯಕ್ಕೆ ಸಾಕ್ಷಿಯಾಗಿದ್ದು, ಕೊಪ್ಪಳ (koppal) ಜಿಲ್ಲೆ ಕುಕನೂರು (kuknoor) ತಾಲೂಕಿನ ಬಳಿಗೇರಿ ಗ್ರಾಮ.

ಅಂದಹಾಗೇ ರಕ್ತದ ಮಡುವಿಗೆ ಜಾರಿದ ಯುವತಿ – ಯುವಕನ ಹೆಸರು ಸುಮಾ ಹಾಗೂ ಪ್ರಕಾಶ ಭಜಂತ್ರಿ ಅಂತ. ಇಬ್ಬರೂ ಹೆಚ್ಚು ಕಮ್ಮಿ ಒಂದೇ ಏರಿಯಾದವರೇ. ಹೀಗಾಗೇ ಒಬ್ಬರಿಗೊಬ್ಬರ ಪರಿಚಯವಿತ್ತು. ಪ್ರಕಾಶ ಸುಮಾಳನ್ನ ಪ್ರೀತಿಸುತ್ತಿದ್ದ. ಆದರೆ ಅದು ಒನ್ ಸೈಡ್ ಲವ್ ಸ್ಟೋರಿಯಾಗಿತ್ತಂತೆ. ಹೀಗಾಗೇ ಆಕೆಯ ಹಿಂದೆ ಬಿದ್ದಿದ್ದ ಈತ ಪದೇ ಪದೇ ಆಕೆಯನ್ನ ಪ್ರೀತಿಸುವಂತೆ ದುಂಬಾಲು ಬೀಳ್ತಿದ್ದನಂತೆ.

ಇಂದು ಕೂಡಾ ಯುವತಿಯ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸಲ್ಲದ ರೀತಿಯಲ್ಲಿ ಮನೆಗೆ ನುಗ್ಗಿದ್ದ ಆತ, ಆಕೆಗೆ ಮನಬಂದಂತೆ ಚಾಕುವಿನಿಂದ ಇರಿದು ಭೀಕರ ಹತ್ಯೆ ಮಾಡಿದ್ದಾನೆ. ‌ನಂತ್ರ ತಾನೂ ಕೂಡಾ ಅದೇ ಚಾಕುವಿನಿಂದ ಇರಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಎರಡೂ ಕುಟುಂಬದದಲ್ಲಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಹುಡುಗನ ತಾಯಿ ನಿಂಗಮ್ಮ, ತನ್ನ ಮಗನದ್ದು ಏನೂ ತಪ್ಪಿಲ್ಲ. ಆತ ಆಕೆಯನ್ನ ಪ್ರೀತಿ ಮಾಡೋ ವಿಷಯವೂ ತಿಳಿದಿಲ್ಲ. ಅವರೇ ಆತನನ್ನ ಮನೆಗೆ ಕರೆಯಿಸಿಕೊಂಡು ಮೋಸ ಮಾಡಿದ್ದಾರೆ ಎನ್ನುತ್ತಿದ್ದಾರೆ.

ಸದ್ಯ ಪಿಯುಸಿ ಓದುತ್ತಿರೊ ಯುವತಿ ಅಪ್ರಾಪ್ತಳಗಾಗಿದ್ದಳು. ಐಟಿಐ ಮುಗಿಸಿ ಊರಲ್ಲೆ ಕೆಲಸ ಮಾಡಿಕೊಂಡಿದ್ದ ಪ್ರಕಾಶ ತನ್ನನ್ನ ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದ್ರೆ ಯುವತಿ ಮಾತ್ರ ಒಪ್ಪಿರಲಿಲ್ಲವಂತೆ.‌ ಮೇಲಾಗಿ ಇಬ್ಬರದ್ದು ಜಾತಿ ಬೇರೆ ಬೇರೆ ಇತ್ತು. ಹೀಗಾಗೇ ಸುಮಾ, ಪ್ರಕಾಶನ ಪ್ರೀತಿಯನ್ನ ಒಪ್ಪಿರಲಿಲ. ಈ ವಿಷಯ ಗ್ರಾಮದಲ್ಲಿರೋರಿಗೂ ಗೊತ್ತಿತ್ತಂತೆ.

ಅರುಣಾಂಗ್ಶು ಗಿರಿ, ಎಸ್ಪಿ, ಕೊಪ್ಪಳ

ಪ್ರಕಾಶನಿಗೆ ಬುದ್ದಿ ಮಾತು ಕೂಡಾ ಹೇಳಲಾಗಿತ್ತು. ಆದ್ರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ಪ್ರಕಾಶ್ ಇಂದು ಆಕೆಯ ಮನೆಯಲ್ಲಿ ಯಾರೂ ಇಲ್ಲದನ್ನ ನೋಡಿ ಮನೆಗೆ ಚಾಕು ಹಿಡಿದುಕೊಂಡೆ ಹೋಗಿದ್ದಾನೆ. ಅಲ್ಲಿಯೂ ತನ್ನ ಪ್ರೀತಿ ಒಪ್ಪಿಕೊಳ್ಳವಂತೆ ಪೀಡಿಸಿದ್ದಾನೆ. ಆಕೆ ಒಪ್ಪದಿದ್ದಾಗ ಚಾಕುವಿನಿಂದ ಕುತ್ತಿಗೆಗೆ ಮನ ಬಂದಂತೆ ಇರಿದು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅರುಣಾಂಗ್ಶು ಗಿರಿ, ಎಸ್ಪಿ, ಕೊಪ್ಪಳ ತಿಳಿಸಿದ್ದಾರೆ.

ಸದ್ಯ ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದು ಒನ್ ಸೈಡ್ ಲವ್ ಸ್ಟೋರಿನಾ ಅಥವಾ ಬೇರೆ ಇನ್ನೇನಾದ್ರು ಇದಿಯಾ ಎನ್ನೋ ಆ್ಯಂಗಲ್‌ ನಲ್ಲಿ ತನಿಖೆ ನಡೆಸುತ್ತಿದ್ದಾರೆ. ಒಟ್ನಲ್ಲಿ ಪಾಗಲ್ ಪ್ರೇಮಿ ಅಟ್ಟಹಾಸಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಅದೇನೇ ಇರಲಿ ಪ್ರೀತಿ ಎಂಬ ಮಾಯೆಗೆ ಇಬ್ಬರು ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ದುರ್ದೈವ.

ವರದಿ: ದತ್ತಾತ್ರೇಯ ಪಾಟೀಲ್, ಟಿವಿ9, ಕೊಪ್ಪಳ

Published On - 8:17 pm, Sat, 14 January 23