ಹಳ್ಳದಲ್ಲಿ ಪೊಲೀಸ್ ಪೇದೆಗಳು ಕೊಚ್ಚಿಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪೊಲೀಸ್ ಪೇದೆ ಮಹೇಶ್ ಶವವು ಪತ್ತೆಯಾಗಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಹಾಳ ಹಳ್ಳದ ಬ್ರಿಜ್ ಬಳಿ ಶವ ಪತ್ತೆಯಾಗಿದೆ. ಮೊನ್ನೆ ರಾತ್ರಿ ತೊಂಡಿಹಾಳದಲ್ಲಿ ಹಳ್ಳದಲ್ಲಿ ಪೇದೆಗಳಾದ ನಿಂಗಪ್ಪ,ಮಹೇಶ್ ಕೊಚ್ಚಿಕೊಂಡು ಹೋಗಿದ್ದರು.
ಸೆಪ್ಟೆಂಬರ್ 6ರಂದು ಪೇದೆ ನಿಂಗಪ್ಪನ ಶವ ಪತ್ತೆಯಾಗಿತ್ತು ಮಹೇಶ್ ಗಾಗಿ ಎನ್ ಡಿ ಆರ್ ಎಫ್ ತಂಡ ಹಾಗೂ ಸ್ಥಳೀಯರು ತೀವ್ರ ಶೋಧ ನಡೆಸಿದ್ದರು. ನಿರಂತರ ಶೋಧದ ಬಳಿಕ ಮಹೇಶ್ ಶವ ಪತ್ತೆಯಾಗಿದೆ.
ಕರ್ನಾಟಕದಾದ್ಯಂತ ರಣ ರಕ್ಕಸ ಮಳೆಯಾಗುತ್ತಿದ್ದು, ರಾಜ್ಯದ ಹಲವೆಡೆ ಹಿಂದೆಂದೂ ಕಂಡಿರದಷ್ಟು ಮಳೆಯಾಗುತ್ತಿದೆ. ಮಳೆಯಿಂದ ಹಲವೆಡೆ ಸಾವು-ನೋವುಗಳು ಸಹ ಸಂಭವಿಸಿವೆ.
ಪೊಲೀಸ್ ಕಾನ್ಸ್‌ಟೇಬಲ್‌ಗಳಿಬ್ಬರು ಮಳೆ ನೀರಲ್ಲಿ ಕೊಚ್ಚಿ ಹೋದ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ನಡೆದಿತ್ತು.
ಬಂಡಿಹಾಳ ಗ್ರಾಮ ಹೊರವಲಯದಲ್ಲಿ ಸೋಮವಾರ ತಡರಾತ್ರಿ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯ ಪೇದೆಗಳಾದ ಮಹೇಶ್ ಮತ್ತು ನಿಂಗಪ್ಪ ನೀರಲ್ಲಿ ಕೊಚ್ಚಿ ಹೋಗಿದ್ದರು.
ಸೋಮವಾರ ರಾತ್ರಿ ಕರ್ತವ್ಯ ಮುಗಿಸಿಕೊಂಡು ವಾಪಸ್ ಬರುವಾಗ ಬಂಡಿಹಾಳ ಗ್ರಾಮ ಹೊರವಲಯದಲ್ಲಿ ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದರು.
Published On - 3:21 pm, Wed, 7 September 22