ಗುತ್ತಿಗದಾರರ ಸಂಘದ ಅಧ್ಯಕ್ಷನ ಮೇಲೆ ಸಚಿವ ಶಿವರಾಜ್​ ತಂಗಡಗಿ ಸಹೋದರನ ದರ್ಪ; ಯಾಕೆ ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 31, 2023 | 5:03 PM

ಸಚಿವರ ಕಚೇರಿಯಲ್ಲಿ ಇದ್ದ ನಾಗರಾಜ್​ ತಂಗಡಗಿ ಹಾಗೂ ಎಸ್​ಸಿ/ಎಸ್​ಟಿ ಗುತ್ತಿಗದಾರರ ಸಂಘದ ಅಧ್ಯಕ್ಷ ಗಣೇಶ್ ಹೊರತಟ್ನಾಳ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸಚಿವ ಶಿವರಾಜ್​ ತಂಗಡಗಿ ಅವರಿಗೆ ಕರೆ ಮಾಡಿದ ಗಣೇಶ್ ಹೊರತಟ್ನಾಳ್, ಸಹೋದರನ ಬಗ್ಗೆ ದೂರು ನೀಡಿದ್ದಾರೆ. ಇನ್ನು ಸಚಿವರಿಗೆ ಕರೆ ಮಾಡುತ್ತಿದ್ದಂತೆ ಶಿವರಾಜ್​ ತಂಗಡಗಿ ದೂರವಾಣಿಯಲ್ಲಿಯೇ ಸಮಾಧಾನ ಪಡಿಸಿದ್ದಾರೆ. 

ಗುತ್ತಿಗದಾರರ ಸಂಘದ ಅಧ್ಯಕ್ಷನ ಮೇಲೆ ಸಚಿವ ಶಿವರಾಜ್​ ತಂಗಡಗಿ ಸಹೋದರನ ದರ್ಪ; ಯಾಕೆ ಗೊತ್ತಾ?
ಗುತ್ತಿಗೆದಾರನ ಮೇಲೆ ಸಚಿವ ಶಿವರಾಜ್​ ತಂಗಡಗಿ ಸಹೋದರನ ದರ್ಪ
Follow us on

ಕೊಪ್ಪಳ, ಅ.31: ಸಚಿವ ಶಿವರಾಜ್​ ತಂಗಡಗಿ(Shivaraj Tangadagi) ಸಹೋದರ ನಾಗರಾಜ್ ತಂಗಡಗಿ ಎಂಬಾತ ಎಸ್​ಸಿ/ಎಸ್​ಟಿ ಗುತ್ತಿಗದಾರರ ಸಂಘದ ಅಧ್ಯಕ್ಷ ಗಣೇಶ್ ಹೊರತಟ್ನಾಳ್ ಮೇಲೆ ದರ್ಪ ತೋರಿದ ಆರೋಪ ಕೇಳೀಬಂದಿದೆ. ಹೌದು, ಸಂಬಂಧ ಇಲ್ಲದ ವಿಷಯಕ್ಕೆ ತಲೆ ಹಾಕಿದ ನಾಗರಾಜ್​ ತಂಗಡಗಿಗೆ ಕೊಪ್ಪಳ(Koppala) ನಗರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಕಚೇರಿಯಲ್ಲಿ ಗಣೇಶ್ ಹೊರತಟ್ನಾಳ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ದೂರವಾಣಿಯಲ್ಲಿ ಸಮಾಧಾನ ಪಡಿಸಿದ ಶಿವರಾಜ್​ ತಂಗಡಗಿ

ಇನ್ನು ಗಲಾಟೆ ಜೋರಾಗುತ್ತಿದ್ದಂತೆ ನಾಗರಾಜ್ ತಂಗಡಗಿ ಇಇ ಕಚೇರಿಯಿಂದ ಕಾಲ್ಕಿತ್ತಿದ್ದಾರೆ. ನಂತರ ಸಚಿವರ ಕಚೇರಿಯಲ್ಲಿ ಇದ್ದ ನಾಗರಾಜ್​ ತಂಗಡಗಿ ಹಾಗೂ ಗಣೇಶ್ ಹೊರತಟ್ನಾಳ್ ನಡುವೆ ಮಾತಿನ ಚಕಮಕಿ ನಡೆದಿದೆ. ‘ನಾನು ಯಾರಂತ ಹೇಳ್ತಿನಿ ಹೊರಗೆ ಬನ್ನಿ ಎಂದು ನಾಗರಾಜ್ ತಂಗಡಗಿಗೆ ಗಣೇಶ್ ಹೊರತಟ್ನಾಳ್​ ಹೇಳಿದ್ದಾರೆ. ಈ ವೇಳೆ ಸಚಿವ ಶಿವರಾಜ್​ ತಂಗಡಗಿ ಅವರಿಗೆ ಕರೆ ಮಾಡಿದ ಗಣೇಶ್ ಹೊರತಟ್ನಾಳ್, ಸಹೋದರನ ಬಗ್ಗೆ ದೂರು ನೀಡಿದ್ದಾರೆ. ಇನ್ನು ಸಚಿವರಿಗೆ ಕರೆ ಮಾಡುತ್ತಿದ್ದಂತೆ ಶಿವರಾಜ್​ ತಂಗಡಗಿ ದೂರವಾಣಿಯಲ್ಲಿಯೇ ಸಮಾಧಾನ ಪಡಿಸಿದ್ದಾರೆ.

ಇದನ್ನೂ ಓದಿ:ಅಧಿಕಾರಿಯ ವರ್ಗಾವಣೆಗೆ ಕೈ​ ನಾಯಕರ ಮಧ್ಯೆ ಗುದ್ದಾಟ; ಶಾಸಕರ ಪತ್ರಕ್ಕೆ ಡೋಂಟ್​ ಕೇರ್​ ಎಂದ ಸಚಿವ

ಗಲಾಟೆಗೆ ಕಾರಣವೇನು?

ಹೌದು, ಕನಕಗಿರಿ ಕ್ಷೇತ್ರದ SCP/TSP ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಸುಮಾರು 1 ಕೋಟಿ 82ಲಕ್ಷ ರೂ. ಗೋಲ್ ಮಾಲ್ ಆರೋಪ ಕೇಳಿಬಂದಿದೆ. ಈ ಕುರಿತು ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಇಇಗೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಗಣೇಶ್ ಹೊರತಟ್ನಾಳ್ ದೂರು ನೀಡಿದ್ದರು. ತನಿಖೆ ಬಗ್ಗೆ ವರದಿ ಕೇಳಲು ಣೇಶ್ ಹೊರತಟ್ನಾಳ್ ಕೊಪ್ಪಳ ನಗರದಲ್ಲಿರುವ ಕಚೇರಿಗೆ ಹೋಗಿದ್ದ ವೇಳೆ, ಅಲ್ಲೇ ಇದ್ದ ನಾಗರಾಜ್ ತಂಗಡಗಿ ‘ದೂರು ನೀಡಲು ನೀನ್ಯಾರು ಎಂದು ಪ್ರಶ್ನೆ ಮಾಡಿದ್ದಾರೆ, ಇದಕ್ಕೆ ಪ್ರತಿಯಾಗಿ ಕನಕಗಿರಿ ಕ್ಷೇತ್ರಕ್ಕೂ ನಿನಗೇನು ಸಂಬಂಧ? ಎಲ್ಲಿದೆ ನಿನ್ನ ಐಡೆಂಟಿ ಕಾರ್ಡ್ ಎಂದು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆ ಗುತ್ತಿಗೆದಾರ ಅಧ್ಯಕ್ಷ ಗಣೇಶ್ ಹೊರತಟ್ನಾಳ್, ನಾಗರಾಜ್ ತಂಗಡಗಿ ನಡುವೆ ಮಾತಿನ ಚಕಮಕಿ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ