ಮದುವೆಯಾಗುವುದಾಗಿ ಮಹಿಳೆಯರಿಗೆ ವಂಚನೆ; ಪಿಎಸ್​ಐ ವಿರುದ್ಧ ಹಲವು ಮಹಿಳೆಯರಿಂದ ಆರೋಪ

| Updated By: sandhya thejappa

Updated on: Dec 19, 2021 | 1:14 PM

ಪಿಎಸ್ಐ ಸುಮಾರು ನಾಲ್ಕೈದು ಮಹಿಳೆಯರಿಗೆ ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಎಸ್​ಪಿ ಕಚೇರಿಗೆ ಆಗಮಿಸಿ ಮಹಿಳೆಯರು ನ್ಯಾಯ ಕೊಡಿಸುವಂತೆ ಕೇಳಿದ್ದಾರೆ. ವಧು ನೋಡುವ ನೆಪದಲ್ಲಿ ಬಂದು ಮುತ್ತಣ್ಣ ಯಾಮಾರಿಸುತ್ತಿದ್ದ ಎಂದು ಹೇಳಲಾಗುತ್ತಿದೆ.

ಮದುವೆಯಾಗುವುದಾಗಿ ಮಹಿಳೆಯರಿಗೆ ವಂಚನೆ; ಪಿಎಸ್​ಐ ವಿರುದ್ಧ ಹಲವು ಮಹಿಳೆಯರಿಂದ ಆರೋಪ
ಪಿಎಸ್ಐ ಮುತ್ತಪ್ಪ
Follow us on

ಕೊಪ್ಪಳ: ಪಿಎಸ್ಐ ಮಹಿಳೆಯರಿಗೆ ಮದುವೆಯಾಗುವುದಾಗಿ ನಂಬಿಸಿ, ವಂಚಿಸಿದ ಆರೋಪ ಕೇಳಿಬಂದಿದೆ. ಪಿಎಸ್ಐ ಮುತ್ತಪ್ಪ ವಿರುದ್ಧ ಹಲವು ಮಹಿಳೆಯರು ಆರೋಪಿಸಿದ್ದಾರೆ. ಕೊಪ್ಪಳ ಫಿಂಗರ್ ಪ್ರಿಂಟ್ ವಿಭಾಗದ ಪಿಎಸ್ಐ ಮುತ್ತಪ್ಪ ಬಡಿಗೇರ್ ವಿರುದ್ಧ ಮೋಸ ಹೋದವರು ಎಸ್​ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆ ಪಿಎಸ್ಐ ವಿರುದ್ಧ ಕ್ರಮಕ್ಕೆ ಫಿಂಗರ್ ಪ್ರಿಂಟ್ ವಿಭಾಗದ ಎಡಿಜಿಗೆ ಪತ್ರ ಬರೆಯಲಾಗಿದೆ. ಈ ಹಿಂದೆ ಮುತ್ತಪ್ಪನಿಗೆ ಕೊಪ್ಪಳ ಎಸ್​ಪಿ ಟಿ.ಶ್ರೀಧರ್ 2 ಬಾರಿ ವಾರ್ನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪಿಎಸ್ಐ ಸುಮಾರು ನಾಲ್ಕೈದು ಮಹಿಳೆಯರಿಗೆ ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಎಸ್​ಪಿ ಕಚೇರಿಗೆ ಆಗಮಿಸಿ ಮಹಿಳೆಯರು ನ್ಯಾಯ ಕೊಡಿಸುವಂತೆ ಕೇಳಿದ್ದಾರೆ. ವಧು ನೋಡುವ ನೆಪದಲ್ಲಿ ಬಂದು ಮುತ್ತಪ್ಪ ಯಾಮಾರಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ನಿನ್ನೆ ಮಹಿಳೆಯೊಬ್ಬರ ಕುಟುಂಬದಿಂದ ಎಸ್​ಪಿ ಅವರಿಗೆ ಮೌಖಿಕ ದೂರು ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಎಸ್​ಪಿ ಕಚೇರಿಯಿಂದ ಮುತ್ತಣ್ಣ ಬಡಿಗೇರ್ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ
ಶಿವಮೊಗ್ಗದ ರೈಲ್ವೆ ಸ್ಟೇಷನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. 1 ಕೆಜಿ 59 ಗ್ರಾಂ ತೂಕದ ಒಣ ಗಾಂಜಾ, 5 ಮೊಬೈಲ್ ಫೋನ್, 500 ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವೀನ್, ಪ್ರದೀಪ್, ಗಿರೀಶ್, ಬಸವರಾಜಪ್ಪ ವಿರುದ್ಧ ಎನ್​ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಮಹಾನ್ ನಾಯಕರ ಹೆಸರಿನಲ್ಲಿ ಬಡಿದಾದುವುದು ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಅನ್ಯಾಯ ಮಾಡಿದಂತೆ; ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್

ಮೈಸೂರು: ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ; 100 ಕೋಟಿ ರೂ. ಮೌಲ್ಯದ 5.14 ಎಕರೆ ಒತ್ತುವರಿ ಜಾಗ ತೆರವು

Published On - 1:10 pm, Sun, 19 December 21