
ಬೆಂಗಳೂರು, (ಅಕ್ಟೋಬರ್ 8): ಮಳೆ ಇಲ್ಲದೇ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಬೆಳೆ ಇಲ್ಲದೇ ಊರಲ್ಲಿ ಯಾವುದೇ ಕೆಲಸವಿಲ್ಲದೇ ಕಂಗಾಲಾಗಿದ್ದು, ಹೊಟ್ಟೆಪಾಡಿಗಾಗಿ ಬೇರೆ ಊರುಗಳಿಗೆ ಗುಳೆ ಹೊರಟ್ಟಿದ್ದಾರೆ. ಆದ್ರೆ, ಇದು ಉಪಮುಖ್ಯಮಂತ್ರಿ, ಡಾ ಜಿ ಪರಮೇಶ್ವರ್ ಅವರಿಗೆ ಟ್ರೆಡಿಷನಲ್ ಅನ್ನಿಸಿದೆ. ಹೌದು…ಕೆಲವರು ಟ್ರೆಡಿಷನಲ್‌ಗಾಗಿ ಗುಳೆ ಹೋಗುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಕೊಪ್ಪಳದಲ್ಲಿಂದು ಬರಗಾಲ ಪರಿಶೀಲನೆ ಸಭೆಯಲ್ಲಿ ಮಾತನಅಡುವ ವೇಳೆ ಈ ರೀತಿ ಹೇಳಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.
ಇಂದು (ಅಕ್ಟೋಬರ್ 08) ಕೊಪ್ಪಳ ಜಿಲ್ಲಾ ಪಂಚಾಯಿತಿಯಲ್ಲಿ ಬರ ಪರಿಶೀಲನೆ ವೇಳೆ ಮಾತನಾಡಿದ ಪರಮೇಶ್ವರ್, ರಾಜ್ಯದಲ್ಲಿ ಕೆಲವರು ಗುಳೆ ಹೋಗುತ್ತಿದ್ದಾರೆ. ಸುಮಾರು 40ರಿಂದ 45 ವರ್ಷದವರು ಕೆಲಸಕ್ಕೆ ಹೋಗಿದ್ದಾರೆ. ಕಬ್ಬು ಕಟಾವಿಗೆ ಹೋಗಿದ್ದಾರೆ, ಗೋವಾ, ಬೆಂಗಳೂರಿಗೆ ಕೆಲಸಕ್ಕೆ ಹೋಗಿದ್ದಾರೆ. ಕೆಲವರು ಟ್ರೆಡಿಷನಲ್‌ಗಾಗಿ ಹೋಗುತ್ತಾರೆ. ಅವರನ್ನು ತಡೆಯಕ್ಕೆ ಆಗುವುದಿಲ್ಲ. ನೀವೇ ಏನೇ ಮಾಡಿದರೂ ಅವರನ್ನು ತಡೆಯಕ್ಕೆ ಆಗಲ್ಲ. ಅವರನ್ನು ಬಿಟ್ಟ ಬಿಡಿ. ಆದರೆ ಜನ ಹೆಚ್ಚು ಗುಳೆ ಹೋಗದಂತೆ ನೀವೇ ನೋಡಿಕೊಳ್ಳಬೇಕು ಎಂದು ಹೇಳಿದರು.
ಇಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಬರ ಪರಿಸ್ಥಿತಿ ಹಾಗೂ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನಾ ಸಭೆ ನಡೆಸಿದೆ.
ಎರಡೂ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ, ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಅಗತ್ಯ ನೆರವು ಒದಗಿಸುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಸೂಕ್ತ ನಿರ್ದೇಶನಗಳನ್ನು ನೀಡಿದೆ.
ಬರ ಪರಿಸ್ಥಿತಿಯಿಂದ ಜನಸಾಮಾನ್ಯರು ಹಾಗೂ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕದಂತೆ ಮುನ್ನೆಚ್ಚರಿಕೆ ವಹಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚಿಸಿದೆ.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಕೊಪ್ಪಳ ಜಿಲ್ಲಾಧಿಕಾರಿಗಳಾದ ಸುರೇಶ್ ಹಿಟ್ನಾಳ್, ರಾಯಚೂರು ಜಿಲ್ಲಾಧಿಕಾರಿಗಳಾದ ಪೂವಿತಾ, ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ವರ್ಣೀತ್ ನೇಗಿ ಹಾಗೂ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕುಮಾರ್ ಕಾಂದೂ ಉಪಸ್ಥಿತರಿದ್ದರು.
Today, I chaired a review meeting at the Koppal Deputy Commissioner’s Office on the drought situation in Koppal and Raichur districts and the measures being taken for drought management.
I reviewed the availability of drinking water, fodder for livestock, local employment to prevent distress migration, and support for farmers affected by crop loss, and issued necessary directions to the officials.
Officials were instructed to take precautionary measures and ensure that relief measures are implemented without delay, so that farmers and the public do not face further hardship due to the drought.
Koppal District In-charge Minister Shivaraj Tangadagi, MLA Raghavendra Hitnal, Koppal Deputy Commissioner Suresh Itnal, Raichur Deputy Commissioner Poovitha, Koppal Zilla Panchayat CEO Varneeth Negi, and Raichur Zilla Panchayat CEO Ishwar Kumar Kandoo were present.
— Dr. G Parameshwara (@DrParameshwara) October 8, 2026
ಹಳ್ಳಿಗಳಲ್ಲಿ ವಯಸ್ಸಾದವರು ಇದಾರೆ. ಅವರಿಗೆ ಕೆಲಸ ಮಾಡಲು ಆಗಲ್ಲ. ವಯಸ್ಸಿದ್ದವರೂ ದುಡಿಯಲು ಹೋಗಿದ್ದಾರೆ, ಇವರನ್ನು ತಡೆಯಬೇಕು. ವಿಬಿ-ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಕೆಲಸ ಕೊಡಬೇಕು. ಕೆಲವು ಕಡೆ ಅಧಿಕಾರಿಗಳು ಒಂದು ತಿಂಗಳು ಆದರೂ ಸಂಬಳ ಕೊಟ್ಟಿಲ್ಲ. ನೀವು ಕೆಲಸ ಮಾಡಿಸಿಕೊಂಡು ಕೂಲಿ ಕೊಡಲ್ಲ, ಅವರೇನು ಮಾಡಬೇಕು. ಅವರಿಗೆ ಹಣ ಕೊಟ್ರೆ ಸಮಸ್ಯೆ ಆಗಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಟ್ರೆಡಿಷನಲ್ ಗಾಗಿ ಗುಳೇ ಹೋಗ್ತಾರೆ ಎನ್ನುವ ಹೇಳಿಕೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ಕೆಲವರು ಸಾಮಾನ್ಯವಾಗಿ ಕಾಫಿತೋಟಕ್ಕೆ ಹೋಗುತ್ತಾರೆ. ನಾನು ಅದನ್ನು ಹೇಳಿದ್ದೇನೆ. ಟ್ರೆಡಿಷನಲ್ ಅಂದ್ರೆ ಸಂಪ್ರದಾಯಿಕವಾಗಿ ಹೋಗುತ್ತಾರೆ ಎಂದು ಹೇಳಿದೀನಿ. ನಾನ ಹೇಳಿದ್ದು ಅರ್ಥ ಮಾಡಿಕೊಳ್ಳಿ. ಲಂಬಾಣಿ ಸಮುದಾಯ,ವರ್ಷಕ್ಕೊಮ್ಮೆ ಕಾಫಿತೋಟಕ್ಕೆ ಹೋಗ್ತಾರೆ. ಅದು ಸಂಪ್ರದಾಯ, ದುಡಿಮೆನೆ ಸಂಪ್ರದಾಯ ಅವರಿಗೆ ನಾನು ಆ ಅರ್ಥದಲ್ಲಿ ಹೇಳಿದ್ದೇನೆ ಎಂದು ತಿಳಿಸಿದರು.
Published On - 7:00 pm, Thu, 8 October 26