ಕೊಪ್ಪಳ: ನಾನು ನೋಡಿದ ಮೊದಲ ವೀರ. ಬಾಳು ಕಲಿಸಿದ ಸಲಹೆಗಾರ. ಬೆರಗು ಮೂಡಿಸೊ ಜಾದುಗಾರ ಅಪ್ಪಾ ಎಂದು ಹಲವಾರು ಮಕ್ಕಳು ಇಂದು ತಮ್ಮ ತಂದೆಯನ್ನು ಅಕ್ಕರೆಯಿಂದ ಮುದ್ದಾಡುತ್ತಿರುತ್ತಾರೆ. ಯಾಕಂದ್ರೆ ಇವತ್ತು ಫಾದರ್ಸ್ ಡೇ. ಹೌದು, ಗದರೊ ಮೀಸೆಕಾರನಾದ್ರು ನಮ್ಮೆಲ್ಲರ ಅಪ್ಪಂದಿರ ಮನಸ್ಸು ಸದಾ ಕೋಮಲ. ತಮ್ಮ ಮಕ್ಕಳಿಗಾಗಿ ಜೀವನವನ್ನೇ ಮುಡಿಪಾಗಿಡೋ ಸಾಕಷ್ಟು ಅಪ್ಪಂದಿರನ್ನೂ ಕೂಡ ನೋಡಿದ್ದೇವೆ.
14 ವರ್ಷದ ಮಗಳ ಮಡಿಲು ತುಂಬಿದ ಪಾಪಿ ತಂದೆ…!
ಆದರೆ ಇಲ್ಲೊಬ್ಬ ಅಯೋಗ್ಯ ತಂದೆ ಎಂಬ ಪದಕ್ಕೇ ಕಳಂಕ ತರುವಂಥ ಕೆಲಸ ಮಾಡಿದ್ದಾನೆ. ಸ್ವಂತ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಆತನ ದುಷ್ಕೃತ್ಯದಿಂದ ಆಕೆ ಗರ್ಭಿಣಿಯಾಗಿ, ಒಂದು ಮಗುವಿಗೆ ಜನ್ಮ ನೀಡಿದ್ದಾಳೆ. ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಯ ಗಂಗಾವತಿಯಲ್ಲಿರುವ ಖಾಸಗಿ ಆಸ್ಪತ್ರೆಗೆ 14 ವರ್ಷದ ಮಗಳನ್ನು ಆಕೆಯ ತಾಯಿ ಹೆರಿಗೆ ಮಾಡಿಸಲು ಕರೆತಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ.
ಹುಡುಗಿಯ ತಾಯಿಯನ್ನ ವಿಚಾರಿಸಿದ ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದರು. ಕೂಡಲೇ ಆಸ್ಪತ್ರೆಗೆ ಬಂದ ಕೊಪ್ಪಳ ಗ್ರಾಮಾಂತರ ಠಾಣೆಯ ಪೊಲೀಸರು ಹುಡುಗಿಯ ತಾಯಿ ನೀಡಿದ ದೂರಿನನ್ವಯ ಪಾಪಿ ತಂದೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಒಟ್ನಲ್ಲಿ, ಈ ಪಾಪಿ ಮಾಡಿರುವ ಮನೆಹಾಳು ಕೆಲಸದಿಂದ ಎಲ್ಲರೂ ತಲೆ ತಗ್ಗಿಸುವಂತಾಗಿದೆ. ಬೆರಳನ್ನು ಹಿಡಿದರೆ ವಿಶ್ವಾಸವು ಬೆಳೆವುದು. ಹೆಗಲಲ್ಲಿ ಕುಳಿತರೆ ಕುತೂಹಲ ತಣಿವುದು. ನಾನು ಎಂದೂ ಹೇಳಿಲ್ಲ. ಯಾಕಂತ ನಂಗೂ ತಿಳಿದಿಲ್ಲ. ನೀನು ಅಂದ್ರೆ ಅಚ್ಚುಮೆಚ್ಚಪ್ಪ ಎಂದು ಹೇಳಬೇಕಿದ್ದ ಮಗಳ ಕಣ್ಣಲ್ಲಿ ವಿಶ್ವಾಸದ್ರೋಹಿಯಾಗಿದ್ದಾನೆ. ಇಂಥ ತಂದೆ ಯಾರಿಗೂ ಬೇಡವೇ ಬೇಡ ಅಂತಾ ಛೀಮಾರಿ ಹಾಕಿಸಿಕೊಂಡಿದ್ದಾನೆ.