ಕೊರೊನಾ ಸೋಂಕಿತನ ಅಂತ್ಯಕ್ರಿಯೆಗೆ ವಿರೋಧ, 12 ಗಂಟೆಯಿಂದ ಆ್ಯಂಬುಲೆನ್ಸ್‌ನಲ್ಲಿಯೇ ಇದೆ ಶವ

ಮಂಗಳೂರು: ಕೆಲ ಘಟನೆ ಹಾಗೂ ಘಳಿಗೆ ಕೆಟ್ಟದ್ದಾಗಿರುತ್ತೇ ವಿನಃ ಯಾರೂ ಮೂಲತಃ ಕೆಟ್ಟವರಿರೋಲ್ಲ ಅನ್ನೋ ಮಾತಿದೆ. ಇದು ಮಂಗಳೂರಿನಲ್ಲಿ ನಡೆದ ಘಟನೆ ನೋಡಿದ್ರೆ ನಿಜ ಅನಿಸುತ್ತೆ. ಯಾಕಂದ್ರೆ ಯಾರಾದರೂ ಸತ್ತರೆ ದಾರಿಯಲ್ಲಿ ಹೋಗುವವರು ಕೂಡಾ ಕೆಲವೊಮ್ಮೆ ಶವ ಸಾಗಿಸಲು ಹೆಗಲು ಕೊಡುತ್ತಾರೆ. ಆದ್ರೆ ಈಗ ಸತ್ತವ್ಯಕ್ತಿಯ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತವಾಗ್ತಿದೆ. ಇದಕ್ಕೆ ಕಾರಣ ಕೊರೊನಾ. ಹೌದು, ಕೊರೊನಾ ಸೋಂಕಿನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಸುರತ್ಕಲ್‌ ಬಳಿಯ ಇಡ್ಯಾ ಗ್ರಾಮದ 31 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. […]

ಕೊರೊನಾ ಸೋಂಕಿತನ ಅಂತ್ಯಕ್ರಿಯೆಗೆ ವಿರೋಧ, 12 ಗಂಟೆಯಿಂದ ಆ್ಯಂಬುಲೆನ್ಸ್‌ನಲ್ಲಿಯೇ ಇದೆ ಶವ
Follow us
Guru
| Updated By:

Updated on:Jun 28, 2020 | 4:30 PM

ಮಂಗಳೂರು: ಕೆಲ ಘಟನೆ ಹಾಗೂ ಘಳಿಗೆ ಕೆಟ್ಟದ್ದಾಗಿರುತ್ತೇ ವಿನಃ ಯಾರೂ ಮೂಲತಃ ಕೆಟ್ಟವರಿರೋಲ್ಲ ಅನ್ನೋ ಮಾತಿದೆ. ಇದು ಮಂಗಳೂರಿನಲ್ಲಿ ನಡೆದ ಘಟನೆ ನೋಡಿದ್ರೆ ನಿಜ ಅನಿಸುತ್ತೆ. ಯಾಕಂದ್ರೆ ಯಾರಾದರೂ ಸತ್ತರೆ ದಾರಿಯಲ್ಲಿ ಹೋಗುವವರು ಕೂಡಾ ಕೆಲವೊಮ್ಮೆ ಶವ ಸಾಗಿಸಲು ಹೆಗಲು ಕೊಡುತ್ತಾರೆ. ಆದ್ರೆ ಈಗ ಸತ್ತವ್ಯಕ್ತಿಯ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತವಾಗ್ತಿದೆ. ಇದಕ್ಕೆ ಕಾರಣ ಕೊರೊನಾ.

ಹೌದು, ಕೊರೊನಾ ಸೋಂಕಿನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಸುರತ್ಕಲ್‌ ಬಳಿಯ ಇಡ್ಯಾ ಗ್ರಾಮದ 31 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆದ್ರೆ ಆತನ ಗ್ರಾಮ ಇಡ್ಯಾದ ಮಸೀದಿ ಕಬರ್ ಗುಂಡಿಯಲ್ಲಿ ಮಳೆಯಿಂದಾಗಿ ನೀರು ತುಂಬಿಕೊಂಡಿದೆ. ಹೀಗಾಗಿ ಬೋಳಾರ ಬಳಿಯ ಮಸೀದಿ ಹತ್ತಿರ ಅಂತ್ಯಸಂಸ್ಕಾರ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆದ್ರೆ ಇದಕ್ಕೆ ಬೋಳಾರ ಮಸೀದಿ ಬಳಿಯ ಸ್ಥಳೀಯರಿಂದ ತೀವ್ರ ವಿರೋಧ‌ ವ್ಯಕ್ತವಾಗಿದೆ.

ಮೃತನ ಅಂತ್ಯಕ್ರಿಯೆಯನ್ನು ತಮ್ಮ ಪ್ರದೇಶದಲ್ಲಿ ಬೇಡ, ಬದಲು ಆತನ ಊರಾದ ಸುರತ್ಕಲ್ ಬಳಿಯ ಮಸೀದಿಯಲ್ಲೇ ದಫನ್ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಪರಿಣಾಮ ಬೇರೆಲ್ಲೂ ಜಾಗ ಇಲ್ಲ, ಹೀಗಾಗಿ ಕಳೆದ 3 ಗಂಟೆಯಿಂದ ಸ್ಥಳೀಯರ ಮನವೊಲಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಸ್ಥಳೀಯರ ವಿರೋಧ ಮತ್ತು ಅಂತ್ಯಕ್ರಿಯೆಯಲ್ಲಿನ ವಿಳಂಬದಿಂದಾಗಿ ಕಳೆದ 12 ಗಂಟೆಗಳಿಂದ ಮೃತನ ಶವ ಆ್ಯಂಬುಲೆನ್ಸ್​ನಲ್ಲಿಯೇ ಇದೆ.

Published On - 4:28 pm, Sun, 28 June 20

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ