ಕೊರೊನಾಗೆ ಹೆದರಿ ಊರು ತೊರೆದ ಗ್ರಾಮಸ್ಥರು!

| Updated By:

Updated on: Jun 28, 2020 | 3:10 PM

ಕೊಪ್ಪಳ: ರಾಜ್ಯದಲ್ಲಿ ಕೊರೊನಾ ರಣಕೇಕೆ ಅಟ್ಟಹಾಸ ಮೆರೀತಿದೆ. ಕೆಲವೊಂದು ಕಡೆ ಕೊರೊನಾದಿಂದ ಬೆದರಿ ಹೋಗಿರೋ ಜನ ಸ್ವಯಂ ಲಾಕ್​ಡೌನ್ ಹೆಜ್ಜೆ ತುಳಿದಿದ್ದಾರೆ. ಕೊಪ್ಪಳದ 16ನೇ ವಾರ್ಡ್‌ನಲ್ಲಿ 67 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೃದ್ಧ ವಾಸ ಮಾಡುತ್ತಿದ್ದ ಏರಿಯಾದಲ್ಲಿ ಆತಂಕ ಶುರುವಾಗಿದೆ. ಕೊರೊನಾ ಆತಂಕದಿಂದ ನಗರದ ಕುರುಬರ ಓಣಿಯಲ್ಲಿ ಬೀಗ ಹಾಕಿ ಮನೆಯನ್ನೇ ಜನರು ತೊರೆದಿದ್ದಾರೆ. ಟ್ರಾವೆಲ್ ಹಿಸ್ಟರಿ ಇಲ್ಲದ ವೃದ್ಧನಿಗೆ ಕೊರೊನಾ ಸೋಂಕು ವಕ್ಕರಿಸಿದೆ. ಹೀಗಾಗಿ ಹೆಮ್ಮಾರಿ ಭಯದಿಂದ ವೃದ್ಧನ ಅಕ್ಕಪಕ್ಕದ ಬಹುತೇಕ […]

ಕೊರೊನಾಗೆ ಹೆದರಿ ಊರು ತೊರೆದ ಗ್ರಾಮಸ್ಥರು!
Follow us on

ಕೊಪ್ಪಳ: ರಾಜ್ಯದಲ್ಲಿ ಕೊರೊನಾ ರಣಕೇಕೆ ಅಟ್ಟಹಾಸ ಮೆರೀತಿದೆ. ಕೆಲವೊಂದು ಕಡೆ ಕೊರೊನಾದಿಂದ ಬೆದರಿ ಹೋಗಿರೋ ಜನ ಸ್ವಯಂ ಲಾಕ್​ಡೌನ್ ಹೆಜ್ಜೆ ತುಳಿದಿದ್ದಾರೆ. ಕೊಪ್ಪಳದ 16ನೇ ವಾರ್ಡ್‌ನಲ್ಲಿ 67 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೃದ್ಧ ವಾಸ ಮಾಡುತ್ತಿದ್ದ ಏರಿಯಾದಲ್ಲಿ ಆತಂಕ ಶುರುವಾಗಿದೆ.

ಕೊರೊನಾ ಆತಂಕದಿಂದ ನಗರದ ಕುರುಬರ ಓಣಿಯಲ್ಲಿ ಬೀಗ ಹಾಕಿ ಮನೆಯನ್ನೇ ಜನರು ತೊರೆದಿದ್ದಾರೆ. ಟ್ರಾವೆಲ್ ಹಿಸ್ಟರಿ ಇಲ್ಲದ ವೃದ್ಧನಿಗೆ ಕೊರೊನಾ ಸೋಂಕು ವಕ್ಕರಿಸಿದೆ. ಹೀಗಾಗಿ ಹೆಮ್ಮಾರಿ ಭಯದಿಂದ ವೃದ್ಧನ ಅಕ್ಕಪಕ್ಕದ ಬಹುತೇಕ ಮನೆಗಳಿಗೆ ಬೀಗ ಹಾಕಲಾಗಿದೆ. ಮನೆಗಳನ್ನು ಖಾಲಿ ಮಾಡಿಕೊಂಡು ಸಂಬಂಧಿಕರ ಮನೆಗೆ ನಿವಾಸಿಗಳು ತೆರಳಿದ್ದಾರೆ.

Published On - 3:09 pm, Sun, 28 June 20