ಸೋಂಕಿತೆ ಅಂತ್ಯಕ್ರಿಯೆಗೆ ಗ್ರಾಮಸ್ಥರ ವಿರೋಧ, ಕೊನೆಗೂ ಮನವೊಲಿಸಿದ ಶಾಸಕರು

| Updated By: ಸಾಧು ಶ್ರೀನಾಥ್​

Updated on: Jun 18, 2020 | 12:45 PM

ಕೊಪ್ಪಳ: ಕೊರೊನಾ ಸೋಂಕಿಗೆ ಬಲಿಯಾದ ಮಹಿಳೆಯ ಅಂತ್ಯಕ್ರಿಯೆಯನ್ನು ಸ್ವಗ್ರಾಮದಲ್ಲಿ ನಡೆಸುವುದಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿ ನಡೆದಿದೆ. ಜಿಂದಾಲ್​ ನೌಕರನಾಗಿದ್ದ ಮಗನಿಂದ ತಗುಲಿತ್ತು ಸೋಂಕು ಪೇಶಂಟ್​ ನಂಬರ್​ 7105 ಎಂದು ಗುರುತಿಸಲಾಗಿದ್ದ 50 ವರ್ಷದ ಮಹಿಳೆ ನಿನ್ನೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿಗೆ ಅಸುನೀಗಿದ್ದರು. ಮೃತ ಮಹಿಳೆಯ ಮಗ ಜಿಂದಾಲ್ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದು ಆತನಿಂದ ಆಕೆ ಹಾಗೂ ಆಕೆಯ ಪತಿಗೂ ಸೋಂಕು ತಗುಲಿತ್ತು. ಸೋಂಕಿತೆಯ ಅಂತ್ಯಕ್ರಿಯೆಗೆ ಗ್ರಾಮಸ್ಥರ ವಿರೋಧ […]

ಸೋಂಕಿತೆ ಅಂತ್ಯಕ್ರಿಯೆಗೆ ಗ್ರಾಮಸ್ಥರ ವಿರೋಧ, ಕೊನೆಗೂ ಮನವೊಲಿಸಿದ ಶಾಸಕರು
Follow us on

ಕೊಪ್ಪಳ: ಕೊರೊನಾ ಸೋಂಕಿಗೆ ಬಲಿಯಾದ ಮಹಿಳೆಯ ಅಂತ್ಯಕ್ರಿಯೆಯನ್ನು ಸ್ವಗ್ರಾಮದಲ್ಲಿ ನಡೆಸುವುದಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿ ನಡೆದಿದೆ.

ಜಿಂದಾಲ್​ ನೌಕರನಾಗಿದ್ದ ಮಗನಿಂದ ತಗುಲಿತ್ತು ಸೋಂಕು
ಪೇಶಂಟ್​ ನಂಬರ್​ 7105 ಎಂದು ಗುರುತಿಸಲಾಗಿದ್ದ 50 ವರ್ಷದ ಮಹಿಳೆ ನಿನ್ನೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿಗೆ ಅಸುನೀಗಿದ್ದರು. ಮೃತ ಮಹಿಳೆಯ ಮಗ ಜಿಂದಾಲ್ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದು ಆತನಿಂದ ಆಕೆ ಹಾಗೂ ಆಕೆಯ ಪತಿಗೂ ಸೋಂಕು ತಗುಲಿತ್ತು.

ಸೋಂಕಿತೆಯ ಅಂತ್ಯಕ್ರಿಯೆಗೆ ಗ್ರಾಮಸ್ಥರ ವಿರೋಧ
ಹಾಗಾಗಿ ಇಂದು ಅಂತ್ಯಸಂಸ್ಕಾರ ನೆರವೇರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡು ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮುಗಿಸಲು ಮುಂದಾಗಿತ್ತು. ಆದರೆ ಇದಕ್ಕೆ ಮರಳಿ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಸಾರ್ವಜನಿಕ ಸ್ಮಶಾನ ಬಿಟ್ಟು ಬೇರೆ ಸರ್ಕಾರಿ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಿ ಎಂದು ಗ್ರಾಮಸ್ಥರು ಪ್ರತಿಭಟನೆಗೆ ಇಳಿದರು. ಕೂಡಲೇ ಸ್ಥಳದಲ್ಲಿದ್ದ ತಹಶೀಲ್ದಾರ್ ಚಂದ್ರಕಾಂತ್ ಹಾಗೂ ಪೊಲೀಸರು ಅವರ ಮನವೊಲಿಸಲು ಯತ್ನಿಸಿದರು. ಆದರೆ ಗ್ರಾಮಸ್ಥರು ಅವರ ಮಾತು ಒಪ್ಪಲಿಲ್ಲ.

ಕೊನೆಗೂ ಗ್ರಾಮಸ್ಥರ ಮನವೊಲಿಸಿದ ಶಾಸಕ
ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಕನಕಗಿರಿ ಶಾಸಕ ಬಸವರಾಜ್ ದಢೇಸೂಗೂರು ಸ್ವತಃ ಅಲ್ಲಿಗೆ ಬಂದರು. ಗ್ರಾಮಸ್ಥರ ಮನವೊಲಿಸುತ್ತಿರೋ ಪ್ರಯತ್ನ ಕೂಡ ಮಾಡಿದರು. ಕೊನೆಗೆ 15 ದಿನಗಳ ಒಳಗೆ ಸ್ಮಶಾನಕ್ಕೆ ಪರ್ಯಾಯ ಜಾಗ ಕೊಡಿಸೋದಾಗಿ ಭರವಸೆ ನೀಡಿದ ಮೇಲೆ ಸ್ಥಳೀಯರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು.